ವಿಧಾನಸೌಧದಲ್ಲಿ ಪಾಕ್​ ಪರ ಘೋಷಣೆ ಕೇಸ್​: ಮೂವರು ಆರೋಪಿಗಳಿಗೆ ಜಾಮೀನು ಮಂಜೂರು

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಂಜೆ 39ನೇ ಎಸಿಎಂಎಂ ಕೋರ್ಟ್​ನಿಂದ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಇಬ್ಬರು ವ್ಯಕ್ತಿಗಳ ಶ್ಯೂರಿಟಿ ಪಡೆದು ಮೊಹಮದ್ ಶಫಿ ನಾಶಿಪುಡಿ, ಮುಜಾಮಿಲ್ ಮತ್ತು ಇಲ್ತಾಜ್​​ಗೆ ಜಾಮೀನು ನೀಡಲಾಗಿದೆ. ಎಫ್​ಎಸ್​ಎಲ್ ವರದಿಯಲ್ಲಿ ಘೋಷಣೆ ಕೂಗಿದ್ದು ಸಾಬೀತಾಗಿತ್ತು.

ವಿಧಾನಸೌಧದಲ್ಲಿ ಪಾಕ್​ ಪರ ಘೋಷಣೆ ಕೇಸ್​: ಮೂವರು ಆರೋಪಿಗಳಿಗೆ ಜಾಮೀನು ಮಂಜೂರು
ಪಾಕಿಸ್ತಾನ್​ ಪರ ಘೋಷಣೆ
Updated By: ಗಂಗಾಧರ​ ಬ. ಸಾಬೋಜಿ

Updated on: Mar 14, 2024 | 9:22 PM

ಬೆಂಗಳೂರು, ಮಾರ್ಚ್​​ 14: ವಿಧಾನಸೌಧದಲ್ಲಿ ಪಾಕ್ (Pakistan Zindabad) ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಂಜೆ 39ನೇ ಎಸಿಎಂಎಂ ಕೋರ್ಟ್​ನಿಂದ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಇಬ್ಬರು ವ್ಯಕ್ತಿಗಳ ಶ್ಯೂರಿಟಿ ಪಡೆದು ಮೊಹಮದ್ ಶಫಿ ನಾಶಿಪುಡಿ, ಮುಜಾಮಿಲ್ ಮತ್ತು ಇಲ್ತಾಜ್​​ಗೆ ಜಾಮೀನು ನೀಡಲಾಗಿದೆ. ಫೆಬ್ರವರಿ 27 ರಂದು ಆರೋಪಿಗಳು ಪಾಕ್ ಪರ ಘೋಷಣೆ ಕೂಗಿದ್ದರು. ರಾಜ್ಯಸಭಾ ಚುನಾವಣೆಯಲ್ಲಿ ನಾಸಿರ್ ಹುಸೇನ್ ಗೆಲುವಿನ ಬಳಿಕ ಆರೋಪಿಗಳು ಘೋಷಣೆ ಕೂಗಿದ್ದರು. ಎಫ್​ಎಸ್​ಎಲ್ ವರದಿಯಲ್ಲಿ ಘೋಷಣೆ ಕೂಗಿದ್ದು ಸಾಬೀತಾಗಿತ್ತು. ಬಳಿಕ ಮೂವರನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದರು.

ಪ್ರಕರಣ ಮುಚ್ಚಿ ಹಾಕುವ ಯತ್ನ

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಆರೋಪಿಗಳನ್ನ ರಕ್ಷಿಸಿ, ಫೆಬ್ರುವರಿ 27ರ ಮರುದಿನವೇ ಪ್ರಕರಣ ಮುಗಿಸಲು ಪೊಲೀಸರು ಯತ್ನಿಸಿದರಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿತ್ತು. ಯಾಕಂದ್ರೆ, ಆರೋಪಿಗಳ ಮೊಬೈಲ್​ನಲ್ಲಿದ್ದ ಡಾಟಾವನ್ನ ಕೂಡಲೇ ಡಿಲೀಟ್ ಮಾಡಲಾಗಿತ್ತು. ಕಾಂಗ್ರೆಸ್ ನಾಯಕರ ಜೊತೆಗಿದ್ದ ಫೋಟೋ, ವಿಡಿಯೋಗಳು, ಸಾಮಾಜಿಕ ಜಾಲತಾಣದ ಪ್ರೊಫೈಲ್ ಸೇರಿ ಎಲ್ಲವನ್ನೂ ಡಿಲೀಟ್ ಮಾಡಲಾಗಿದೆ ಅಂತಾ ಹೇಳಲಾಗಿತ್ತು. ಬಳಿಕ ಆರೋಪಿಗಳ ಮೊಬೈಲ್ ರಿಟ್ರೀವ್‌ಗೆ ಪೊಲೀಸರು ಮುಂದಾಗಿದ್ದರು. ಆದರೆ ಪೊಲೀಸರೇ ಡಾಟಾ ಡಿಲೀಟ್ ಮಾಡಿದ್ರಾ? ಆರೋಪಿಗಳೇ ಡಿಲೀಟ್ ಮಾಡಿದ್ರಾ ಅನ್ನೋ ಅನುಮಾನ ಹುಟ್ಟುಕೊಂಡಿತ್ತು.

ಇದನ್ನೂ ಓದಿ: ವಿಧಾನಸೌಧದಲ್ಲಿ ಕಾಂಗ್ರೆಸ್ ಕಾರ್ಯಕರ್ತನಿಂದ ಪಾಕ್​ ಪರ ಘೋಷಣೆ: ವಿಡಿಯೋ ನೋಡಿ

ಒಂದಲ್ಲ, ಬರೋಬ್ಬರಿ 2 ಸಲ ಶತ್ರು ರಾಷ್ಟ್ರದ ಪರ ಘೋಷಣೆ ಕೂಗಲಾಗಿದೆ ಎಂದು FSL ರಿಪೋರ್ಟ್​​ನಲ್ಲಿ ಸ್ಫೋಟಕ ಅಂಶ ಬಹಿರಂಗಗೊಂಡಿತ್ತು. FSL ವರದಿ ಪೊಲೀಸರ ಕೈ ಸೇರಿದ್ದು, ವರದಿಯಲ್ಲಿ ಆರೋಪಿತರು ಒಂದಲ್ಲ, ಬದಲಾಗಿ ಎರಡು ಬಾರಿ ಪಾಕ್ ಪರ ಘೋಷಣೆ ಕೂಗಿದ್ದಾರೆ ಅನ್ನೋದು ಖಚಿತವಾಗಿತ್ತು.

ಇದನ್ನೂ ಓದಿ: ಪಾಕ್ ಪರ ಘೋಷಣೆ ಪ್ರಕರಣ: FSL ವರದಿಯಲ್ಲಿ ಸತ್ಯ ಬಹಿರಂಗ, ಆರೋಪಿ ಬಂಧನಕ್ಕೆ ತಯಾರಿ

ಇದೆ ಪಾಕಿಸ್ತಾನ ಪರ ಘೋಷಣೆ ಎಂದು ಬಿಜೆಪಿ ನಾಯಕರು ಆರೋಪಿಸ್ತಿದ್ದರು. ಸಾಲು ಸಾಲು ಬಿಜೆಪಿಯ ನಾಯಕರು ಕಾಂಗ್ರೆಸ್ ಮೇಲೆ ಮುಗಿಬಿದ್ದು ವಾಗ್ದಾಳಿ ಮಾಡಿದ್ದರು. ಸರ್ಕಾರ ವಜಾ ಮಾಡುವಂತೆ ಆಗ್ರಹಿಸಿದ್ದರು. ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:08 pm, Thu, 14 March 24