ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರ ಹಿನ್ನೆಲೆ: ಪಾಕಿಸ್ತಾನಕ್ಕೆ ಹೋಗಿ ಬಂದಿದ್ನಾ ಪ್ರಮುಖ ಆರೋಪಿ?

|

Updated on: Mar 05, 2024 | 10:00 PM

ವಿಧಾನಸೌಧದಲ್ಲಿ ದೇಶದ್ರೋಹಿ ಘೋಷಣೆ ಕೂಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ತೀವ್ರಗೊಂಡಿದೆ. ಮಾರ್ಚ್ 6ರವರೆಗೆ ಕಸ್ಟಡಿಗೆ ಪಡೆದಿರೋ ವಿಧಾನಸೌಧ ಪೊಲೀಸರು, ಆರೋಪಿಗಳಾದ ಮೊಹಮ್ಮದ್ ಶಫಿ ನಾಶಿಪುಡಿ, ಮುನಾವರ್ ಅಹ್ಮದ್, ಮೊಹಮ್ಮದ್ ಇಲ್ತಾಜ್‌ ಹಿಸ್ಟರಿ ಕೆದಕುತ್ತಿದ್ದಾರೆ. ಹಾಗಾದ್ರೆ, ಈ ತ್ರಿಮೂರ್ತಿಗಳು ಯಾರು? ಇವರ ಹಿನ್ನೆಲೆ ಏನು? ಎನ್ನುವ ವಿವರ ಈ ಕೆಳಗಿನಂತಿದೆ.

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರ ಹಿನ್ನೆಲೆ: ಪಾಕಿಸ್ತಾನಕ್ಕೆ ಹೋಗಿ ಬಂದಿದ್ನಾ ಪ್ರಮುಖ ಆರೋಪಿ?
Follow us on

ಬೆಂಗಳೂರು, (ಮಾರ್ಚ್ 05): ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ (pro Pakistan slogans)ಕೂಗಿರುವುದು ಸರ್ಕಾರದ ಎಫ್​ಎಸ್​ಎಲ್ ವರದಿಯಲ್ಲಿ ದೃಢಪಟ್ಟಿದ್ದು, ಇದರ ಆಧಾರದ ಮೇಲೆ ವಿಧಾನಸೌಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮೊಹಮ್ಮದ್ ಶಫಿ ನಾಶಿಪುಡಿ, ಮುನಾವರ್ ಅಹ್ಮದ್ ಆರೋಪಿಗಳು. ಬಂಧಿತ ಆರೋಪಗಳ ಹಿನ್ನೆಲೆ ಏನು? ಎನ್ನುವುದು ನೋಡಿದರೆ ಇವರ್ಯಾರು ಸಾಮಾನ್ಯದವರಲ್ಲ. ಮೊಹಮ್ಮದ್ ಶಫಿ ನಾಶಿಪುಡಿ ಮೂಲತಃ ಬ್ಯಾಡಗಿಯ ಮೆಣಸಿನಕಾಯಿ ವ್ಯಾಪಾರಿಯಾಗಿದ್ದು, ಕೋಟ್ಯಂತರ ರೂ. ಆಸ್ತಿ ಹೊಂದಿದ್ದರೆ, ಮತ್ತೋರ್ವ ಆರೋಪಿ ಮೊಹಮ್ಮದ್ ಇಲ್ತಾಝ್, ಕಾಂಗ್ರೆಸ್ ನಾಯಕ ಪರಿಯಚವಿದ್ದು,  ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ನಡೆದಾಗ ಕೂಡ ರಾಹುಲ್ ಗಾಂಧಿ ಅವರ ಜೊತೆ ಪಾಲ್ಗೊಂಡಿದ್ದ.

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಶಂಕಿತ ಮೊಹಮ್ಮದ್ ಇಲ್ತಾಝ್ ಕಾಂಗ್ರೆಸ್ ನಾಯಕ ರಾಹುಲ್ ಅವರ ಅಪ್ತನಾಗಿದ್ದು, ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ನಡೆದಾಗ ಕೂಡ ರಾಹುಲ್ ಗಾಂಧಿ ಅವರ ಜೊತೆ ಪಾಲ್ಗೊಂಡಿದ್ದ. ಈ ಗಂಭೀರ ಪ್ರಕರಣದ ತನಿಖೆ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಈ ದೋಸ್ತಿಯೇ ಕಾರಣಾನಾ? ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಕರ್ನಾಟಕದ ಜನತೆಗೆ ಉತ್ತರಿಸಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ​ ಪರ ಘೋಷಣೆ: ಪ್ರಕರಣ ಮುಚ್ಚಿಹಾಕಲು ನಡೆದಿತ್ತಾ ಮಹಾ ಷಡ್ಯಂತ್ರ? ಈ ಅನುಮಾನಕ್ಕೆ ಕಾರಣಗಳಿವೆ

ಪಾಕಿಸ್ತಾನಕ್ಕೆ ಹೋಗಿ ಬಂದಿದ್ನಾ ಶಫಿ?

ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್‌ ಶಫಿ ನಾಶಿಪುಡಿಯ ಹಿನ್ನೆಲೆ ಚರ್ಚೆಗೆ ಗ್ರಾಸವಾಗಿದೆ. ಮೊಹಮ್ಮದ್‌ ಶಫಿ ನಾಶಿಪುಡಿ ಎರಡು ತಿಂಗಳ ಹಿಂದೆ ಅಷ್ಟೇ ಪಾಕಿಸ್ತಾನಕ್ಕೆ ಹೋಗಿಬಂದಿದ್ದ ಎಂದು ಬ್ಯಾಡಗಿ ತಾಲೂಕಿನ ಭಜರಂಗದ ಕಾರ್ಯಕರ್ತರು ಆರೋಪಿಸಿದ್ದಾರೆ. ಮೆಣಸಿನಕಾಯಿ ವ್ಯಾಪಾರ ಮಾಡುತ್ತಿದ್ದ ಶಫಿ ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌ ಅವರ ಸಂಬಂಧಿ ಎನ್ನಲಾಗಿದೆ.

ಶಫಿ ನಾಶಿಪುಡಿ ಮೂಲತಃ ಬ್ಯಾಡಗಿಯ ಮೆಣಸಿನಕಾಯಿ ವ್ಯಾಪಾರಿಯಾಗಿದ್ದು, ಈತನ ಕುಟುಂಬ ಕಳೆದ 50-60 ವರ್ಷಗಳಿಂದ ಮೆಣಸಿನಕಾಯಿ ವ್ಯಾಪಾರ ಮಾಡುತ್ತಾ ಬಂದಿದೆ. ಬ್ಯಾಡಗಿಯ ಮೋಟೆಬೆನ್ನೂರಿನಿಂದಲೇ ಎಲ್ಲ ವ್ಯವಹಾರಗಳನ್ನು ನಾಶಿಪುಡಿ ನಡೆಸುತ್ತಾ ಬಂದಿದ್ದು, ಮೋಟೆಬೆನ್ನೂರಿನಲ್ಲಿ ಕೋಲ್ಡ್‌ ಸ್ಟೋರೇಜ್‌, ಮೆಣಸಿನಕಾಯಿ ಕ್ವಾಲಿಟಿ ಖಾರದ ಪುಡಿ ಯಂತ್ರ ಸೇರಿ ಹಲವು ವ್ಯವಹಾರಗಳನ್ನು ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ.

ಯಾರು ಈ ಮುನ್ನಾವರ್ ಅಹಮದ್?

ಪಾಕಿಸ್ತಾನ ಪರ ಘೋಷಣೆ ಪ್ರಕರಣದ ಮತ್ತೋರ್ವ ಆರೋಪಿ ಮುನ್ನಾವರ್ ಅಹಮದ್, ಮೂಲತಃ ದಾವಣಗೆರೆ ನಿವಾಸಿಯಾಗಿದ್ದು. ಈತ ಕಳೆದ ಕೆಲವೇ ತಿಂಗಳ ಹಿಂದೆ ಬೆಂಗಳೂರು ಬಂದಿದ್ದ. ಸದ್ಯ ಕಾಂಗ್ರೆಸ್ ಪಾರ್ಟಿ ಯಲ್ಲಿ ಸೆಕೆಂಡ್ ಲೈನ್ ಲೀಡರ್ ರೀತಿ ತಿರುಗಾಡುತಿದ್ದ. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ, ಪ್ರತಿಭಟನೆಯಲ್ಲಿಯೂ ಭಾಗಿಯಾಗುತ್ತಿದ್ದ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ