ಕೊರೊನಾ ಸೋಂಕಿತ ಈ ವ್ಯಕ್ತಿ ಆರೋಗ್ಯ ಇಲಾಖೆಗೆ ತಲೆನೋವಾಗಿದ್ದಾನೆ

ಬೆಂಗಳೂರು: ಕೊರೊನಾ ಸೋಂಕು ತಗುಲಿಸಿಕೊಂಡಿರುವ 419ನೇ ಸೋಂಕಿತ ವ್ಯಕ್ತಿ ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದಾನೆ. ಬಿಹಾರ ಮೂಲದ ಈತ ವಿದೇಶಕ್ಕೂ ಹೋಗಿಲ್ಲ, ದೆಹಲಿಗೂ ಹೋಗಿ ಬಂದಿಲ್ಲ. ಆದರೂ ಹೇಗೆ ಕೊರೊನಾ ಸೋಂಕು ಬಂತೆಂಬುದೇ ಟೆನ್ಷನ್​ ಆಗಿದೆ. ಮೊಬೈಲ್ ಕರೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಮೂಲಕ ಪತ್ತೆ ಹಚ್ಚಲು ಪೊಲೀಸರೂ ನೆರವಾಗುತ್ತಿದ್ದಾರೆ. ಆದ್ರೆ ಈ 419ನೇ ಸೋಂಕಿತ ವ್ಯಕ್ತಿ ಮೊಬೈಲ್ ಫೋನ್‌ ಬಳಸುತ್ತಿರಲಿಲ್ಲ. ಆತ ಕೆಲಸ ಮಾಡುತ್ತಿದ್ದ ಮಂಗಮ್ಮನಪಾಳ್ಯದ ಗುಜರಿ ಅಂಗಡಿ ಮಾಲೀಕ ಈಗ ನಾಪತ್ತೆಯಾಗಿದ್ದಾನೆ. 419ನೇ ಸೋಂಕಿತ […]

ಕೊರೊನಾ ಸೋಂಕಿತ ಈ ವ್ಯಕ್ತಿ ಆರೋಗ್ಯ ಇಲಾಖೆಗೆ ತಲೆನೋವಾಗಿದ್ದಾನೆ
ಸಾಧು ಶ್ರೀನಾಥ್​

Updated on: Apr 28, 2020 | 5:05 PM

ಬೆಂಗಳೂರು: ಕೊರೊನಾ ಸೋಂಕು ತಗುಲಿಸಿಕೊಂಡಿರುವ 419ನೇ ಸೋಂಕಿತ ವ್ಯಕ್ತಿ ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದಾನೆ. ಬಿಹಾರ ಮೂಲದ ಈತ ವಿದೇಶಕ್ಕೂ ಹೋಗಿಲ್ಲ, ದೆಹಲಿಗೂ ಹೋಗಿ ಬಂದಿಲ್ಲ. ಆದರೂ ಹೇಗೆ ಕೊರೊನಾ ಸೋಂಕು ಬಂತೆಂಬುದೇ ಟೆನ್ಷನ್​ ಆಗಿದೆ.

ಮೊಬೈಲ್ ಕರೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಮೂಲಕ ಪತ್ತೆ ಹಚ್ಚಲು ಪೊಲೀಸರೂ ನೆರವಾಗುತ್ತಿದ್ದಾರೆ. ಆದ್ರೆ ಈ 419ನೇ ಸೋಂಕಿತ ವ್ಯಕ್ತಿ ಮೊಬೈಲ್ ಫೋನ್‌ ಬಳಸುತ್ತಿರಲಿಲ್ಲ. ಆತ ಕೆಲಸ ಮಾಡುತ್ತಿದ್ದ ಮಂಗಮ್ಮನಪಾಳ್ಯದ ಗುಜರಿ ಅಂಗಡಿ ಮಾಲೀಕ ಈಗ ನಾಪತ್ತೆಯಾಗಿದ್ದಾನೆ.

419ನೇ ಸೋಂಕಿತ ವ್ಯಕ್ತಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಈಗಾಗಲೇ ಎರಡು ಬಾರಿ ವೆಂಟಿಲೇಟರ್​ನಲ್ಲಿಟ್ಟು ಚಿಕಿತ್ಸೆ ನೀಡಲಾಗಿದೆ. ಲಾಕ್ ಡೌನ್ ಇದ್ದರೂ ಕೆಲಸಕ್ಕೆ ಬರಲು ಆತನ ಮಾಲೀಕ ಒತ್ತಾಯ ಮಾಡಿದ್ದ ಎಂದು ಆರೋಪಿಸಿ, ಮಾಲೀಕನ ಬಗ್ಗೆ ಈ ಬಿಹಾರಿ ಸೋಂಕಿತ ವ್ಯಕ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾನೆ

ಜ್ವರ, ಕೆಮ್ಮು, ಉಸಿರಾಟ ಸಮಸ್ಯೆ ಎಂದರೂ ಮಾಲೀಕ ಕೆಲಸಕ್ಕೆ ಬರಲು ಒತ್ತಾಯಿಸಿದ್ದನಂತೆ. 13 ದಿನಗಳ ಕಾಲ ಗುಜರಿಯಲ್ಲಿ ಕೆಲಸ ಮಾಡಿದ್ದ ಮಾಹಿತಿಯಿದೆ. ತನ್ನಲ್ಲಿ ಕೆಲಸ ಮಾಡುತ್ತಿದ್ದವನಿಗೆ ಸೋಂಕು ತಗುಲಿರುವ ವಿಚಾರ ತಿಳಿಯುತ್ತಿದಂತೆ ಮಾಲೀಕ ಎಸ್ಕೇಪ್ ಆಗಿದ್ದಾನೆ. ಈ ಹಿನ್ನೆಲೆಯಲ್ಲಿ ಮಾಲೀಕನಿಗಾಗಿ ಶೋಧ ತೀವ್ರಗೊಂಡಿದೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us