ಶನಿವಾರ, ಭಾನುವಾರದಂದು ರಜೆ ಇರುವ ಕಾರಣ ಉದ್ಘಾಟನೆಗೆ ಮುನ್ನವೇ ಅಯೋಧ್ಯೆಗೆ ಸಾಕಷ್ಟು ಪ್ರಯಾಣಿಕರು ತೆರಳುತ್ತಿದ್ದು, 6 ಸಾವಿರ ಇದ್ದ ಟಿಕೆಟ್ ರೇಟ್ 20 ಸಾವಿರ ದಾಟಿದೆ. ಇನ್ನು, ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಟಿಕೆಟ್ ದರ 6 ಸಾವಿರ ರೂಪಾಯಿ ಇತ್ತು. ಆದ್ರೆ ಜನವರಿ 19 ಶುಕ್ರವಾರ ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನದ ಒಂದು ಟಿಕೆಟ್ ಗೆ ಬರೋಬ್ಬರಿ 25000-26,000 ರೂಪಾಯಿಯಾಗಿದೆ.