ಮಂಡ್ಯಕ್ಕೆ ಎಸ್ಪಿ ಇಲ್ಲಾ! ರಾಯಚೂರು ಜಿಲ್ಲೆಗೆ ಜಿಲ್ಲಾಧಿಕಾರಿ ಇಲ್ಲ: ಪ್ರಭಾವಿ ರಾಜಕಾರಣಿಗಳ ಮೇಲುಗೈ
ವರ್ಗಾವಣೆಯಾಗಿ 17 ದಿನ ಕಳೆದ್ರೂ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿ ಬಂದಿಲ್ಲ. ರಾಯಚೂರು ಜಿಲ್ಲಾಧಿಕಾರಿಯಾಗಿ ಚಾರುಲತಾ ಅವರನ್ನ ಸರ್ಕಾರ ನೇಮಕ ಮಾಡಿತ್ತು. ಆದರೆ ಆ ಪ್ರಭಾವಿ ರಾಜಕಾರಣಿ ಚಾರುಲತಾ ಅವರಿಗೂ ಅಧಿಕಾರ ವಹಿಸಿಕೊಳ್ಳಲು ಬಿಟ್ಟಿಲ್ಲ.
ರಾಯಚೂರು: ಕಳೆದ 17 ದಿನಗಳಿಂದ ರಾಯಚೂರಿಗೆ ಜಿಲ್ಲೆಯ ಪ್ರಥಮ ಅಧಿಕಾರಿ ಅಂದ್ರೆ ಜಿಲ್ಲಾಧಿಕಾರಿಯೇ ಇಲ್ಲದೆ ಅನಾಥಾವಾಗಿದೆ. ಇದು ಇಲ್ಲಿನ ಸರ್ಕಾರಿ ಆಡಳಿತ ಯಂತ್ರಕ್ಕೆ ತೊಡಕಾಗಿ ಪರಿಣಮಿಸಿದೆ. ಈ ಹಿಂದಿನ ಡಿ.ಸಿ. ಸತೀಶ್ ಅವರು ಕೇವಲ 78 ದಿನಗಳಲ್ಲಿ ವರ್ಗಾವಣೆಗೊಂಡಿದ್ದರು. ಇದೇ ತಿಂಗಳು 11 ರಂದು ರಾಯಚೂರು ಡಿ.ಸಿ. ಸತೀಶ್ ವರ್ಗಾವಣೆ ಯಾಗಿದ್ದರು. ಜಿಲ್ಲೆಯ ಪ್ರಭಾವಿ ರಾಜಕಾರಣಿಯೊಬ್ಬರ ಹಸ್ತಕ್ಷೇಪದಿಂದಾಗಿ ಕೇವಲ 78 ದಿನಗಳಲ್ಲಿ ಸತೀಶ್ ಅವರ ವರ್ಗಾವಣೆಯಾಗಿತ್ತು.
ಆದರೆ ಮುಂದಕ್ಕೆ ವರ್ಗಾವಣೆಯಾಗಿ 17 ದಿನ ಕಳೆದ್ರೂ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿ ಬಂದಿಲ್ಲ. ರಾಯಚೂರು ಜಿಲ್ಲಾಧಿಕಾರಿಯಾಗಿ ಚಾರುಲತಾ ಅವರನ್ನ ಸರ್ಕಾರ ನೇಮಕ ಮಾಡಿತ್ತು. ಆದರೆ ಆ ಪ್ರಭಾವಿ ರಾಜಕಾರಣಿ ಚಾರುಲತಾ ಅವರಿಗೂ ಅಧಿಕಾರ ವಹಿಸಿಕೊಳ್ಳಲು ಬಿಟ್ಟಿಲ್ಲ.
ಹಾಗಾಗಿ ರಾಜಕಾರಣಿಗಳ ಹಸ್ತಕ್ಷೇಪದಿಂದ ಜಿಲ್ಲಾಧಿಕಾರಿ ಇಲ್ಲದೆ ರಾಯಚೂರು ಜಿಲ್ಲೆ ಅನಾಥವಾಗಿದೆ. ರಾಯಚೂರು ಜಿಲ್ಲಾಡಳಿತ ICU ನಲ್ಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳು ಹರಿದಾಡುತ್ತಿವೆ.
ಮಂಡ್ಯ ಜಿಲ್ಲೆಯದ್ದೂ ಇದೇ ಕತೆ: ಇನ್ನು ಮಂಡ್ಯ ಜಿಲ್ಲೆಯಲ್ಲಿ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿ ನೇಮಕ ವಿವಾದ ಒಂದು ವಾರವಾದರೂ ಇನ್ನೂ ಬಗೆಹರಿದಿಲ್ಲ. ಹಾಗೆಂದೇ ದೂರುದಾರರೊಬ್ಬರು ಸೀದಾ ರಾಜ್ಯಪಾಲರ ಬಳಿ ವಿಷಯವನ್ನು ತೆಗೆದುಕೊಂಡು ಹೋಗಿದ್ದಾರೆ.
ಮಂಡ್ಯದಲ್ಲಿ ಮುಗಿಯದ ಎಸ್‌ಪಿ ನೇಮಕ ವಿವಾದದ ಹಿನ್ನೆಲೆಯಲ್ಲಿ ಈಗಾಗಲೇ ನೇಮಕಗೊಂಡಿರುವ ನೂತನ ಎಸ್ಪಿಗಾಗಿ ಮಂಡ್ಯ ಕರವೇ ರಾಜ್ಯಪಾಲರ ಮೊರೆ ಹೋಗಿದೆ. ನೂತನ ಎಸ್ಪಿಯಾಗಿ ನೇಮಕಗೊಂಡಿದ್ದರೂ ಮಹಿಳಾ ಐಪಿಎಸ್ ಅಧಿಕಾರಿಗೆ ಚಾರ್ಜ್ ತೆಗೆದುಕೊಳ್ಳದಂತೆ ಮೌಖಿಕ ಆದೇಶ ನೀಡಲಾಗಿದೆ. ನೂತನ ಎಸ್ಪಿಯಾಗಿ ಡಾ. ಸುಮನ್ ಡಿ. ಪನ್ನೇಕರ್ ನೇಮಕಗೊಂಡಿದ್ದಾರೆ.
ಇದನ್ನು ಓದಿ: ಎಲೆಕ್ಷನ್ ಬ್ಯುಸಿಯಲ್ಲಿರುವ ಸರ್ಕಾರಿ ಆಡಳಿತ ಯಂತ್ರ: ಬಗೆಹರಿದಿಲ್ಲ ಮಂಡ್ಯ ಎಸ್ಪಿ ನೇಮಕ, ವಿವಾದ ಸೀದಾ ರಾಜ್ಯಪಾಲರ ಅಂಗಳಕ್ಕೆ
Mandyaದಲ್ಲಿ ಮಹಿಳಾ ಅಧಿಕಾರಿಗಳು v/s ಪ್ರಭಾವಿ ರಾಜಕಾರಣಿ! ಜಿಲ್ಲೆಗೆ ಯಾವುದೇ ಕಾರಣಕ್ಕೂ ಮಹಿಳಾ SPಪಿ ಬೇಡ್ವಂತೆ!
(raichur goes without deputy commissioner even after 17 days local politicians involvement suspected)
Published On - 11:26 am, Thu, 28 October 21