ಧಾರವಾಡದಲ್ಲಿ ಪಿಎಸ್‌ಐ ಆಕಾಂಕ್ಷಿಗಳ ಪ್ರತಿಭಟನೆ; 545, 402 ಪಿಎಸ್‌ಐ ನೇಮಕಾತಿ ಪರೀಕ್ಷೆ ಏಕಕಾಲಕ್ಕೆ ನಡೆಸುವಂತೆ ಆಗ್ರಹ
545 ಮತ್ತು 402 ಪಿಎಸ್‌ಐ ನೇಮಕಾತಿ ಪರೀಕ್ಷೆ ಏಕಕಾಲಕ್ಕೆ ನಡೆಸುವಂತೆ ಆಗ್ರಹಿಸಿ ಧಾರವಾಡದಲ್ಲಿ ಅಭ್ಯರ್ಥಿಗಳು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.
ಧಾರವಾಡ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ (PSI recruitment examination) ಅಕ್ರಮ ನಡೆದು, ಸಾಕಷ್ಟು ಅಭ್ಯರ್ಥಿಗಳು ನೇಮಕಗೊಳ್ಳದೆ ದಿಕ್ಕೇ ತೋಚದಂತೆ ಕೂತಿದ್ದಾರೆ. ಈ ಅಭ್ಯರ್ಥಿಗಳು ಈಗ 545 ಮತ್ತು 402 ಪಿಎಸ್‌ಐ ನೇಮಕಾತಿ ಪರೀಕ್ಷೆ ಏಕಕಾಲಕ್ಕೆ ನಡೆಸುವಂತೆ ಆಗ್ರಹಿಸಿ ಧಾರವಾಡದಲ್ಲಿ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಧಾರವಾಡದ (Dharwad) ಪ್ರಮುಖ ರಸ್ತೆಗಳಲ್ಲಿ ರ್ಯಾಲಿ ಮಾಡುತ್ತಿದ್ದು, ಸಪ್ತಾಪುರ ಬಡಾವಣೆಯಿಂದ ಆರಂಭಗೊಂಡ ರ್ಯಾಲಿ, ಕಾಲೇಜ್ ರಸ್ತೆ ಮೂಲಕ ಆಲೂರು ವೃತ್ತಕ್ಕೆ ಆಗಮಿಸಿದೆ. ಈ ವೇಳೆ ಅಭ್ಯರ್ಥಿಗಳು ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ.
ಸರ್ಕಾರ ಈ ಹಿಂದೆ 545 ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ ನಡೆಸೋದಾಗಿ ಹೇಳಿತ್ತು. ಹೀಗಾಗಿ ಎರಡೂ ಪರೀಕ್ಷೆಗಳನ್ನು ಏಕಕಾಲಕ್ಕೆ ನಡೆಸುವಂತೆ ಅಭ್ಯರ್ಥಿಗಳಿಗೆ ಆಗ್ರಹಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:28 pm, Fri, 25 November 22