ರಾಯಚೂರು: ದೇವರ ಕಾರ್ಯಕ್ಕೆ ಮಾಡಿದ್ದ ಮಾಂಸದೂಟ ಸೇವಿಸಿ 20ಕ್ಕೂ ಹೆಚ್ಚು ಜನರು ಅಸ್ವಸ್ಥ
ಲಿಂಗಸುಗೂರು(Lingasugur) ತಾಲೂಕಿನ ಪರಂಪುರ ತಾಂಡಾ ನಿವಾಸಿಗಳು ಸೇರಿಕೊಂಡು ಇಂದು(ಅ.10) ದೇವರ ಕಾರ್ಯದ ಹಿನ್ನಲೆ ಮಾಂಸದ ಅಡುಗೆ ಮಾಡಿಸಿದ್ದರು. ಅದರಂತೆ ಮಧ್ಯಾಹ್ನ ಊಟ ಸೇವಿಸಿದ ಬಳಿಕ ಮಕ್ಕಳು, ಹಿರಿಯರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದ್ದು, 20ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ.
ರಾಯಚೂರು, ಅ.10: ಮಾಂಸದೂಟ ಸೇವಿಸಿ 20ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ಲಿಂಗಸುಗೂರು(Lingasugur) ತಾಲೂಕಿನ ಪರಂಪುರ ತಾಂಡಾದಲ್ಲಿ ನಡೆದಿದೆ. ಇಂದು(ಅ.10) ದೇವರ ಕಾರ್ಯಕ್ಕಾಗಿ ತಾಂಡಾ ನಿವಾಸಿಗಳು ಸೇರಿಕೊಂಡು ಮಾಂಸದ ಅಡುಗೆ ಮಾಡಿಸಿದ್ದರು. ಮಧ್ಯಾಹ್ನ ಊಟ ಸೇವಿಸಿದ ಬಳಿಕ ಮಕ್ಕಳು, ಹಿರಿಯರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಕೂಡಲೇ ಅಸ್ವಸ್ಥರಾದವರನ್ನು ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಸುಮಾರು 250 ಕುಟುಂಬಗಳು ವಾಸಿಸುವ ತಾಂಡ ಇದಾಗಿದ್ದು, ಇಂದು ತಾಂಡದಲ್ಲಿ ದೇವರ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಅದರಂತೆ ಮಾಂಸದ ಅಡುಗೆಯನ್ನು ತಯಾರಿಸಿ ಎಲ್ಲರೂ ಊಟ ಮಾಡಿದ್ದರು. ಎಲ್ಲವೂ ಆಯಿತು ಎನ್ನುವಷ್ಟರಲ್ಲಿ ಕೆಲವರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಾಲೂಕು ಆರೋಗ್ಯಾಧಿಕಾರಿ ಅಮರೇಶ್ ಎಂಬುವವರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಉಡುಪಿಯಲ್ಲಿ ಕಲುಷಿತ ನೀರು ಕುಡಿದು 500ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಗ್ರಾಮ ಪಂಚಾಯತ್ ನಿರ್ಲಕ್ಷ್ಯ ಆರೋಪ
ಇತ್ತೀಚೆಗೆ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಮಡಿಕಲ್ ಮತ್ತು ಕರ್ಕಿಕಳಿ ಎಂಬಲ್ಲಿ ಕಲುಷಿತ ನೀರು ಕುಡಿದ ಎರಡು ವಾರ್ಡ್ಗಳ 500ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ನಡೆದಿತ್ತು. ಕಲುಷಿತ ನೀರು ಕುಡಿದ ಪರಿಣಾಮದಿಂದ ಕಾಯಿಲೆಗಳು ಶುರುವಾಗಿದೆ ಎಂದು ಆರೋಗ್ಯ ಇಲಾಖೆಯ ವರದಿ ದೃಢಪಡಿಸಿತ್ತು. ಇದೀಗ ಲಿಂಗಸುಗೂರು ತಾಲೂಕಿನಲ್ಲಿ ಮಾಂಸದೂಟ ಸೇವಿಸಿ ಅಸ್ವಸ್ಥರಾದ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ