ರಾಯಚೂರು: ಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಾ ಹೋಗುತ್ತಿದೆ. ರಾಯಚೂರು ಜಿಲ್ಲೆಯಲ್ಲಿ 73 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಡೆಂಘೀಗೆ ಐವರು ಪ್ರಾಣ ಕಳೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಜುಲೈನಿಂದ ಡೆಂಘೀ ಕೇಸ್ಗಳು ಹೆಚ್ಚುತ್ತಿವೆ. 1,514 ಮಂದಿಯಲ್ಲಿ ಜ್ವರ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಒಟ್ಟು 73 ಮಂದಿಗೆ ಡೆಂಘೀ ಇರುವುದು ಪತ್ತೆಯಾಗಿದೆ. ಈ ಬಗ್ಗೆ ರಾಯಚೂರು ಡಿಹೆಚ್‌ಒ ನಾಗರಾಜ್ ಮಾಹಿತಿ ನೀಡಿದ್ದಾರೆ. ಮಾನ್ವಿ ಪಟ್ಟಣದಲ್ಲಿ 17 ಡೆಂಘೀ ಪ್ರಕರಣಗಳು ಕಂಡು ಬಂದಿವೆ. ಕಳೆದ ಎರಡು ತಿಂಗಳಲ್ಲಿ 17 ಪ್ರಕರಣಗಳು ದಾಖಲಾಗಿವೆ. ನಗರ ಪ್ರದೇಶದಲ್ಲಿ 8, ಗ್ರಾಮೀಣ ಪ್ರದೇಶದಲ್ಲಿ 9 ಪ್ರಕರಣಗಳು ಕಂಡು ಬಂದಿವೆ. ಮಾನ್ವಿಯಲ್ಲಿ ಕಳೆದ ಒಂದು ತಿಂಗಳಲ್ಲಿ ಡೆಂಘೀ ಶಂಕಿತ ನಾಲ್ಕು ಜನ ಮೃತಪಟ್ಟಿದ್ದು, ಅದರಲ್ಲಿ ಒಂದು ಪ್ರಕರಣ ವಾಂತಿ ಬೇಧಿ, ಇನ್ನು ಮೂರು ದೃಢವಾಗಿಲ್ಲ ಎಂದ ಡಿಹೆಚ್‌ಒ ತಿಳಿಸಿದ್ದಾರೆ. ಮಾನ್ವಿ ನಗರದಲ್ಲಿ ಕೆಲ ಏರಿಯಾಗಳನ್ನ ಹೈರಿಸ್ಕ್ ಏರಿಯಾ ಎಂದು ಗುರುತಿಸಲಾಗಿದೆ.
23 ತಂಡಗಳನ್ನು ರಚಿಸಿ ಡೆಂಘೀ ಬಗ್ಗೆ ಅರಿವು ಮೂಡಿಸಲಾಗ್ತಿದೆ. ಇನ್ನು ಮಾನ್ವಿಯಲ್ಲಿ ಕಳೆದ ಎರಡು ದಿನಗಳಲ್ಲಿ ಮೂವರು ಮೃತಪಟ್ಟಿದ್ದು ಅವರಿಗೆ ಹೆಚ್ಚಿನ ಜ್ವರ ಕಾಣಿಸಿಕೊಂಡಿತ್ತು ಎಂದ ಡಿಹೆಚ್‌ಒ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೂ 5 ಜನ ಡೆಂಘೀಗೆ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಕಡಿಮೆ ನೀರು ಕುಡಿಯುತ್ತಿದ್ದೀರಾ? ಆರೋಗ್ಯದಲ್ಲಿನ ಈ ಬದಲಾವಣೆ ಬಗ್ಗೆ ಇರಲಿ ಎಚ್ಚರ