ಊಬರ್​​, ಓಲಾ ಆಟೋಗಳಿಗೆ ಅನುಮತಿ ನೀಡಿಲ್ಲ: ಸಾರಿಗೆ ಸಚಿವ ಬಿ ಶ್ರೀರಾಮುಲು

ಊಬರ್​​, ಓಲಾ ಆಟೋಗಳಿಂದ ಹೆಚ್ಚು ಹಣ ವಸೂಲಿ ವಿಚಾರವಾಗಿ ಊಬರ್​​, ಓಲಾ ಕಂಪನಿಯವರನ್ನು ಕರೆದು ಸಭೆ ಮಾಡುತ್ತೇವೆ ಎಂದು ಮಂತ್ರಾಲಯದಲ್ಲಿ ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.

ಊಬರ್​​, ಓಲಾ ಆಟೋಗಳಿಗೆ ಅನುಮತಿ ನೀಡಿಲ್ಲ: ಸಾರಿಗೆ ಸಚಿವ ಬಿ ಶ್ರೀರಾಮುಲು
ಸಚಿವ ಬಿ ಶ್ರೀರಾಮುಲು
Follow us
TV9 Web
| Updated By: ವಿವೇಕ ಬಿರಾದಾರ

Updated on:Oct 11, 2022 | 8:54 PM

ರಾಯಚೂರು: ಊಬರ್ (Uber) , ಓಲಾ (Ola) ಆಟೋಗಳಿಂದ ಹೆಚ್ಚು ಹಣ ವಸೂಲಿ ವಿಚಾರವಾಗಿ ಊಬರ್​​, ಓಲಾ ಕಂಪನಿಯವರನ್ನು ಕರೆದು ಸಭೆ ಮಾಡುತ್ತೇವೆ. ತಪ್ಪು ಇದ್ದರೆ ಸರಿ ಮಾಡಿಕೊಳ್ಳಲು ಸೂಚನೆ ನೀಡುತ್ತೇವೆ. ಊಬರ್​​, ಓಲಾ ಆಟೋಗಳಿಗೆ ಯಾವುದೇ ಅನುಮತಿ ನೀಡಿಲ್ಲ. ಆದರೆ ಕಾರ್-ಟ್ಯಾಕ್ಸಿಗಳಿಗೆ ಅನುಮತಿ ನೀಡಲಾಗಿದೆ  ಎಂದು ಮಂತ್ರಾಲಯದಲ್ಲಿ ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu) ಹೇಳಿದ್ದಾರೆ.  ಊಬರ್​​, ಓಲಾ ಆಟೋಗಳಿಂದ ಹೆಚ್ಚು ಹಣ ವಸೂಲಿ ಬಗ್ಗೆ ದೂರು ಬಂದಿವೆ. ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗಬಾರದು. ಸಾಮಾನ್ಯ ಆಟೋಗಳ ಮಾದರಿಯಲ್ಲೇ ಹಣ ಪಡೆಯಬೇಕು. ಇದು ಮತ್ತೆ ಪುನರಾವರ್ತನೆಯಾದರೆ ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಓಲಾ, ಊಬರ್​ ಆಟೋ ಚಾಲಕರು  ಒಂದು ಕಿಮೀಗೆ 300, 400, 500 ರೂ, ಎರಡು ಕಿಮೀ ಗೆ 700 ರೂ. ಬಾಡಿಗೆ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಓಲಾ, ಊಬರ್ ಅಸೊಶಿಯೇಶನ್ ನಲ್ಲಿದ್ದೋರು, ಅದರಲ್ಲಿ ಎಂಪ್ಲಾಯ್ಮೆಂಟ್ ಆದೋರು ಬೇರೆ.  ಸಾಮಾನ್ಯ ಆಟೋಗಳಲ್ಲಿ ಸಮಸ್ಯೆಯಿಲ್ಲ, ಆದರೆ ಓಲಾ, ಊಬರ್ ಆಟೋಗಳದ್ದು ಮಾತ್ರ ಸಮಸ್ಯೆ ಇದೆ ಎಂದರು.

ಕಾರ್ ಪರ್ಷಿಷನ್ ತಗೊಂಡು, ಆಟೋ ಹೇಗೆ ಓಡಿಸುತ್ತಿದ್ದಾರೆ. ಓಲಾ, ಊಬರ್ ಸಂಸ್ಥೆಗಳು ಕಾರ್ ಮಾತ್ರ ಓಡಾಡಿಸಬೇಕು. ಆಟೋ ಓಡಿಸಿ ಹೆಚ್ಚಿನ ದರ ಒಪ್ಪಲ್ಲ. ಮಾಮೂಲು ಆಟೋಗಳಂತೆ‌ ಚಾರ್ಜ್ ಮಾಡಬೇಕು. ಏರ್ಪೋರ್ಟ್ ನಿಂದ ಸಿಟಿಗೆ ಹೋಗೊಕೆ 700 ರೂ ಬಾಡಿಗೆ ತೆಗೆದುಕೊಳ್ಳುತ್ತಾರೆ. ಓಲಾ, ಊಬರ್ ಆಟೋ ಬಂದ್ ಆದರೆ, ಸಾಮಾನ್ಯ ಆಟೋಗಳು ಬಂದ್ ಆಗುತ್ತವೆ ಅಂತ ಇತರೇ ಸಾಮಾನ್ಯ ಆಟೋದವರು ಅಂದುಕೊಂಡಿದ್ದಾರೆ. ಹಾಗೇನಿಲ್ಲ, ಕಡಿಮೆ ರೇಟ್ ನಲ್ಲಿ ಓಡಿಸಿ ಎಂದು ಸೂಚಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:54 pm, Tue, 11 October 22

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ