AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರಿನಲ್ಲಿ ಸೇಂದಿ ಮಾರಾಟ ದಂಧೆ, ವಿಷಕಾರಿ ಸಿಹೆಚ್ ಪೌಡರ್ ಮಿಕ್ಸ್; ಜೀವ ಹೋಗುತ್ತೆ ಹುಷಾರ್!

ಅದು ಹಿಂದುಳಿದ ಜಿಲ್ಲೆ ಎನ್ನುವ ಹಣೆ ಪಟ್ಟಿ ಕಟ್ಟಿಕೊಂಡಿರುವ ಪ್ರದೇಶ. ಅಲ್ಲಿ ಕೂಲಿ ಕಾರ್ಮಿಕ ವರ್ಗದ ಜನ, ಗೂಳೇ ಹೋಗುವ ಜನರೇ ಹೆಚ್ಚು. ತುತ್ತು ಅನ್ನಕ್ಕೂ ಪರದಾಡುವ ಆ ಜಿಲ್ಲೆಯಲ್ಲಿ ಅಕ್ರಮ ಸೇಂದಿ ದಂಧೆ ಸದ್ದಿಲ್ಲದೇ ನಡೆಯುತ್ತಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ

ಕಿರಣ್ ಹನುಮಂತ್​ ಮಾದಾರ್
|

Updated on:Mar 24, 2023 | 10:10 AM

Share

ರಾಯಚೂರು: ಬೇಸಿಗೆಯ ಬಿಸಿಲು ಹೆಚ್ಚಾಗುತ್ತಿರುವ ಬೆನ್ನಲ್ಲೆ ಜಿಲ್ಲೆಯಲ್ಲಿ ಅಕ್ರಮ ಸೇಂದಿ ದಂಧೆ ಸದ್ದಿಲ್ಲದೇ ನಡೆಯುತ್ತಿದೆ. ಆಂಧ್ರ, ತೆಲಂಗಾಣ ಗಡಿಯಲ್ಲಿರುವ ಕಾರಣಕ್ಕೆ ಅಂತರ್​ರಾಜ್ಯ ದಂಧೆಕೋರರು ರಾಯಚೂರಿನಲ್ಲಿ ಅಕ್ರಮ ಸೇಂದಿ ದಂಧೆ ನಡೆಸುತ್ತಿದ್ದಾರೆ. ಸಿ.ಎಚ್ ಪೌಡರ್ ಎನ್ನುವುದು ನಿಷೇಧಿತ ಕೆಮಿಕಲ್. ಇದೇ ನಿಷೇಧಿತ ಸಿಎಚ್ ಪೌಡರ್​​ನಿಂದ ಕಳಪೆ ಗುಣಮಟ್ಟದ ಸೇಂದಿ ತಯಾರಿಸಲಾಗುತ್ತಲಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಕಾರ್ಮಿಕರ ವರ್ಗ ಇದ್ದು ಗೂಳೆ ಹೋಗುವ ಜನರೇ ಹೆಚ್ಚಿದ್ದಾರೆ. ಒಂದು ಲೀಟರ್ ಸೇಂದಿಗೆ ಕೇವಲ 10, 20, 30 ರೂಪಾಯಿ ಮಾತ್ರ. ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ಮಧ್ಯ ವ್ಯಸನಿಗಳು ಹೆಚ್ಚಿನ ದರ ನೀಡದೇ ಈ ಕಡಿಮೆ ದರದ ಸೇಂದಿ ಸೇವನೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಈ ದಂಧೆ ಫುಲ್ ಆಕ್ಟಿವ್ ಆಗಿದೆ. ಇನ್ನು ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ನಿತ್ಯ ಈ ಬಗ್ಗೆ ಮಾನಿಟರ್ ಮಾಡಿದ್ರೂ ಏನೂ ಪ್ರಯೋಜವಾಗುತ್ತಿಲ್ಲ. ಕೇವಲ ಅಲ್ಲೊಬ್ಬ ಇಲ್ಲೊಬ್ಬ ದುರುಳರು ಸಿಕ್ಕಿಬೀಳುತ್ತಾರೆ. ಈ ಜಾಲ ಮಾತ್ರ ಜಿಲ್ಲೆಯಲ್ಲಿ ನಾಯಿಕೊಡೆಗಳಂತೆ ತನ್ನ ಅಟ್ಟಹಾಸ ಮೆರೆಯುತ್ತಿದೆ.

ಜಿಲ್ಲೆಗೆ ರೆಲ್ವೆ ಮಾರ್ಗ, ರಸ್ತೆ ಮಾರ್ಗದ ಮೂಲಕವೇ ಹೆಚ್ಚಾಗಿ ಸಿಎಚ್​ ಪೌಡರ್ ಹಾಗೂ ಸೇಂದಿ ಸಪ್ಲೈ ಆಗುತ್ತೆ. ಆಂದ್ರ, ತೆಲಂಗಾಣದಲ್ಲಿ ಸೇಂದಿ ಲೀಗಲ್ ಆಗಿ ನಡೆಯುತ್ತಿದೆ. ಇದೇ ಗಡಿ ಭಾಗಕ್ಕೆ ದುರುಳರು ಬೈಕ್, ಆಟೋಗಳ ಮೂಲಕವೂ ಸೇಂದಿ ರಾಯಚೂರಿಗೆ ತಲುಪಿಸುತ್ತಾರೆ. ಅಲ್ಲಿಂದ ತರಲಾಗುವ ಸೇಂದಿಗೆ ನಿಷೇಧಿತ ಸಿಎಚ್ ಪೌಡರ್ ಮಿಕ್ಸ್ ಮಾಡಲಾಗುತ್ತೆ. ಈ ಮೂಲಕ ಸೇಂದಿ ಪ್ರಮಾಣವನ್ನ ಹೆಚ್ಚಿಗೆ ಮಾಡಿ ಮಧ್ಯ ವ್ಯಸನಕ್ಕೆ ದಾಸರಾಗಿರುವ ಕೂಲಿ ಕಾರ್ಮಿಕರು, ರೈತರು, ಗೂಳೆ ಹೋಗುವ ಬಡ ಜನರನ್ನ ಸೆಳೆಯಲಾಗುತ್ತೆ. ಒಂದು ಕೆಜಿ ಸಿಎಚ್ ಪೌಡರ್​ಗೆ ಎರಡು ವರೆಯಿಂದ ಮೂರು ಸಾವಿರ ಕೊಟ್ಟು ಆಂದ್ರ, ತೆಲಂಗಾಣದಲ್ಲಿ ಖರೀದಿಸಲಾಗುತ್ತೆ. ಒಂದು ಕೆಜಿ ಸಿಎಚ್ ಪೌಡರ್​ ನಿಂದ ಸುಮಾರು 3 ಸಾವಿರ ಲೀಟರ್​ಗೂ ಹೆಚ್ಚು ಸೇಂದಿ ತಯಾರಿಸಬಹುದು. ಹೀಗಾಗಿ ನಿಷೇಧಿತ ಸಿಎಚ್ ಪೌಡರ್ ನಿಂದ ತಯಾರಿಸಲಾಗುವ ಸೇಂದಿ ದಂಧೆ ನಡೆಯುತ್ತಿದೆ.

ಇದನ್ನೂ ಓದಿ: ಏಮ್ಸ್ ಸ್ಥಾಪನೆಗೆ ಮಾತು ತಪ್ಪಿದ ಬೊಮ್ಮಾಯಿ ಸರ್ಕಾರ, ಕೊತ ಕೊತ ಕುದಿಯುತ್ತಿರುವ ಸ್ಥಳೀಯರು, ಮಾ 24 ರಂದು ಅಮಿತ್​ ಶಾಗೆ ರಾಯಚೂರು ಬಂದ್ ಬಿಸಿ

ಇದರ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಎರಡು ಜಂಟಿ ಕಾರ್ಯಾಚರಣೆ ನಡೆಯುತ್ತಿದೆ. ಅವರಿಗೆ ಅಕ್ರಮ ಸೇಂದಿ ಮೂಲಗಳು ಗೊತ್ತಿವೆ. ಅದನ್ನ ಬುಡ ಸಮೇತ ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಕಿತ್ತು ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಭಾಗದಲ್ಲಿ ದುರಂತ ಅಂದರೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಅಧಿಕಾರದಲ್ಲಿದ್ರೂ ಯಾರೋಬ್ಬರು ಅಕ್ರಮ ಮದ್ಯ ಹಾಗೂ ಅಕ್ರಮ ಸೇಂದಿ ದಂಧೆ ತಡೆಗಟ್ಟುವ ಕ್ರಮ ಕೈಗೊಂಡಿಲ್ಲ. ಹೀಗಾಗಿ ಈ ದಂಧೆ ಜಿಲ್ಲೆಯಲ್ಲಿ ಬೇರೂರಿದೆ. ಆದಷ್ಟು ಬೇಗ ಇದನ್ನ ತಡೆಗಟ್ಟುವಂತೆ ಜನರು ಮನವಿ ಮಾಡುತ್ತಿದ್ದಾರೆ.

ವರದಿ: ಭೀಮೇಶ್ ಪೂಜಾರ್ ಟಿವಿ9 ರಾಯಚೂರು

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:08 am, Fri, 24 March 23

ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ
ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಮನೆಯಲ್ಲಿ ಪ್ರಸಾದ ವ್ಯವಸ್ಥೆ
ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಮನೆಯಲ್ಲಿ ಪ್ರಸಾದ ವ್ಯವಸ್ಥೆ