ಹಿಂದೂ ಮುಸ್ಲಿಂ ಭಾವೈಕ್ಯತೆ ಸಂದೇಶ ಸಾರುತ್ತಿದ್ದ ಅಹಮದೀಯ ಮೌಲ್ವಿ ಮೇಲೆ ಇತರೆ ಮುಸ್ಲಿಂ ವ್ಯಕ್ತಿಗಳಿಂದ ಹಲ್ಲೆ
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ದೇವತಗಲ್ ಗ್ರಾಮದಲ್ಲಿ ಮುಸ್ಲಿಂನ ಅಹಮದೀಯ ತತ್ವ ಪ್ರಚಾರಕ್ಕೆ ವಿರೋಧ ವ್ಯಕ್ತಪಡಿಸಿ ಮುಸ್ಲಿಂ ಪ್ರಮುಖ ಪಂಗಡಗಳ ಕೆಲವು ವ್ಯಕ್ತಿಗಳು ಹಲ್ಲೆ ನಡೆಸಿ ಪ್ರಚಾರ ಮಾಡದಂತೆ ಅಹಮದೀಯ ಮೌಲ್ವಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಹಿಂದೂ ಮುಸ್ಲಿಂ ಭಾವೈಕ್ಯತೆ ಸಂದೇಶ ಸಾರುತ್ತಿದ್ದ ಅಹಮದೀಯ ಮೌಲ್ವಿ ಖಾಜಿ ಮೊಹಮ್ಮದ್ ರಫಿ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಲಾಗಿದೆ.
ರಾಯಚೂರು, ಫೆ.15: ಮುಸ್ಲಿಂ (Muslim) ಪ್ರಮುಖ ಪಂಗಡಗಳ ಕೆಲವರು ಮುಸ್ಲಿಂನ ಅಹಮದೀಯರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ರಾಯಚೂರು (Raichur) ಜಿಲ್ಲೆ ದೇವದುರ್ಗ ತಾಲೂಕಿನ ದೇವತಗಲ್ ಗ್ರಾಮದಲ್ಲಿ ಘಟನೆ ನಡೆದಿದೆ. ವಿಜಯನಗರ ಜಿಲ್ಲೆ ಹೊಸಪೇಟೆಯಿಂದ ಬಂದು ದೇವದುರ್ಗ ತಾಲೂಕಿನಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆ ಸಂದೇಶ ಸಾರುತ್ತಿದ್ದ ಅಹಮದೀಯ ಮೌಲ್ವಿ ಖಾಜಿ ಮೊಹಮ್ಮದ್ ರಫಿ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಲಾಗಿದೆ.
ಮುಸ್ಲಿಂನ ಅಹಮದೀಯ ತತ್ವ ಪ್ರಚಾರಕ್ಕೆ ವಿರೋಧ ವ್ಯಕ್ತಪಡಿಸಿ ಮುಸ್ಲಿಂ ಪ್ರಮುಖ ಪಂಗಡಗಳ ಕೆಲವು ವ್ಯಕ್ತಿಗಳು ಹಲ್ಲೆ ನಡೆಸಿ ಪ್ರಚಾರ ಮಾಡದಂತೆ ಅಹಮದೀಯ ಮೌಲ್ವಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಈ ವೇಳೆ ಮುಸ್ಲಿಂ ಪ್ರಮುಖ ಪಂಗಡಗಳ ಹಿರಿಯರು ಹಲ್ಲೆ, ಹಿಂಸಾಚಾರ ಮಾಡದಂತೆ ಯುವಕರಿಗೆ ಸಲಹೆ ನೀಡಿದ್ದಾರೆ. ಆಗ ಪ್ರಚಾರಕ್ಕೆ ಬಂದ ಅಹಮದೀಯರನ್ನು ಬಿಟ್ಟು ಕಳಿಸಲಾಗಿದೆ. ಆದರೆ ಮಸೀದಿಗಳಲ್ಲಿ ಮತ್ತು ಮುಸ್ಲಿಂ ಬಡಾವಣೆಯಲ್ಲಿ ಅಹಮದೀಯರು ಕಂಡರೇ ಮಾಹಿತಿ ನೀಡುವಂತೆ ಕರೆ ನೀಡಲಾಗಿದೆ. ಈ ಬಗ್ಗೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಅಹಮದೀಯರು ಈ ಬಗ್ಗೆ ಎಸ್ಪಿ ನಿಖಿಲ್.ಬಿಗೂ ದೂರು ನೀಡಿದ್ದಾರೆ.
ಇದನ್ನೂ ಓದಿ: ಶ್ರೀಶೈಲಕ್ಕೆ ಹೊರಟ್ಟಿದ್ದವ ಅರ್ಧಕ್ಕೆ ಹಿಂತಿರುಗಿ ಬಂದು ಬಾಗಲಕೋಟೆಯಲ್ಲಿ ವಿಶಿಷ್ಟ ಗುಂಪಿನ ರಕ್ತ ದಾನ ಮಾಡಿದ ಯುವಕ