Teachers Day: ಕೊರೊನಾ ಹೊಡೆತದಿಂದ ಸಂಬಳವೇ ಇಲ್ದೆ ಬೀದಿಗೆ ಬಿದ್ದ 90 ಸಾವಿರ ಶಿಕ್ಷಕರು
ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಎಲ್ಲರನ್ನೂ ತಲುಪಿಸುವ ಶಿಕ್ಷಕರಿಗೆ ಇಂದು ಹಬ್ಬದ ದಿನ. ಆದರೆ ಎಲ್ಲಾ ಶಿಕ್ಷಕರಲ್ಲೂ ಸಂತಸ ತರಬೇಕಾಗಿದ್ದ ಶಿಕ್ಷಕರ ದಿನಾಚರಣೆ, ಖಾಸಗಿ ಶಿಕ್ಷಕರ ಬದುಕಿಗೆ ಮಾತ್ರ ಕರಾಳ ದಿನವಾಗಿದೆ. ರಾಜ್ಯದಲ್ಲಿ ಕೊರೊನಾ ಹಾವಳಿಯಿಂದಾಗಿ ಎಲ್ಲಾ ಶಾಲಾ ಕಾಲೇಜುಗಳು ಬಂದ್ ಆಗಿವೆ. ಇದರಿಂದ ತಮ್ಮ ಬದುಕಿನ ನಿರ್ವಹಣೆಗಾಗಿ ತಿಂಗಳ ಸಂಬಳವನ್ನೇ ನಂಬಿಕೊಂಡಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಕೋವಿಡ್ ಹಿನ್ನೆಲೆಯಿಂದಾಗಿ ಖಾಸಗಿ ಶಿಕ್ಷಕರಿಗೆ 6 ತಿಂಗಳಿಂದ ಸಂಬಳ ಬಂದಿಲ್ಲ. ಇದರಿಂದ ಸುಮಾರು […]

ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಎಲ್ಲರನ್ನೂ ತಲುಪಿಸುವ ಶಿಕ್ಷಕರಿಗೆ ಇಂದು ಹಬ್ಬದ ದಿನ. ಆದರೆ ಎಲ್ಲಾ ಶಿಕ್ಷಕರಲ್ಲೂ ಸಂತಸ ತರಬೇಕಾಗಿದ್ದ ಶಿಕ್ಷಕರ ದಿನಾಚರಣೆ, ಖಾಸಗಿ ಶಿಕ್ಷಕರ ಬದುಕಿಗೆ ಮಾತ್ರ ಕರಾಳ ದಿನವಾಗಿದೆ.
ರಾಜ್ಯದಲ್ಲಿ ಕೊರೊನಾ ಹಾವಳಿಯಿಂದಾಗಿ ಎಲ್ಲಾ ಶಾಲಾ ಕಾಲೇಜುಗಳು ಬಂದ್ ಆಗಿವೆ. ಇದರಿಂದ ತಮ್ಮ ಬದುಕಿನ ನಿರ್ವಹಣೆಗಾಗಿ ತಿಂಗಳ ಸಂಬಳವನ್ನೇ ನಂಬಿಕೊಂಡಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.
ಕೋವಿಡ್ ಹಿನ್ನೆಲೆಯಿಂದಾಗಿ ಖಾಸಗಿ ಶಿಕ್ಷಕರಿಗೆ 6 ತಿಂಗಳಿಂದ ಸಂಬಳ ಬಂದಿಲ್ಲ. ಇದರಿಂದ ಸುಮಾರು 90 ಸಾವಿರ ಶಿಕ್ಷಕರ ಪರಿಸ್ಥಿತಿ ಅತಂತ್ರವಾಗಿದ್ದು, ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಈ ನಿರ್ಲಕ್ಷ್ಯ ಖಂಡಿಸಿ ಇಂದು ರಾಜ್ಯದ್ಯಾಂತ ಶಿಕ್ಷಕರಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ಜೊತೆಗೆ RTE ನೀಡುವ ಮೊದಲ ಕಂತಿನ ಬಾಕಿ ಹಣ ಬಹುತೇಕ ಸಂಸ್ಥೆಗಳಿಗೆ ಇನ್ನು ತಲುಪಿಯೇ ಇಲ್ಲ. ಆದರಿಂದ ಶಿಕ್ಷಕರ ಸದನದ ಮುಂದೆ ಕಪ್ಪು ಪಟ್ಟಿ ಧರಿಸಿ ಖಾಸಗಿ ಶಿಕ್ಷಕರು ಧರಣಿ ನಡೆಸುತ್ತಿದ್ದಾರೆ. ಜೊತೆಗೆ ಇಂದಿನ ಶಿಕ್ಷಕರ ದಿನಾಚರಣೆಯನ್ನು ಕರಾಳ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಕೊಲೆ, ಸುಲಿಗೆ, ಅಕ್ರಮ ಚಟುವಟಿಕೆಗಳೇ ತುಂಬಿದ್ದ ಗ್ರಾಮದಲ್ಲಿ ಈಗ ಶಿಕ್ಷಣ ಕ್ರಾಂತಿ! ಯಾವೂರದು?
Published On - 12:37 pm, Sat, 5 September 20




