Praveen Nettaru: ಹಿಂದೂ ಕಾರ್ಯಕರ್ತ ಪ್ರವೀಣ್ ಹತ್ಯೆಗೆ ಟ್ವಿಸ್ಟ್! 40 ನಿಮಿಷ ಕಾದು ರಕ್ತದೋಕುಳಿ ಹರಿಸಿದ್ರಾ ಕಿಲ್ಲರ್ಸ್?

ಮಧ್ಯರಾತ್ರಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರವೀಣ್ ಅವರ ಹತ್ಯೆ ಸಂದರ್ಭದಲ್ಲಿ ಜನೋತ್ಸವ ಕಾರ್ಯಕ್ರಮ ಸೂಕ್ತವಲ್ಲ ಹಾಗಾಗಿ ರದ್ದು ಮಾಡಲಾಗಿದೆ ಎಂದು ಹೇಳಿದರು.

Praveen Nettaru: ಹಿಂದೂ ಕಾರ್ಯಕರ್ತ ಪ್ರವೀಣ್ ಹತ್ಯೆಗೆ ಟ್ವಿಸ್ಟ್! 40 ನಿಮಿಷ ಕಾದು ರಕ್ತದೋಕುಳಿ ಹರಿಸಿದ್ರಾ ಕಿಲ್ಲರ್ಸ್?
ಹಿಂದೂ ಕಾರ್ಯಕರ್ತ ಪ್ರವೀಣ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jul 28, 2022 | 7:42 AM

ಬೆಂಗಳೂರು: ಹಿಂದೂ ಕಾರ್ಯಕರ್ತ ಪ್ರವೀಣ್ (Praveen Nettaru) ನನ್ನು ಮಂಗಳವಾರ (26-07-22) ಬರ್ಬರವಾಗಿ ಕೊಲೆ ಮಾಡಿದ್ದು, ನಿನ್ನೆ (ಜುಲೈ 27)ರಂದು ಅಂತ್ಯಕ್ರಿಯೆ ಕೂಡ ನೆರವೇರಿಸಲಾಗಿದೆ. ಸದ್ಯ ಪ್ರವೀಣ್​ ಹತ್ಯೆಗೆ ಟ್ವಿಸ್ಟ್ ಸಿಕ್ಕಿದ್ದು,  40 ನಿಮಿಷ ಕಾದು ರಕ್ತದೋಕುಳಿ ಹರಿಸಿದ್ರಾ ಕಿಲ್ಲರ್ಸ್ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ. ಕೊಲೆಗೂ ಮೊದಲು ಅದೊಂದು ಜಾಗದಲ್ಲೇ ಹಂತಕರು ಟೆಂಟ್ ಹಾಕಿದ್ದು, ಸಿಸಿಟಿವಿಯಲ್ಲಿ ಹಂತಕರ ಹೆಜ್ಜೆಗುರುತು ಸೆರೆಯಾಗಿದೆ. ಈ ಕುರಿತಾಗಿ ಟಿವಿ9 ಬಳಿ ಹಂತಕರ ಎಕ್ಸ್​ಕ್ಲೂಸಿವ್ ವಿಡಿಯೋ ಲಭ್ಯವಾಗಿದೆ. ಪ್ರವೀಣ್ ಮರ್ಡರ್​ಗೂ ಮೊದಲು ಹಂತಕರು ಭಯಾನಕ ಸಂಚು ರೂಪಿಸಿದ್ದು, ಪ್ರವೀಣ್​ ಚಿಕನ್ ಅಂಗಡಿಯಿಂದ 50 ಮೀ. ದೂರದಲ್ಲಿ 40 ನಿಮಿಷದವರೆಗೂ ಒಂದೇ ಜಾಗದಲ್ಲಿ ಬೈಕ್ ನಿಲ್ಲಿಸಿದ್ದರು. ರಾತ್ರಿ 8 ಗಂಟೆ 1 ನಿಮಿಷ 51 ಸೆಕೆಂಡ್​ಗೆ ಎಂಟ್ರಿ ಕೊಟ್ಟಿದ್ದು, 8 ಗಂಟೆ 1 ನಿಮಿಷ 57 ಸೆಕೆಂಡ್​ಗೆ 50 ಮೀ. ದೂರ ಸ್ಟಾಪ್ ಮಾಡಿದ್ದಾರೆ. 8 ಗಂಟೆ 33 ನಿಮಿಷಕ್ಕೆ ಅಂಗಡಿ ಮುಂದೆ ಹೋಗಿದ್ದು, ಚಿಕನ್ ಅಂಗಡಿ ಮುಂದೆ ಹೋಗಿ ಮತ್ತೆ ಜಾಗದಲ್ಲಿ ಸ್ಟಾಪ್ ಆಗಿದ್ದಾರೆ.

ಇದನ್ನೂ ಓದಿ: ಪ್ರವೀಣ್ ಹತ್ಯೆ: ಆರೋಪಿಗಳ ಬಂಧಿಸುವರೆಗೂ ವಿಶ್ರಮಿಸುವುದಿಲ್ಲ, ಅಗತ್ಯಬಿದ್ರೆ ಎನ್‌ಐಎ ತನಿಖೆಗೆ ವಹಿಸ್ತೇವೆ : ಸಿಎಂ ಬೊಮ್ಮಾಯಿ

8 ಗಂಟೆ 38 ನಿಮಿಷಕ್ಕೆ ಮತ್ತೆ ಅಂಗಡಿ ದಿಕ್ಕಿನತ್ತ ಹಂತಕರು ಸಾಗಿದ್ದು, 8.38 ರಿಂದ 8.40 ರ ಸಮಯದಲ್ಲಿ ಹತ್ಯೆ ನಡೆದಿರುವ ಸಾಧ್ಯತೆಯಿದ್ದು, 8 ಗಂಟೆ 40 ನಿಮಿಷಕ್ಕೆ ಅಂಗಡಿಯತ್ತ ಜನ ಓಡೋಡಿ ಬಂದಿದ್ದಾರೆ. ಸದ್ಯ 40 ನಿಮಿಷ ನಿಂತಿದ್ದ ಬೈಕ್ ಪತ್ತೆಗಾಗಿ ಬೆಳ್ಳಾರೆ ಠಾಣೆ ಪೊಲೀಸರು ಬೆನ್ನುಬಿದಿದ್ದು, ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದ್ದಾರೆ. ಅನುಮಾನಾಸ್ಪದ ಬೈಕ್, ಮೂವರಿಗಾಗಿ ಖಾಕಿ ತಲಾಶ್ ನಡೆಸಿದ್ದಾರೆ.

ಸರ್ಕಾರದ ಜನೋತ್ಸವ ಕಾರ್ಯಕ್ರಮ ರದ್ದು: ಸಿಎಂ ಬಸವರಾಜ ಬೊಮ್ಮಾಯಿ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಗದ್ದುಗೆ ಏರಿ ಮೂರು ವರ್ಷಗಳು ತುಂಬಿರುವ ನಡುವಲ್ಲೇ ಬಿಜೆಪಿ ಕಾರ್ಯಕರ್ತ ಪ್ರವೀಣ್ ಅವರ ಹತ್ಯೆ (Praveen Murder) ಸರ್ಕಾರಕ್ಕೆ ಆಘಾತ ನೀಡಿದೆ. ಅಲ್ಲದೆ, ಸರ್ಕಾರದ ವಿರುದ್ಧವೇ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದ ರಾಜ್ಯ ಬಿಜೆಪಿ ಸರ್ಕಾರ, ಇಂದು ಆಯೋಜಿಸಿದ್ದ ಜನೋತ್ಸವ ಕಾರ್ಯಕ್ರಮವನ್ನು ರದ್ದುಗೊಳಿಸಿದೆ. ಈ ಬಗ್ಗೆ ಮಧ್ಯರಾತ್ರಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಪ್ರವೀಣ್ ಅವರ ಹತ್ಯೆ ಸಂದರ್ಭದಲ್ಲಿ ಕಾರ್ಯಕ್ರಮ ಸೂಕ್ತವಲ್ಲ. ಹೀಗಾಗಿ ದೊಡ್ಡಬಳ್ಳಾಪುರದಲ್ಲಿ ಹಾಗೂ ವಿಧಾನಸೌಧದಲ್ಲಿ‌ ಹಮ್ಮಿಕೊಳ್ಳಲಾಗಿದ್ದ ಜನೋತ್ಸವ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ: ಟ್ವೀಟ್​ ಮಾಡಿ ಸಂತಾಪ ಸೂಚಿಸಿದ ಬಿಎಸ್​ ಯಡಿಯೂರಪ್ಪ

ನಿನ್ನೆ ರಾತ್ರಿಯಿಂದ ಪ್ರವೀಣನ ಹತ್ಯೆ ಸುದ್ದಿ ಬಂದ ಮೇಲೆ ಸಾಕಷ್ಟು ನೋವು, ಕಳವಳ ನನ್ನೊಳಗೆ ನಡೀತಿತ್ತು. ಪೊಲೀಸರಿಗೆ ಕೊಡಬೇಕಾದ ಸೂಚನೆಗಳನ್ನ ಕೊಟ್ಟಿದ್ದೆ. ಅಮಾಯಕ ಯುವಕನನ್ನ ಯೋಜನಾಬದ್ಧವಾಗಿ ಹತ್ಯೆಗೈದಿದ್ದು ಖಂಡನೀಯ. ಮಾತಿನಲ್ಲಿ ಖಂಡನೆಗಿಂತ ನಮ್ಮ ಮನಸ್ಸಿನಲ್ಲಿ‌ ಖಂಡನೆಯಿದೆ. ಒಬ್ಬ ಕಾರ್ಯಕರ್ತನ‌ ಕಟುಂಬ ಕಷ್ಟದಲ್ಲಿದ್ದಾಗ ರಾಜ್ಯಾಧ್ಯಕ್ಷರು ಹೋಗಿ ಸಾಂತ್ವನ ಹೇಳಿದ್ದು ಶ್ಲಾಘನೀಯ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು