ಬೆಂಗಳೂರು: ರಾಜ್ಯದಲ್ಲಿ ಫೆಬ್ರವರಿ 22ರಿಂದ 6-8ನೇ ತರಗತಿಗಳ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಗೈಡ್‌ಲೈನ್ಸ್ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಶಾಲಾ ತರಗತಿಗಳನ್ನು ಪುನರಾರಂಭಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಈ ಹಿಂದೆ ಕೈಗೊಂಡಿತ್ತು. ಆ ವೇಳೆ ಕರ್ನಾಟಕದಲ್ಲಿ ಕೊರೊನಾ ಆರ್ಭಟ ಕೊಂಚ ತಗ್ಗಿದ್ದ ಹಿನ್ನೆಲೆಯಲ್ಲಿ ಶಾಲೆಗಳನ್ನು ಪುನರಾರಂಭಿಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಆದರೆ ಈಗ, ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಹೆಮ್ಮಾರಿಯ ಭೀತಿ ಮತ್ತೆ ಶುರುವಾಗಿರುವ ಕಾರಣ ಸಾರ್ವಜನಿಕ ಶಿಕ್ಷಣ ಇಲಾಖೆ ಈ ಸುತ್ತೋಲೆ ಹೊರಡಿಸಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿರುವ ಮಾರ್ಗಸೂಚಿಯ ವಿವರ ಹೀಗಿದೆ
1. BBMP ಮತ್ತು ಕೇರಳ ಗಡಿಯ ಶಾಲೆಗಳಲ್ಲಿ 6 ಹಾಗೂ 7ನೇ ತರಗತಿಗಳಿಗೆ ವಿದ್ಯಾಗಮ
2. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 8ನೇ ತರಗತಿ ಮಾತ್ರ ನಡೆಸಲಾಗುವುದು
3. 6ರಿಂದ ಮೇಲಿನ ತರಗತಿ ಮಕ್ಕಳಿಗೆ ಮನೆಯಿಂದಲೇ ಊಟ ಕಳುಹಿಸಬೇಕು
4. ದೈಹಿಕ ಅಂತರ, ಶುಚಿತ್ವ & ಮಾಸ್ಕ್ ಧರಿಸುವುದು ಕಡ್ಡಾಯ.
5. 6ರಿಂದ 10ನೇ ತರಗತಿಗೆ ವಾರದಲ್ಲಿ 5 ದಿನ ಮಾತ್ರ ತರಗತಿ
6. ಬೆಳಗ್ಗೆ 10ರಿಂದ ಸಂಜೆ 4.30ರವರೆಗೆ 5 ದಿನ ಮಾತ್ರ ತರಗತಿ
7. ಶನಿವಾರದಂದು ಬೆಳಗ್ಗೆ 10.30ರಿಂದ 12.30ರವರೆಗೆ ತರಗತಿ
8. 6 ಹಾಗೂ 7ನೇ ತರಗತಿಗಳ ವಿದ್ಯಾಗಮ ವಾರದಲ್ಲಿ ಪ್ರತ್ಯೇಕ 3 ದಿನ ನಡೆಸಬೇಕು
9. ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಱಂಡಂ ಟೆಸ್ಟ್
10. ಶಾಲೆಗೆ ಬರುವ ಮಕ್ಕಳಿಗೆ ಪೋಷಕರ ಅನುಮತಿ ಪತ್ರ ಕಡ್ಡಾಯ
11. ಕೊವಿಡ್‌ನಿಂದ ಪೂರ್ಣ ಪ್ರಮಾಣದಲ್ಲಿ ಅಡ್ಮಿಶನ್ ನಡೆದಿಲ್ಲ. ಹಾಗಾಗಿ, ಮಕ್ಕಳ ದಾಖಲಾತಿ ಅವಧಿ ಮಾರ್ಚ್ 30ರವರೆಗೆ ವಿಸ್ತರಣೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸುತ್ತೋಲೆಯಲ್ಲಿ ಪ್ರಕಟಿಸಿದೆ.