ರಾಯಚೂರು: ಯುಟ್ಯೂಬ್ನಲ್ಲಿನ ವಿಡಿಯೋ ನೋಡಿ ಡ್ರಾಗನ್ ಫ್ರೂಟ್ ಆಫರ್ ನಿಂದ ಹಣ ಕಳೆದುಕೊಂಡಿದ್ದಾಗಿ ರೈತರು ಮಾಡಿರೊ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಭರಣಿ ಆಗ್ರೊ ಟೆಕ್ ಕಂಪನಿ ಎಚ್ಚೆತ್ತುಕೊಂಡಿದೆ. ದಾವಣಗೆರೆ ಮೂಲದ ಭರಣಿ ಆಗ್ರೊ ಟೆಕ್ ಕಂಪನಿ ರಾಯಚೂರು ಮೂಲದ ರೈತರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಭರಣಿ ಕಂಪನಿಯಿಂದ ರೈತರಿಗೆ ಮೋಸವಾಗಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ.
ಭರಣಿ ಆಗ್ರೊ ಟೆಕ್ ಕಂಪನಿ ಮುಖ್ಯಸ್ಥೆ ನಯನಾ ಅನ್ನೋರು ತಮ್ಮ ಕಂಪನಿ ಮೇಲಿನ ಆರೋಪಕ್ಕೆ ಪ್ರತಿಕ್ರಿಯೆ ಮಾಡಿದ್ದಾರೆ. ರಾಯಚೂರು ಮೂಲದ ರೈತರ ಜೊತೆ ಡ್ರಾಡ್ರಾಗನ್ ಫ್ರೂಟ್ ಸಂಬಂಧ ಒಪ್ಪಂದ ಮಾಡಿಕೊಂಡಿದ್ದಾರೆ. ಅವರು ಆರೋಪಿಸಿದಂತೆ ನಮ್ಮ ಕಂಪನಿಯಿಂದ ಯಾವುದೇ ಮೋಸವಾಗಿಲ್ಲ. ರೈತರ ಜೊತೆ ಡ್ರಾಗನ್ ಫ್ರೂಟ್ ಸಸಿ ಹಾಗೂ ಕಂಬಗಳನ್ನ ನೀಡೊ ಒಪ್ಪಂದ ಆಗಿತ್ತು ಅಂತ ಭರಣಿ ಕಂಪನಿ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: Dragon fruit: ಯೂಟ್ಯೂಬ್ ವಿಡಿಯೋ ನೋಡಿ ಕೃಷಿ ಮಾಡೋಕ್ಕೆ ಹೋದ ರೈತರು ಕೈ ಸುಟ್ಟುಕೊಂಡರು!
ಇನ್ನು ಸಸಿ ಮೆಂಟನನ್ಸ್ ಗೆ ತಂತಿಗಳನ್ನ ಡಿಲವರಿ ಮಾಡಲು ಹೆಚ್ಚು ಖರ್ಚಾಗುವ ಬಗ್ಗೆಯೂ ಸೂಚಿಸಲಾಗಿತ್ತು.ಆರೋಪ ಮಾಡಿರೊ ರಾಯಚೂರು ಮೂಲದ ರೈತರು ಕೇವಲ 60% ಹಣ ಮಾತ್ರ ನೀಡಿದ್ದಾರೆ. ಇನ್ನೂ40% ರಷ್ಟು ಹಣ ಬಾಕಿಯಿದೆ. ತಂತಿಗಳನ್ನ ನೀಡಲು ಹೆಚ್ಚುವರಿ ಖರ್ಚಾಗುತ್ತೆ ಅಂತ ತಿಳಿಸಲಾಗಿತ್ತು. ಆದರೆ ಆ ರೈತರು ಉಚಿತವಾಗಿ ತಂತಿಗಳನ್ನ ನೀಡಿ ಅಂತ ಒತ್ತಾಯಿಸಿದ್ದರು. ಅದಕ್ಕೆ ಕಂಪೆನಿ ಒಪ್ಪದೇ ಇದ್ದಾಗ ಈ ರೀತಿ ರೈತರು ಆರೋಪ ಮಾಡಿದ್ದಾರೆ ಅಂತ ಭರಣಿ ಆಗ್ರೊ ಟೆಕ್ ಕಂಪನಿ ಮುಖ್ಯಸ್ಥೆ ನಯನಾ ಸ್ಪಷ್ಟನೆ ನೀಡಿದ್ದಾರೆ.
ರಾಯಚೂರು ತಾಲ್ಲೂಕಿನ ಸಗಮಕುಂಟಾ ಗ್ರಾಮದ ರೈತರು ಭರಣಿ ಅನ್ನೋ ಕಂಪನಿಯವ್ರನ್ನ ಭೇಟಿಯಾಗಿದ್ದರು. ಕಂಪನಿಯವರು ಎಕರೆಗೆ 3 ಲಕ್ಷ ಕಟ್ಟಲು ಹೇಳಿ, ಸಸಿ ನಮ್ದು, ಬಂಬಗಳು ನಮ್ಮವೇ, ಅವುಗಳನ್ನ ಇನ್ಸ್ಟಾಲ್ ಕೂಡ ನಾವೇ ಮಾಡಿ ಕೊಡ್ತಿವಿ ಅಂತ ಹೇಳಿ ಲಕ್ಷ-ಲಕ್ಷ ಹಣ ಕಟ್ಟಿಸಿಕೊಂಡಿದ್ದಾರೆ. ಸುರೇಶ್ ಅನ್ನೊ ರೈತರು ತನ್ನ ಎರಡು ಎಕರೆಯಲ್ಲಿ ಡ್ರಾಗನ್ ಫ್ರುಟ್ ಬೆಳೆಯಲು 6 ಲಕ್ಷ ಕಟ್ಟಿದ್ರೇ, ಬಡೇಸಾಬ್ ಒಂದು ಎಕರೆಗೆ 2.5 ಲಕ್ಷ ಕಟ್ಟಿದ್ರು. ನಂತರ ಒಪ್ಪಂದಂತೆ ಕಂಪೆನಿ ಅವ್ರು ಮೊದಮೊದಲು ಸಸಿಗಳನ್ನು ಕೊಟ್ಟಿದ್ದರು.ನಂತರ ಕಂಬಗಳು, ತಂತಿಗಳನ್ನ ಕೊಟ್ಟಿಲ್ಲ. ಆಗ ರೈತರೇ ಹೆಚ್ಚುವರಿ ಖರ್ಚು ಮಾಡಿ ಕಂಬಗಳನ್ನ ಹಾಕಿಸಿದ್ದಾರಂತೆ. ನಂತರ ಸಸಿಗಳ ಕೊರತೆ ಉಂಟಾಗಿದೆ.ಒಂದು ಸಾಲಿಗೆ 100 ಸಸಿಗಳ ಕೊರತೆ ಇದೆ.ಅವುಗಳನ್ನ ಕೊಡಿ ಅಂತ ಭರಣಿ ಕಂಪೆನಿ ಅವರನ್ನ ಕೇಳಿದರೇ, ಈಗ ಬರ್ತಿವಿ ನಾಳೆ ಬರ್ತಿವಿ ಅಂತ ಈಗ ಒಂಬತ್ತು ತಿಂಗಳು ಕಾಯಿಸಿ ಮೋಸ ಮಾಡಿದ್ದಾರೆ ಅಂತ ರಾಯಚೂರು ಮೂಲದ ಈ ರೈತರು ಆರೋಪಿಸಿದ್ದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:31 pm, Wed, 22 February 23