ಫುಟ್ ಪಾತ್ ವ್ಯಾಪಾರಿಗಳು ಲೈಸೆನ್ಸ್ ಪಡೆದು ಜನರ ಓಡಾಟಕ್ಕೆ ತೊಂದರೆ ಆಗದಂತೆ ವ್ಯಾಪಾರ ಮಾಡಿದರೆ ತೊಂದರೆ ಇಲ್ಲ -ಡಿಕೆ ಶಿವಕುಮಾರ್

ಫುಟ್ ಪಾತ್ ವ್ಯಾಪಾರಿಗಳ ಸಮಸ್ಯೆ ನನ್ನ ಗಮನದಲ್ಲೂ ಇದೆ. ಅವರು ಎರಡು ಮೂರು ಬಾರಿ ನನ್ನನ್ನೂ ಭೇಟಿ‌ ಮಾಡಿದ್ದರು. ಫುಟ್ ಪಾತ್​ಗಳು ಜನರ ಓಡಾಟಕ್ಕೆ ಮುಕ್ತವಾಗಿರಬೇಕು. ಹೈ ಕೋರ್ಟ್ ಆರ್ಡರ್ ಇದೆ. ಅದನ್ನ ಪಾಲಿಸಬೇಕು. ಫುಟ್ ಪಾತ್ ವ್ಯಾಪಾರಿಗಳು ಲೈಸೆನ್ಸ್ ಪಡೆದು ಜನರ ಓಡಾಟಕ್ಕೆ ತೊಂದರೆ ಆಗದ ರೀತಿಯಲ್ಲಿ ತಳ್ಳುಗಾಡಿ ಎಲ್ಲಾ ಹಾಕಿಕೊಂಡು ವ್ಯಾಪಾರ ಮಾಡಿದರೆ ತೊಂದರೆ ಇಲ್ಲ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಫುಟ್ ಪಾತ್ ವ್ಯಾಪಾರಿಗಳು ಲೈಸೆನ್ಸ್ ಪಡೆದು ಜನರ ಓಡಾಟಕ್ಕೆ ತೊಂದರೆ ಆಗದಂತೆ ವ್ಯಾಪಾರ ಮಾಡಿದರೆ ತೊಂದರೆ ಇಲ್ಲ -ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​
Follow us
TV9 Web
| Updated By: ಆಯೇಷಾ ಬಾನು

Updated on: Jan 13, 2024 | 1:09 PM

ಬೆಂಗಳೂರು, ಜ.13: ಬಿಬಿಎಂಪಿ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡಿರುವ ಹಿನ್ನೆಲೆ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಬೀದಿ ಬದಿ ವ್ಯಾಪಾರಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಕ್ರಾತಿ ಹಬ್ಬಕ್ಕೆ ನಮ್ಮ ಹೊಟ್ಟೆ ಮೇಲೆ ಹೊಡೆಯ ಬೇಡಿ ಎಂದು ನೂರಾರು ಸಂಖ್ಯೆಯಲ್ಲಿ ವ್ಯಾಪಾರಿಗಳು ಪ್ರತಿಭಟನೆ (Protest) ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ಫುಟ್ ಪಾತ್ ವ್ಯಾಪಾರಿಗಳು ಲೈಸೆನ್ಸ್ ಪಡೆದು ಜನರ ಓಡಾಟಕ್ಕೆ ತೊಂದರೆ ಆಗದ ರೀತಿಯಲ್ಲಿ ತಳ್ಳುಗಾಡಿ ಹಾಕಿಕೊಂಡು ವ್ಯಾಪಾರ ಮಾಡಿದರೆ ತೊಂದರೆ ಇಲ್ಲ ಎಂದಿದ್ದಾರೆ.

ಬೀದಿಬದಿ ವ್ಯಪಾರಿಗಳ ಪ್ರತಿಭಟನೆ ಸಂಬಂಧ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಫುಟ್ ಪಾತ್ ವ್ಯಾಪಾರಿಗಳ ಸಮಸ್ಯೆ ನನ್ನ ಗಮನದಲ್ಲೂ ಇದೆ. ಅವರು ಎರಡು ಮೂರು ಬಾರಿ ನನ್ನನ್ನೂ ಭೇಟಿ‌ ಮಾಡಿದ್ದರು. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಸರಿಪಡಿಸಬೇಕು. ಫುಟ್ ಪಾತ್​ಗಳು ಜನರ ಓಡಾಟಕ್ಕೆ ಮುಕ್ತವಾಗಿರಬೇಕು. ಹೈ ಕೋರ್ಟ್ ಆರ್ಡರ್ ಇದೆ. ಅದನ್ನ ಪಾಲಿಸಬೇಕು. ಫುಟ್ ಪಾತ್ ವ್ಯಾಪಾರಿಗಳು ಲೈಸೆನ್ಸ್ ಪಡೆದು ಜನರ ಓಡಾಟಕ್ಕೆ ತೊಂದರೆ ಆಗದ ರೀತಿಯಲ್ಲಿ ತಳ್ಳುಗಾಡಿ ಎಲ್ಲಾ ಹಾಕಿಕೊಂಡು ವ್ಯಾಪಾರ ಮಾಡಿದರೆ ತೊಂದರೆ ಇಲ್ಲ. ಫುಟ್ ಪಾತ್ ಓಡಾಟಕ್ಕೆ ತೊಂದರೆ ಆದಾಗ ನಾಗರಿಕರಿಂದ ನಮಗೂ ದೂರುಗಳು ಬಂದಿವೆ. ಕೋರ್ಟ್ ನಿರ್ದೆಶನ ಸಹ ಇದೆ. ಅದನ್ನ ನಾವು ಪಾಲಿಸಬೇಕು ಎಂದರು.

ಇನ್ನು ಇದೇ ವೇಳೆ ಡಿಕೆ ಶಿವಕುಮಾರ್ ಅವರು ಅನೇಕ ವಿಚಾರಗಳ ಸಂಬಂಧ ಮಾತನಾಡಿದರು. ಅನುಭವ ಮಂಟಪಕ್ಕೆ ಅನುದಾನ ಕುರಿತು ಬಸವಕಲ್ಯಾಣ ಶಾಸಕ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಅವ್ರು ಹೊಸ ಶಾಸಕರು. ಹೀಗಾಗಿ ಹಂಗ್ ಮಾತಾಡ್ತಾರೆ. ನಿನ್ನೆ ಶಿವಮೊಗ್ಗದಲ್ಲಿ ಸಿಎಂ ಸಾಹೇಬ್ರು ಬಸವಣ್ಣನವರ ಬಗ್ಗೆ ಮಾತಾಡಿದ್ರು. ಅಲ್ಲಮ ಪ್ರಭುಗಳ ಬಗ್ಗೆ ಮಾತನಾಡಿದ್ರು. ಅವ್ರ ಸರ್ಕಾರ ಇದ್ದಾಗ ಯಾಕ್ ಕೇಳಿಲ್ಲ ಅವ್ರು? ಅನುಭವ ಮಂಟಪಕ್ಕೆ ಅನುದಾನ ಕೊಡ್ತಿರೋದೆ ನಮ್ಮ ಸರ್ಕಾರ ಎಂದು ಡಿಕೆಶಿ ತಿಳಿಸಿದರು.

ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸುವರೇ? ಗೊತ್ತಿಲ್ಲವೆಂದರು ಜಿ ಪರಮೇಶ್ವರ್

ರಾಷ್ಟ್ರೀಯ ರಸ್ತೆ ಸುರಕ್ಷತಾ ದಿನ ಕಾರ್ಯಕ್ರಮದಲ್ಲಿ ಡಿಕೆಶಿ ಮಾತನಾಡಿ, ಆರ್ಟಿಫಿಶಿಯಲ್ ಇಂಟಲಿಜರನ್ಸ್ ನಿಂದ ಸಂಚಾರಿ ನಿಯಮ ಪಾಲನೆ ಮಾಡಲಿಲ್ಲ ಅಂದ್ರೆ ತುಂಬಾ ಅಪಘಾತಗಳಾಗುತ್ತವೆ. 2023ರಲ್ಲಿ ಅತಿ ಹೆಚ್ಚು ಜೀವ ಕಳೆದುಕೊಂಡಿರೋದು ಬೈಕ್ ಸವಾರರು. ಜೀವ ಕಳಕೊಳ್ಳೋ ಮುಂಚಿತವಾಗಿ ಜೀವ ಕಾಪಾಡಿಕೊಳ್ಳಬೇಕು. ಜೀವನದಲ್ಲಿ ಧೈರ್ಯ ಇರಬೇಕು. ಆದರೆ ಬಂಡತನ ಇರಬಾರದು. ಯುವಕರು ನಿಯಮ ಉಲ್ಲಂಘನೆ ಮಾಡಬಾರದು. ನಮ್ಮ ಪೊಲೀಸ್ ಇಲಾಖೆ ಎಲ್ಲಾ ಸೇರಿ ಉತ್ತಮ ಕೆಲಸ ಮಾಡ್ತಿದ್ದಾರೆ. ಬೆಂಗಳೂರಿನ ದೊಡ್ಡ ಸಮಸ್ಯೆ ಟ್ರಾಫಿಕ್ ಸಮಸ್ಯೆ. ಟ್ರಾಫಿಕ್ ಸಮಸ್ಯೆ ಸರಿ ಪಡಿಸೋ ನಿಟ್ಟಿನಲ್ಲಿ ಬಹಳ ಯೋಜನೆಗಳನ್ನ ಕಾರ್ಯಕ್ರಮಗಳನ್ನ ರೂಪಿಸುತ್ತೀವೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ