ಬೆಂಗಳೂರು; ಸರ್ಕಾರಿಯ ಪಿಯು ಅತಿಥಿ ಉಪನ್ಯಾಸಕರು ಬಹಿಷ್ಕಾರಕ್ಕೆ ನಿರ್ಧರಿಸಿದ್ದು, ಶಿಕ್ಷಣ ಇಲಾಖೆಗೆ ಶಾಕ್ ನೀಡಲು ಮುಂದಾಗಿದ್ದಾರೆ. ಈ ಬಗ್ಗೆ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ. 2021ರ ಏಪ್ರಿಲ್ 21ರಂದು ಸೇವೆಯಿಂದ ಅತಿಥಿ ಉಪನ್ಯಾಸಕರನ್ನು ಏಕಾಏಕಿ ಬಿಡುಗಡೆಗೊಳಿಸಲಾಗಿದೆ. ಸೇವೆಯಿಂದ ಬಿಡುಗಡೆಗೊಂಡ ಉಪನ್ಯಾಸಕರು ಅಧಿಕೃತವಾಗಿ ಮೌಲ್ಯಮಾಪನ ಮಾಡುವುದು ಹೇಗೆ? ಎಂದು ಪ್ರಶ್ನಿಸಿದೆ.
ಹಲವು ತಿಂಗಳಿನಿಂದ ವೇತನ ಕೂಡ ಬಿಡುಗಡೆ ಮಾಡಿಲ್ಲ. ಗೌರವ ಧನವನ್ನು ನೀಡಬೇಕು ರಾಜ್ಯದಲ್ಲಿ 1,835 ಸರ್ಕಾರಿ ಪಿಯು ಅತಿಥಿ ಉಪನ್ಯಾಸಕರಿದ್ದಾರೆ. ಮೌಲ್ಯಮಾಪನ ಮುಗಿಯುವವರೆಗೂ ಮುಂದುವರಿಸಿ, ಅತಿಥಿ ಉಪನ್ಯಾಸಕರಿಗೆ ಮಾಸಿಕ ಗೌರವ ಧನ ನೀಡಬೇಕು. ಇಲ್ಲದಿದ್ದರೆ ಮೌಲ್ಯಮಾಪನ ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಸರ್ಕಾರಿ ಪಿಯು ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ತಿಳಿಸಿದೆ.
ಬಹಿಷ್ಕಾರಕ್ಕೆ ಕಾರಣಗಳು
1. ಅತಿಥಿ ಉಪನ್ಯಾಸಕರನ್ನು ಏಪ್ರಿಲ್ 21 ರಿಂದ ಸೇವೆಯಿಂದ ಬಿಡುಗಡೆಗೊಳಿಸುವ ಮೂಲಕ ಪದವಿಪೂರ್ವ ಶಿಕ್ಚಣ ಇಲಾಖೆ ಅಮಾನವೀಯ ನಿರ್ಧಾರ ತೆಗೆದುಕೊಂಡಿದೆ.
2. ಕೊರೊನಾ ಸಂದರ್ಭದಲ್ಲಿ ಕಡಿಮೆ ವೇತನ ಮತ್ತು ಅಭದ್ರತೆಯಿಂದ ಭೋಧನೆ ಮಾಡಿದ್ದರೂ, ಶೈಕ್ಷಣಿಕ ವರ್ಷ ಪೂರ್ಣಗೊಳ್ಳುವ ಮೊದಲೆ ಸೇವೆಯಿಂದ ಬಿಡುಗಡೆಗೊಳಿಸಿದೆ.
3. ನೈತಿಕ ಜವಾಬ್ದಾರಿಯನ್ನು ನಿರ್ವಹಿಸಲು ಅಡ್ಡವಾಗಿರುವ ಸರ್ಕಾರದ ಅನೈತಿಕ ನಿರ್ಧಾರವನ್ನು ಧಿಕ್ಕರಿಸುತ್ತೇವೆ ಎಂದು ಸಂಘ ತಿಳಿಸಿದೆ. ಹೀಗೆ 5 ರಿಂದ 6 ಕಾರಣಗಳನ್ನು ಇಟ್ಟುಕೊಂಡು ಸಂಘ ಬಹಿಷ್ಕಾರಕ್ಕೆ ಮುಂದಾಗಿದೆ.
ಇದನ್ನೂ ಓದಿ
ಫೀಸ್ ವಸೂಲಿಗಾಗಿ ಅಡ್ಡದಾರಿ ಹಿಡಿದ ಖಾಸಗಿ ಶಿಕ್ಷಣ ಸಂಸ್ಥೆಗಳು
ಹೂಗಳಿಗೆ ಬೆಲೆಯಿಲ್ಲದೆ ಕಂಗಾಲಾದ ಚಿಕ್ಕಬಳ್ಳಾಪುರ ರೈತರು; ಮಾರುಕಟ್ಟೆಯಲ್ಲಿಯೇ ಹೂ ರಾಶಿ ಹಾಕಿ ಆಕ್ರೋಶ
(PU Guest Lecturers Association has decided to boycott)