ಸಂಸದ ಪ್ರತಾಪ್ ಸಿಂಹನಿಗೆ ಸೋಲುತ್ತೇನೆ ಎಂಬ ಭಯ ಕಾಡುತ್ತಿದೆ: ಸಿಎಂ ಸಿದ್ದರಾಮಯ್ಯ
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಿಣಿ ಬಳಿಯ ಕಾಗಿನೆಲೆ ಪೀಠಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಸದ ಪ್ರತಾಪ್ ಸಿಂಹನಿಗೆ ಸೋಲುತ್ತೇನೆ ಎಂಬ ಭಯ ಶುರುವಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ. ಟಿಕೆಟ್ ವಿಚಾರದ ಬಗ್ಗೆ ಯತೀಂದ್ರ ಹೇಳಿಲ್ಲ, ನಾನೂ ಹೇಳಿಲ್ಲ ಎಂದಿದ್ದಾರೆ.
ರಾಯಚೂರು, ಜನವರಿ 13: ಸಂಸದ ಪ್ರತಾಪ್ ಸಿಂಹನಿಗೆ ಸೋಲುತ್ತೇನೆ ಎಂಬ ಭಯ ಶುರುವಾಗಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಿಣಿ ಬಳಿಯ ಕಾಗಿನೆಲೆ ಪೀಠದಲ್ಲಿ ಮಾತನಾಡಿದ ಅವರು, ಪ್ರತಾಪ್ ಸಿಂಹನಿಗೆ ಭಯ ಕಾಡುತ್ತಿದೆ ಎಂದಿದ್ದಾರೆ. ಟಿಕೆಟ್ ವಿಚಾರದ ಬಗ್ಗೆ ಯತೀಂದ್ರ ಹೇಳಿಲ್ಲ, ನಾನೂ ಹೇಳಿಲ್ಲ. ಸಚಿವ ಭೈರತಿ ಸುರೇಶ್ ಅಲ್ಲಿ ವೀಕ್ಷಕರಾಗಿ ಹೋಗಿದ್ದರು. ಅವರ ವರದಿ ಆಧಾರದಲ್ಲಿ ತೀರ್ಮಾನ ತೆಗೆದುಕೊಳುತ್ತೇನೆ ಎಂದು ಹೇಳಿದ್ದಾರೆ.
ಕ್ಷೇತ್ರದಲ್ಲಿನ ಎಂಎಲ್ಎಗಳು, ಎಕ್ಸ್ಎಂಎಲ್ಎಗಳು, ಎಂಪಿಗಳು, ಬ್ಲಾಕ್ ಕಮಿಟಿ ಅಧ್ಯಕ್ಷರು, ಅಭ್ಯರ್ಥಿಗಳಾಗಿದ್ದೋರು, ಜಿಲ್ಲಾ ಅಧ್ಯಕ್ಷರುಗಳು ಪ್ರಮುಖ ನಾಯಕರು ಅಭಿಪ್ರಾಯ ಮಾಡಲಾಗುತ್ತೆ. ಅವರು ಸೂಚಿಸುವವರಿಗೆ ಟಿಕೆಟ್ ಕೊಡುತ್ತೇವೆ ಎಂದಿದ್ದಾರೆ.
ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿರುವರು ನಾವು
ಬಿಜೆಪಿಯಿಂದ ಕಾಂಗ್ರೆಸ್ ಮುಸ್ಲಿಂಮರ ಪುಷ್ಟೀಕರಣ ಆರೋಪ ವಿಚಾರವಾಗಿ ಮಾತನಾಡಿದ ಅವರು, ಎಲ್ಲಾ ಸಮಾಜದ ಪರವಾಗಿದ್ದೇವೆ. ಒಂದು ಧರ್ಮ, ಜಾತಿ ಪರ ಅಲ್ಲ. ಎಲ್ಲರ ಪರವಾಗಿದ್ದ ಇದ್ದೇವೆ.
ಇದನ್ನೂ ಓದಿ: ನಾನು ಈ ಸಲ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ
ಬಿಜೆಪಿ ಥರ ಅಲ್ಲ. ಧರ್ಮದ ಆಧಾರದಲ್ಲಿ ಸಮಾಜ ಓಡೆಯೋರಲ್ಲ ನಾವು. ಜಾತಿ ಆಧಾರದಲ್ಲಿ ಸಮಾಜ ಒಡೆಯೋರಲ್ಲ ನಾವು. ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿರುವರು ನಾವು ಎಂದು ಕಿಡಿಕಾರಿದ್ದಾರೆ.
ನಾನು ಅಯೋಧ್ಯೆಗೆ ಹೋಗಲ್ಲ ಅಂತ ಏಲ್ಲೂ ಹೇಳಿಲ್ಲ
ನಾನು ಅಯೋಧ್ಯೆಗೆ ಹೋಗಲ್ಲ ಅಂತ ಏಲ್ಲೂ ಹೇಳಿಲ್ಲ. ಬಿಜೆಪಿ ಅವರು ರಾಜಕೀಯ ಮಾಡುತ್ತಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಗೆ ನಮ್ಮ ಅಭ್ಯಂತ್ರವಿಲ್ಲ. ಆದರೆ ಬಿಜೆಪಿ ಅವರು ಅದನ್ನ ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದಕ್ಕೆ ನಮ್ಮ ವಿರೋಧವಿದೆ. ನಾನು ಎಲ್ಲೂ ಹೋಗಲ್ಲ ಅಂದಿಲ್ಲ.
ಹೆಚ್ಡಿ ದೇವೇಗೌಡ ಹೇಳಿಕೆ ಸಿದ್ದರಾಮಯ್ಯ ಕಿಡಿ
ಸರ್ಕಾರದ ಗೃಹ ಲಕ್ಷ್ಮೀ ಯೋಜನೆಯ 2 ಸಾವಿರ ರೂ. ಯಾರಿಗೆ ಸಾಲತ್ತೆ ಅಂತ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಅವರು ಏನಾದರೂ ಕೊಟ್ಟಿದ್ದಾರ. ಅವರು ನೂರು ರೂಪಾಯಿ ಕೊಟ್ಟಿಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.