ವಿದ್ಯಾರ್ಥಿಗಳ ಹಿತದೃಷ್ಟಿಯಿಂದ.. ಪ್ರಥಮ PUCಗೆ ದಾಖಲಾತಿ ದಿನಾಂಕ ವಿಸ್ತರಣೆ

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಥಮ PUCಗೆ ದಾಖಲಾತಿ ದಿನಾಂಕದ ವಿಸ್ತರಣೆಯಾಗಿದೆ. ಪಿಯು ಮಂಡಳಿ ಫೆ.13ರವರೆಗೆ ಪ್ರವೇಶ ಪ್ರಕ್ರಿಯೆಯನ್ನು ವಿಸ್ತರಿಸಿದೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ.. ಪ್ರಥಮ PUCಗೆ ದಾಖಲಾತಿ ದಿನಾಂಕ ವಿಸ್ತರಣೆ
ಪದವಿ ಪೂರ್ವ ಶಿಕ್ಷಣ ಇಲಾಖೆ
KUSHAL V

|

Feb 05, 2021 | 8:02 PM

ಬೆಂಗಳೂರು: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಥಮ PUCಗೆ ದಾಖಲಾತಿ ದಿನಾಂಕದ ವಿಸ್ತರಣೆಯಾಗಿದೆ. ಪಿಯು ಮಂಡಳಿ ಫೆ.13ರವರೆಗೆ ಪ್ರವೇಶ ಪ್ರಕ್ರಿಯೆಯನ್ನು ವಿಸ್ತರಿಸಿದೆ.

ಪ್ರಥಮ, ದ್ವಿತೀಯ PU ದಾಖಲಾತಿಗೆ ನಾಳೆ ಕೊನೆ ದಿನವಾಗಿತ್ತು. ಫೆ.1ರಿಂದ ಪ್ರಥಮ PUC ತರಗತಿ ಆರಂಭವಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದಾಖಲಾತಿ ದಿನಾಂಕ ವಿಸ್ತರಣೆ ಮಾಡಲಾಗಿದೆ.

ಆದರೆ, ಕೇವಲ ಪ್ರಥಮ ಪಿಯು ಪ್ರವೇಶಕ್ಕೆ ಮಾತ್ರ ದಿನಾಂಕ ವಿಸ್ತರಣೆಮಾಡಲಾಗಿದ್ದು ದ್ವಿತೀಯ PUCಗೆ ದಾಖಲಾತಿ ದಿನಾಂಕ ವಿಸ್ತರಣೆಯಿಲ್ಲ. ಈ ಕುರಿತು, ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ರಾಜ್ಯ ಸರ್ಕಾರದ ದಿವ್ಯಾಂಗ ಹಾಗೂ ವಿಶೇಷಚೇತನ ಅಧಿಕಾರಿ, ನೌಕರರಿಗೆ ಸಿಕ್ತು ‘ವರ್ಕ್​ ಫ್ರಂ ಹೋಂ’ ಅವಕಾಶ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada