ಅಡುಗೆ ಮನೆಯೇ ಇವುಗಳ ಟಾರ್ಗೆಟ್! ಕೋತಿಗಳ ಹಾವಳಿಗೆ ಬೇಸತ್ತು ಊರು ಬಿಡಲು ಮುಂದಾದ ಗ್ರಾಮಸ್ಥರು

ನೇರವಾಗಿ ಅಡುಗೆ ಮನೆಗೆ ದಾಳಿ ಮಾಡಿ ಆಹಾರ ವಸ್ತುಗಳನ್ನು ಹೊತ್ತೊಯ್ಯುತ್ತಿವೆ. ಜನರನ್ನು ನೆಮ್ಮದಿಯಾಗಿ ಬದಕಲೂ ಬಿಡದೆ ಕಾಟ ಕೊಡುತ್ತಿವೆ. ಈ ನಿಟ್ಟಿನಲ್ಲಿ ದೂರುಗಳನ್ನು ಕೊಟ್ಟರೂ ಅರಣ್ಯ ಇಲಾಖೆ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಈವರೆಗೆ ಕ್ರಮಕೈಗೊಳ್ಳದ ಹಿನ್ನೆಲೆ ರಾಯಚೂರು ತಾಲೂಕಿನ ಪಲವಲದೊಡ್ಡಿ ಗ್ರಾಮಸ್ಥರು ಊರು ಬಿಡಲು ನಿರ್ಧರಿಸಿದ್ದಾರೆ.

ಅಡುಗೆ ಮನೆಯೇ ಇವುಗಳ ಟಾರ್ಗೆಟ್! ಕೋತಿಗಳ ಹಾವಳಿಗೆ ಬೇಸತ್ತು ಊರು ಬಿಡಲು ಮುಂದಾದ ಗ್ರಾಮಸ್ಥರು
ಊರಿನಲ್ಲಿ
Follow us
TV9 Web
| Updated By: Rakesh Nayak Manchi

Updated on:Aug 23, 2022 | 10:22 AM

ರಾಯಚೂರು: ನೇರವಾಗಿ ಅಡುಗೆ ಮನೆಗೆ ದಾಳಿ ಮಾಡಿ ಆಹಾರ ವಸ್ತುಗಳನ್ನು ಹೊತ್ತೊಯ್ಯುತ್ತಿರುವ ಕೋತಿಗಳ ಹಾವಳಿಗೆ ಬೇಸತ್ತ ತಾಲೂಕಿನ ಪಲವಲದೊಡ್ಡಿ ಗ್ರಾಮದ ಜನರು ಊರು ಬಿಡಲು ಮುಂದಾಗಿದ್ದಾರೆ. ನಿರಂತರವಾದ ಕೋತಿಗಳ ಹಾವಳಿಯಿಂದ ಬೇಸತ್ತು ಹಲವಾರು ಬಾರಿ ದೂರು ಕೊಟ್ಟರೂ ಅರಣ್ಯ ಇಲಾಖೆ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಈವರೆಗೆ ಕ್ರಮಕೈಗೊಳ್ಳದ ಹಿನ್ನೆಲೆ ಊರನ್ನು ತೊರೆಯಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಪಲವಲದೊಡ್ಡಿ ಗ್ರಾಮದಲ್ಲಿ ಕೋತಿಗಳ ಹಿಂಡೇ ಇದ್ದು, ಜನಸಂಖ್ಯೆಗಿಂತಿ ಕೋತಿಗಳ ಸಂಖ್ಯೆಯೇ ಹೆಚ್ಚಾಗಿದೆ. ಅದರಂತೆ ಆಹಾರವನ್ನು ಹುಡುಕುತ್ತಾ ಗ್ರಾಮದ ನಿವಾಸಿಗಳ ಮನೆಗೆ ನುಗ್ಗಿ ನೇರವಾಗಿ ಅಡುಗೆ ಮನೆಗೆ ದಾಳಿ ಇಟ್ಟು ಆಹಾರ ವಸ್ತುಗಳನ್ನು ಹೊತ್ತೊಯ್ಯುತ್ತಿವೆ. ಇದರಿಂದಾಗಿ ಈ ಗ್ರಾಮದ ಜನರು ನೆಮ್ಮದಿಯ ಜೀವನವನ್ನು ನಡೆಸಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ.

ಕೋತಿಗಳ ಉಪಟಳ ಒಂದಾ? ಎರಡ?

ಕಳೆದೊಂದು ವರ್ಷದಿಂದ ಈ ಗ್ರಾಮದ ಜನರ ಪಾಡು ದೇವರೇ ಬಲ್ಲ. ನೆಮ್ಮದಿಂದ ಕುಳಿತುಕೊಳ್ಳುವಂತಿಲ್ಲ, ಮಲಗುವಂತೆಯೂ ಇಲ್ಲ, ಅಡುಗೆ ಮನೆಗೆ ನುಗ್ಗಿ ಆಹಾರ ಹೊತ್ತೊಯ್ಯುವುದರ ಜೊತೆಗೆ ಮಕ್ಕಳು, ಮಹಿಳೆಯರ ಮೈ ಮೇಲೆ ಬಿದ್ದು ಕಾಟ ಕೊಡುತ್ತಿವೆ. ಮನೆಗೆ ನುಗ್ಗಿದ ಕೂತಿಗಳನ್ನು ಓಡಿಲು ಮುಂದಾದರೆ ಅಂತಹವರ ಮೇಲೆಯೇ ದಾಳಿ ನಡೆಸಿ ಕಚ್ಚಿ ಓಡಿ ಹೋಗುತ್ತಿವೆ. ಮನೆಯಲ್ಲಿ ಟಿವಿ ಹಾಕಿ ಮನರಂಜನೆ ಪಡೆಯುವ ಎಂದು ಕೂರುವ ಎಂದರೂ ಡಿಸ್ ಮೇಲೆ, ಡಿಶ್ ವಯರ್ ಮೇಲೆ ಕುಳಿತುಕೊಂಡು ತೊಂದರೆ ಕೊಡಲು ಪ್ರಾರಂಭಿಸುತ್ತವೆ. ಮುಂದುವರಿದು ವಿದ್ಯುತ್ ಕಂಬಳ ಮೇಲೆ ಕುಳಿತುಕೊಂಡು ತೊಂದರೆ ಕೊಡುತ್ತಿವೆ. ಮಕ್ಕಳು ಕೈಯಲ್ಲಿ ತಿಂಡಿ ತಿನಿಸುವ ಹಿಡಿದುಕೊಂಡಿದ್ದರೆ ಮಕ್ಕಳನ್ನು ಅಟ್ಟಾಡಿಸಿ ಅವರ ಕೈಯಲ್ಲಿರುವ ತಿಂಡಿಗಳನ್ನು ಕಸಿದು ತಿನ್ನುತ್ತಿವೆ. ಕೋತಿಗಳ ನಿರಂತರ ಉಪಟಳದಿಂದಾಗಿ ಜನರು ನಿತ್ಯವೂ ಬಾಗಿಲು ಹಾಕಿ ಮನೆಯೊಳಗೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೋತಿಗಳ ನಿರಂತರ ಹಾವಳಿಯಿಂದ ಬೇಸತ್ತು ಹಲವು ಬಾರಿ ದೂರುಗಳನ್ನು ಕೊಟ್ಟರೂ ಅರಣ್ಯ ಇಲಾಖೆ, ಜಿಲ್ಲಾ ಪಂಚಾಯತಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇಷ್ಟಕ್ಕೂ ಸುಮ್ಮನಾಗದ ಜನರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೊರೆಯೂ ಹೋಗಿದ್ದಾರೆ. ಅದರಂತೆ ಸರಣಿ ನೋಟಿಸ್ ಜಾರಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಅದಾಗ್ಯೂ, ಕೋತಿಗಳ ವಿರುದ್ಧ ತೋಳ್ಬಲ ತೋರಿಸಲೂ ಆಗದೆ, ಕಾನೂನಾತ್ಮಕವಾಗಿ ಸ್ಥಳೀಯರ ಸರ್ಕಾರಿ ಆಡಳಿತದ ಮೂಲಕವೂ ನ್ಯಾಯ ಪಡೆಯಲು ಸಾಧ್ಯವಾಗದಿರುವ ಹಿನ್ನೆಲೆ ಊರಿನ ಜನರು ಗ್ರಾಮವನ್ನು ತೊರೆಯಲು ಮುಂದಾಗಿದ್ದಾರೆ. ಅಲ್ಲದೆ ಕೊನೆಯ ಪ್ರಯತ್ನವಾಗಿ ನ್ಯಾಯಾಲಯದ ಮೆಟ್ಟಿಲು ಕೂಡ ಹತ್ತಲು ಮುಂದಾಗಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:01 am, Tue, 23 August 22

Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ