AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಪ್ರಾರ್ಥನೆಯಿದ್ರೆ ಮರಳಿ ಬರುವೆ.. LoC ಯಿಂದ ಯೋಧನ ಮೊರೆ: ತಡವೇಕೆ, ಆಶೀರ್ವಾದ ಮಾಡಿ

ಕೊಡಗು: ದೇಶದ ವಿಚಾರದಲ್ಲಿ ನಿಂತಲ್ಲಿಯೆ ಪ್ರಾಣ ನೀಡಲು ಹಿಂಜರಿಯದ ಭಾರತೀಯ ಯೋಧರೆಂದರೆ ಇಡೀ ವಿಶ್ವವೇ ಎದ್ದು ನಿಂತು ಸಲಾಮ್​ ಹೊಡೆಯುತ್ತದೆ. ಈಗ ಅದೇ ಕೊಡಗಿನ ಯೋಧನೊಬ್ಬ ಭಾರತದ ಗಡಿಯಲ್ಲಿ ನಿಂತು ಮಾಡಿರುವ ವಿಡಿಯೋ ಒಂದು ಫುಲ್​ ವೈರಲ್ ಆಗಿದೆ. ಕೊಡಗಿನ ಸೋಮವಾರಪೇಟೆಯ ನಿವಾಸಿಯಾಗಿರುವ ಯೋಧನೊಬ್ಬ ಭಾರತದ ಗಡಿಯಾದ LOC ಬಳಿ ನಿಂತು ವೀಡಿಯೋ ಒಂದನ್ನು ಮಾಡಿದ್ದಾನೆ. ವಿಡಿಯೋದಲ್ಲಿ ತಾನೂ ಗಡಿಯಲ್ಲಿ ಬಾಂಬ್ ಪತ್ತೆ ದಳದ ಮುಖ್ಯಸ್ಥನಾಗಿ ಕರ್ತವ್ಯ ಮಾಡುತ್ತಿದ್ದು, ಸಮುದ್ರ ಮಟ್ಟದಿಂದ 22,000 ಅಡಿ ಎತ್ತರದಲ್ಲಿದ್ದೇನೆ ಎಂದು […]

ನಿಮ್ಮ ಪ್ರಾರ್ಥನೆಯಿದ್ರೆ ಮರಳಿ ಬರುವೆ.. LoC ಯಿಂದ ಯೋಧನ ಮೊರೆ: ತಡವೇಕೆ, ಆಶೀರ್ವಾದ ಮಾಡಿ
ಸಾಧು ಶ್ರೀನಾಥ್​
|

Updated on:Sep 05, 2020 | 11:03 AM

Share

ಕೊಡಗು: ದೇಶದ ವಿಚಾರದಲ್ಲಿ ನಿಂತಲ್ಲಿಯೆ ಪ್ರಾಣ ನೀಡಲು ಹಿಂಜರಿಯದ ಭಾರತೀಯ ಯೋಧರೆಂದರೆ ಇಡೀ ವಿಶ್ವವೇ ಎದ್ದು ನಿಂತು ಸಲಾಮ್​ ಹೊಡೆಯುತ್ತದೆ. ಈಗ ಅದೇ ಕೊಡಗಿನ ಯೋಧನೊಬ್ಬ ಭಾರತದ ಗಡಿಯಲ್ಲಿ ನಿಂತು ಮಾಡಿರುವ ವಿಡಿಯೋ ಒಂದು ಫುಲ್​ ವೈರಲ್ ಆಗಿದೆ.

ಕೊಡಗಿನ ಸೋಮವಾರಪೇಟೆಯ ನಿವಾಸಿಯಾಗಿರುವ ಯೋಧನೊಬ್ಬ ಭಾರತದ ಗಡಿಯಾದ LOC ಬಳಿ ನಿಂತು ವೀಡಿಯೋ ಒಂದನ್ನು ಮಾಡಿದ್ದಾನೆ. ವಿಡಿಯೋದಲ್ಲಿ ತಾನೂ ಗಡಿಯಲ್ಲಿ ಬಾಂಬ್ ಪತ್ತೆ ದಳದ ಮುಖ್ಯಸ್ಥನಾಗಿ ಕರ್ತವ್ಯ ಮಾಡುತ್ತಿದ್ದು, ಸಮುದ್ರ ಮಟ್ಟದಿಂದ 22,000 ಅಡಿ ಎತ್ತರದಲ್ಲಿದ್ದೇನೆ ಎಂದು ಯೋಧ ತಾನಿರುವ ಜಾಗದ ಚಿತ್ರಣ ಕಟ್ಟಿಕೊಟ್ಟಿದ್ದಾನೆ.

ಇನ್ನು ಪಾಕಿಸ್ತಾದ ಗಡಿಗೆ ಹತ್ತಿರ ಇರುವ ಈ LOC ಬಳಿ ತಾನು ಕರ್ತವ್ಯ ನಿರ್ವಹಿಸಲು ತೆರಳುತ್ತಿರುವುದಾಗಿ ಹೇಳಿರುವ ಯೋಧ, ಈ ಹಿಂದೆ ಆ ಜಾಗದಲ್ಲಿ ಕರ್ತವ್ಯ ನಿರ್ವಹಿಸಲು ಹೋಗಿದ್ದ ಇಬ್ಬರು ಸೈನಿಕರು ಆಯತಪ್ಪಿ ಪಾಕಿಸ್ತಾನದ ಗಡಿಯೊಳಗೆ ಬಿದ್ದಿದ್ದರಿಂದ ಪಾಕ್​ ಸೈನಿಕರು, ನಮ್ಮ ಸೈನಿಕರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾಗಿ ವಿಷಾದದಿಂದ ಹೇಳಿದ್ದಾನೆ.

ಇಂತಹ ಜಾಗಕ್ಕೆ ತೆರಳುತ್ತಿರುವ ನಾನು.. ಮತ್ತೆ ಜೀವಂತವಾಗಿ ವಾಪಾಸ್ ಬರುತ್ತೇನೊ, ಇಲ್ಲವೋ ತಿಳಿದಿಲ್ಲ. ಆದರೆ ನಿಮ್ಮ ಆಶೀರ್ವಾದ ಮತ್ತು ಪ್ರಾರ್ಥನೆ ಇದ್ದರೆ ಖಂಡಿತವಾಗಿಯೂ ಸುರಕ್ಷಿತವಾಗಿ ವಾಪಾಸ್ ಬರುತ್ತೇನೆ ಎಂದು ಕೆಚ್ಚೆದೆಯಿಂದ ಹೇಳಿದ್ದಾನೆ. ಈ ಯೋಧನಿಗೆ ನಿಮ್ಮದೊಂದು ಬೇಷರತ್ ಆಶೀರ್ವಾದ ಮತ್ತು ಪ್ರಾರ್ಥನೆ ಇರಲಿ

Published On - 10:57 am, Sat, 5 September 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು