ರಾಯಚೂರಿನಲ್ಲಿ ವಾಹನಕ್ಕೆ ಸೈಡ್ ನೀಡದ ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ! ನಾಲ್ವರ ವಿರುದ್ಧ ಎಫ್ಐಆರ್ ದಾಖಲು

ಆರೋಪಿ ಮೆಹಬೂಬಾ ಬಸ್ ಕಂಡಕ್ಟರ್ ನಿಂಗಪ್ಪ ಎದೆಗೆ ಒದ್ದು ಹಲ್ಲೆ ನಡೆಸಿದ್ದ. ಶಮುದ್ದೀನ್ ಹಾಗೂ ಇತರರು ಚಾಲಕ ಸಂಗಮೇಶನನ್ನು ಎಳೆದಾಡಿ ಹಲ್ಲೆ ನಡೆಸಿದ್ದರು.

ರಾಯಚೂರಿನಲ್ಲಿ ವಾಹನಕ್ಕೆ ಸೈಡ್ ನೀಡದ ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ! ನಾಲ್ವರ ವಿರುದ್ಧ ಎಫ್ಐಆರ್ ದಾಖಲು
ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ ನಡೆಸುತ್ತಿದ್ದಾರೆ
Edited By:

Updated on: Dec 25, 2021 | 10:25 AM

ರಾಯಚೂರು: ತಮ್ಮ ವಾಹನಕ್ಕೆ ಸೈಡ್ ನೀಡದ ಹಿನ್ನೆಲೆ ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದು, ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಸ್ ಚಾಲಕ, ನಿರ್ವಾಹಕನನ್ನ ಆರೋಪಿಗಳು ಮನಸೋ ಇಚ್ಛೆ ಥಳಿಸಿದ್ದರು. ಚಾಲಕ ನಿಂಗಪ್ಪ ದೂರಿನನ್ವಯ ಹಟ್ಟಿ ಪೊಲೀಸ್ ಠಾಣೆಯಲ್ಲಿ ಮೆಹಬೂಬಾ, ಶಮೂದ್ದೀನ್ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಆರೋಪಿ ಮೆಹಬೂಬಾ ಬಸ್ ಕಂಡಕ್ಟರ್ ನಿಂಗಪ್ಪ ಎದೆಗೆ ಒದ್ದು ಹಲ್ಲೆ ನಡೆಸಿದ್ದ. ಶಮುದ್ದೀನ್ ಹಾಗೂ ಇತರರು ಚಾಲಕ ಸಂಗಮೇಶನನ್ನು ಎಳೆದಾಡಿ ಹಲ್ಲೆ ನಡೆಸಿದ್ದರು. ಇದೇ ಡಿಸೆಂಬರ್ 23 ರಂದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗುರಗುಂಟಾ ಗ್ರಾಮದ ಬಳಿ ಈ ಘಟನೆ ನಡೆದಿತ್ತು. ಸದ್ಯ ರಾಯಚೂರು ಜಿಲ್ಲೆಯ ಹಟ್ಟಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಬಸ್ ಧಾರವಾಡದಿಂದ ಗುರಗುಂಟಾ ಮಾರ್ಗವಾಗಿ ಯಾದಗಿರಿಗೆ ಹೊರಟಿತ್ತು. ಕಲ್ಯಾಣ ಕರ್ನಾಟಕ ಸಾರಿಗೆಯ ಯಾದಗಿರಿ ಡಿಪೋಗೆ ಸೇರಿದ್ದ ಬಸ್, ಬೊಲೆರೊ ವಾಹನಕ್ಕೆ ಸೈಡ್ ಕೊಡದಿದ್ದಕ್ಕೆ ಬಸ್ ಚಾಲಕ ಸಂಗಮೇಶ್ ಹಾಗೂ ನಿರ್ವಾಹಕ ಲಿಂಗಣ್ಣ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದರು. ಕಿಡಿಗೇಡಿಗಳು ಹಲ್ಲೆ ನಡೆಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಗಾಯಾಳುಗಳ ನರಳಾಟ
ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರು ಚಿಕಿತ್ಸೆ ಸಿಗದೆ ಆಸ್ಪತ್ರೆಯ ಬಾಗಿಲಲ್ಲೇ ನರಳಾಡಿದ್ದಾರೆ. ಈ ಮನಕಲಕುವ ದೃಶ್ಯವನ್ನು ಸಾರ್ವಜನಿಕರು ಮೊಬೈಲ್​‌ನಲ್ಲಿ ಸೆರೆ ಹಿಡಿದಿದ್ದು, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತ್ಯಾವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಈ ಘಟನೆ ನಡೆದಿದೆ. ಬೇರೆ ಆಸ್ಪತ್ರೆಗೆ ಕರೆದೊಯ್ಯುಲು ಆ್ಯಂಬುಲೆನ್ಸ್ ಸಿಗದ ಹಿನ್ನೆಲೆ ಗಾಯಾಳುಗಳು ಒಂದೂವರೆ ಗಂಟೆಗೂ ಹೆಚ್ಚು ಕಾಲ ಆಸ್ಪತ್ರೆಯ ಹೊರಗೆ ಒದ್ದಾಡಿದ್ದಾರೆ.

ಇದನ್ನೂ ಓದಿ

ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷೆ ಅಲ್ಲ; ಆಕೆಯ ಗಂಡನ ಕಾರುಬಾರು – ಮಿಡಿಗೇಶಿ ಗ್ರಾಮಸ್ಥರಿಂದ ಪ್ರತಿಭಟನೆ

ಪ್ರಭಾಸ್​ ಅಭಿಮಾನಿಗಳಿಗೆ ಶುರುವಾಗಿದೆ ಹೊಸ ಚಿಂತೆ; ‘ರಾಧೆ ಶ್ಯಾಮ್​’ ಚಿತ್ರಕ್ಕೆ ಕೈ ಕೊಡಬಹುದಾ ಗ್ರಾಫಿಕ್ಸ್​?