ಕೃಷ್ಣಾ ನದಿಯಲ್ಲಿ ನಿತ್ಯವೂ ಬೃಹತಾಕಾರದ‌ ಮೊಸಳೆಗಳು ಪ್ರತ್ತಕ್ಷ, ಹೆಚ್ಚಾಯ್ತು ಜನರಲ್ಲಿ ಆತಂಕ

| Updated By: ಆಯೇಷಾ ಬಾನು

Updated on: Sep 15, 2021 | 10:51 AM

ರಾಯಚೂರ ತಾಲೂಕಿನ ನಾರದಗಡ್ಡೆ ಬಳಿ ಬೃಹತಾಕಾರದ‌ ಮೊಸಳೆ ಪ್ರತ್ಯಕ್ಷವಾಗಿದೆ. ನಾರದಗಡ್ಡೆಗೆ ತೆಪ್ಪದಲ್ಲಿ ತೆರಳ್ತಿದ್ದ ಜನ ಮೊಸಳೆಯನ್ನು ನೋಡಿ ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ನದಿ ತೀರದ ಗ್ರಾಮಸ್ಥರಲ್ಲೂ ಕೂಡ ಆತಂಕ ಮನೆ ಮಾಡಿದೆ.

ಕೃಷ್ಣಾ ನದಿಯಲ್ಲಿ ನಿತ್ಯವೂ ಬೃಹತಾಕಾರದ‌ ಮೊಸಳೆಗಳು ಪ್ರತ್ತಕ್ಷ, ಹೆಚ್ಚಾಯ್ತು ಜನರಲ್ಲಿ ಆತಂಕ
ನಾರದಗಡ್ಡೆ ಬಳಿ ಬೃಹತಾಕಾರದ‌ ಮೊಸಳೆ ಪ್ರತ್ಯಕ್ಷ
Follow us on

ರಾಯಚೂರು: ಕೃಷ್ಣಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಇದರ ನಡುವೆ ಜನರಿಗೆ ಮತ್ತಷ್ಟು ಆತಂಕ ಹೆಚ್ಚಿಸುವಂತೆ ಕೃಷ್ಣನದಿಯಲ್ಲಿ ನಿತ್ಯವೂ ಮೊಸಳೆಗಳ ಪ್ರತ್ತಕ್ಷವಾಗುತ್ತಿವೆ. ಬೃಹತಾಕಾರದ‌ ಮೊಸಳೆಗಳನ್ನು ನೋಡಿ ಜನರು ಬೆಚ್ಚಿಬೀಳುತ್ತಿದ್ದಾರೆ.

ರಾಯಚೂರ ತಾಲೂಕಿನ ನಾರದಗಡ್ಡೆ ಬಳಿ ಬೃಹತಾಕಾರದ‌ ಮೊಸಳೆ ಪ್ರತ್ಯಕ್ಷವಾಗಿದೆ. ನಾರದಗಡ್ಡೆಗೆ ತೆಪ್ಪದಲ್ಲಿ ತೆರಳ್ತಿದ್ದ ಜನ ಮೊಸಳೆಯನ್ನು ನೋಡಿ ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ನದಿ ತೀರದ ಗ್ರಾಮಸ್ಥರಲ್ಲೂ ಕೂಡ ಆತಂಕ ಮನೆ ಮಾಡಿದೆ. ನಿತ್ಯವೂ ನದಿಯಲ್ಲಿ ಬೃಹದಾಕಾರದ‌ ಮೊಸಳೆಗಳು ತೇಲಿ ಬರುತ್ತಿರುವುದನ್ನು ನೋಡಿ ಜನರು ತಮ್ಮ ಜಾನುವಾರುಗಳನ್ನು ನದಿ ನೀರು ಕುಡಿಯಲು ಸಹ ಬಿಡದಂತ ಪರಿಸ್ಥಿತಿ ಎದುರಾಗಿದೆ. ನೀರು ಕುಡಿಯಲು ನದಿಗೆ ಬರುವ ಜಾನುವಾರುಗಳನ್ನ ಮೊಸಳೆಗಳು ಎಳೆದೊಯ್ಯುತ್ತಿವೆ. ಹೀಗಾಗಿ ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತ ಆದಷ್ಟು ಬೇಗ ಈ ಬಗ್ಗೆ ಸರ್ಕಾರ ಏನಾದರೂ ಪರಿಹಾರ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಮತ್ತೊಂದೆಡೆ ಮಹಾರಾಷ್ಟ್ರದಲ್ಲಿ ಹೆಚ್ಚಿದ ಮಳೆಯಿಂದ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಪ್ರಮಾಣ ಹೆಚ್ಚಳವಾಗಿದೆ. ಹೀಗಾಗಿ ಹಿಪ್ಪರಗಿ ಬ್ಯಾರೇಜ್‌ ಒಳ ಹರಿವು 1 ಲಕ್ಷ 4 ಸಾವಿರ ಕ್ಯೂಸೆಕ್ ಹಾಗೂ ಹೊರಹರಿವು 1 ಲಕ್ಷ ,3 ಸಾವಿರ ಕ್ಯೂಸೆಕ್ ಆಗಿದೆ.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಹಾಗೂ ಜಮಖಂಡಿ ತಾಲೂಕಿನ ಕೃಷ್ಣಾ ನದಿ ಪಾತ್ರದ ಜನರಿಗೆ ಸುರಕ್ಷಿತವಾಗಿರಲು ಜನರಿಗೆ ಸೂಚನೆ ನೀಡಲಾಗಿದೆ. ನದಿ ಅಕ್ಕ ಪಕ್ಕದ ಬೋರ್ ವೆಲ್, ಪಂಪ್ ಸೆಟ್ಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಸೂಚಿಸಲಾಗಿದೆ. ಸೆಪ್ಟಂಬರ್ ಅಂತ್ಯದಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಕೃಷ್ಣಾ ತೀರದಲ್ಲಿ ಈಗ ಮತ್ತೆ ನದಿ ಉಕ್ಕುತ್ತಿರುವುದು ಆತಂಕ ಮೂಡಿಸಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಶುರುವಾಯ್ತು ಪ್ರವಾಹ ಭೀತಿ! ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಸೂಚನೆ