ಬೆಂಗಳೂರು: 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು (PSI Recruitment Scam) ನಡೆದು ಇಡೀ ಪೊಲೀಸ್ ವ್ಯವಸ್ಥೆಗೆ ಕಪ್ಪುಚುಕ್ಕೆಯಾಗಿರುವಾಗ ಅದೇ ಶಿಸ್ತುಬದ್ಧ ಪೊಲೀಸ್ ಇಲಾಖೆಯಲ್ಲಿ ಇದ್ದುಕೊಂಡೂ ಸ್ವಯಂ ಅಪರಾಧ ಮಾಡಿಕೊಂಡಿರುವ ಅಭ್ಯರ್ಥಿಯನ್ನು ಈ ಹಿಂದೆ ಆತ ಕಾನ್ಸ್ಟೇಬಲ್ ಆಗಿ ಸಲ್ಲಿಸುತ್ತಿದ್ದ ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿ, ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ. ಬೆಂಗಳೂರಿನ ವಿವೇಕನಗರ ಠಾಣೆಯ (Viveknagar constable) ಕಾನ್ಸ್ಟೇಬಲ್, ಹಾವೇರಿಯ (Haveri) ಬಸನಗೌಡ ಕರಿಬಸವನಗೌಡ ಸೇವೆಯಿಂದ ಅಮಾನತುಗೊಂಡವರು (Suspend). ಸದರಿ ಕಾನ್ಸ್ಟೇಬಲ್ ಬಸನಗೌಡ PSI ತಾತ್ಕಾಲಿಕ ನೇಮಕಾತಿ ಪಟ್ಟಿಯಲ್ಲಿ 27ನೇ Rank ನಲ್ಲಿ ಉತ್ತೀರ್ಣನಾಗಿದ್ದರು. ಅವರು ಮಾಡಿದ ಅಪರಾಧವೆಂದರೆ ಆಯ್ಕೆ ಆದೇಶ ಪ್ರತಿ ಅಧಿಕೃತವಾಗಿ ಕೈಗೆ ಸಿಗುವ ಮೊದಲೇ ಸಮವಸ್ತ್ರ ಧರಿಸಿ, ತಮ್ಮೂರಿನಲ್ಲಿ ಭಾಷಣ ಬಿಗಿದಿದ್ದರು.
ಕಾನ್ಸಟೇಬಲ್ ಹುದ್ದೆಗೆ ರಾಜೀನಾಮೆ ನೀಡದೆ ಪಿಎಸ್ಐ ಬಟ್ಟೆ ಧರಿಸಿದ್ದ, ಪೊಲೀಸ್ ನಿಯಮಾವಳಿಯ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. PSI ಸಮವಸ್ತ್ರ ಧರಿಸಿದ್ದ ಫೋಟೋ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಇಲಾಖೆಗೆ ಮುಜುಗರ ತಂದನೆಂದು ವಿವೇಕನಗರ ಠಾಣೆ ಪಿಸಿ ಹಾವೇರಿಯ ಬಸನಗೌಡ ಕರಿಬಸವನಗೌಡ ಸೇವೆಯಿಂದ ಅಮಾನತುಗೊಳಿಸಿ, ಕೇಂದ್ರ ವಿಭಾಗದ ಡಿಸಿಪಿ M.N.ಅನುಚೇತ್ ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಠಾಣೆಯಲ್ಲೇ ಇನ್ಸ್‌ಪೆಕ್ಟರ್ ಬರ್ತ್‌ಡೇ ಆಚರಣೆ!
ಚಾಮರಾಜನಗರದ ಪೂರ್ವ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆನಂದ್ ತಮ್ಮ ಅಧೀನ ಪೊಲೀಸ್ ಠಾಣೆಯಲ್ಲೇ ಬರ್ತ್‌ಡೇ ಆಚರಣೆ ಮಾಡಿದ್ದಾರೆ. ಶಿಸ್ತುಬದ್ಧ ಪೊಲೀಸ್ ಇಲಾಖೆಯಲ್ಲಿ ಸೇವೆಸಲ್ಲಿಸುವವರು ಪೊಲೀಸ್ ಠಾಣೆಯಲ್ಲಿ ಹುಟ್ಟುಹಬ್ಬ ಆಚರಿಸುವಂತಿಲ್ಲ. ಆದರೂ ಪೊಲೀಸ್ ಇಲಾಖೆಯ ಮೂಲ ನಿಯಮವನ್ನೇ ಗಾಳಿಗೆ ತೂರಿದ ಇನ್ಸ್‌ಪೆಕ್ಟರ್ ಆನಂದ್ ತಮ್ಮ ಹುಟ್ಟುಹಬ್ಬವನ್ನು ಚಾಮರಾಜನಗರದ ಪೂರ್ವ ಪೊಲೀಸ್ ಠಾಣೆಯಲ್ಲಿಯೇ ನಿನ್ನೆ ಗುರುವಾರ ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ.
ಇದನ್ನೂ ಓದಿ:
PSI Recruitment: ಪಿಎಸ್ಐ ನೇಮಕ ಆದೇಶ ಕೈ ಸೇರುವುದಕ್ಕೂ ಮುನ್ನವೇ ಹುಟ್ಟೂರಲ್ಲಿ ಸಮವಸ್ತ್ರ ಧರಿಸಿ ಸಂಭ್ರಮಿಸಿದ ಬಸನಗೌಡ!
Published On - 4:16 pm, Thu, 5 May 22