ಮಂತ್ರಾಲಯ ರಾಯರ ಮಠದ ಹೆಸರಿನಲ್ಲಿ ಹಣ ವಸೂಲಿ! ಇಬ್ಬರು ಅರೆಸ್ಟ್

| Updated By: sandhya thejappa

Updated on: Jun 26, 2022 | 11:45 AM

ಆರೋಪಿಗಳು ಆನ್​ಲೈನ್​ನಲ್ಲಿ ಮಠದ ಪ್ರಸಾದ ನೀಡುತ್ತೇವೆಂದು ಹೇಳಿ ಭಕ್ತರಿಂದ ಹಣ ಸಂಗ್ರಹಿಸಿ ವಂಚಿಸಿದ್ದಾರೆ. ಜೊತೆಗೆ ಕೊರೊನಾ ಬಳಿಕ ಮಠದ ಸಿಬ್ಬಂದಿ, ಅರ್ಚಕರು ಸಂಕಷ್ಟದಲ್ಲಿದ್ದಾರೆ.

ಮಂತ್ರಾಲಯ ರಾಯರ ಮಠದ ಹೆಸರಿನಲ್ಲಿ ಹಣ ವಸೂಲಿ! ಇಬ್ಬರು ಅರೆಸ್ಟ್
ಮಂತ್ರಾಲಯ ಪ್ರಸಾದ
Follow us on

ರಾಯಚೂರು: ಮಂತ್ರಾಲಯದ (Mantralayam) ರಾಯರ ಮಠದ ಹೆಸರಿನಲ್ಲಿ ಸರಣಿ ವಂಚನೆ ಮಾಡಿದ್ದ ಇಬ್ಬರು ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಆರೋಪಿಗಳು ಆನ್​ಲೈನ್​ನಲ್ಲಿ (Online) ಮಠದ ಪ್ರಸಾದ ನೀಡುತ್ತೇವೆಂದು ಹೇಳಿ ಭಕ್ತರಿಂದ ಹಣ ಸಂಗ್ರಹಿಸಿ ವಂಚಿಸಿದ್ದಾರೆ. ಜೊತೆಗೆ ಕೊರೊನಾ ಬಳಿಕ ಮಠದ ಸಿಬ್ಬಂದಿ, ಅರ್ಚಕರು ಸಂಕಷ್ಟದಲ್ಲಿದ್ದಾರೆ. ಮಠದ ಸಿಬ್ಬಂದಿಯ ಸಹಾಯಕ್ಕಾಗಿ ದೇಣಿಗೆ ನೀಡುವಂತೆ ಹಣ ವಸೂಲಿ ಮಾಡಿದ್ದಾರೆ. ಅಲ್ಲದೆ ರಾಯರ ಮಠದ ಹೆಸರಲ್ಲಿ ನಕಲಿ ವೆಬ್​ಸೈಟ್​ ಐಡಿಯನ್ನೂ ಸೃಷ್ಟಿಸಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿಗಳು ವೆಬ್​ಸೈಟ್​ ಮೂಲಕ ಭಕ್ತರಿಂದ ಅಪಾರ ಪ್ರಮಾಣದ ಹಣ ವಸೂಲಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಭಕ್ತರು ಈ ಬಗ್ಗೆ ಮಠದ ಇ-ಮೇಲ್ಗೆ ಸಂದೇಶ ರವಾನಿಸಿದ್ದಾರೆ. ಭಕ್ತರು ಕಳಿಸಿದ್ದ ಇ-ಮೇಲ್ ಸಂದೇಶದಿಂದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಕೇಸ್ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Viral Video: ವಿಮಾನದಲ್ಲಿ ಎಸಿ ಸ್ಥಗಿತಗೊಂಡು ಪ್ರಯಾಕರು ಸುಸ್ತೋ ಸುಸ್ತು! ವಿಮಾನ ಬಹಿಷ್ಕಾರದ ಎಚ್ಚರಿಕೆ ನೀಡಿದ ಪ್ರಯಾಣಿಕರು

ಇದನ್ನೂ ಓದಿ
SSLC Supplementary Exam 2022: ಜೂನ್​ 27ರಿಂದ ಜುಲೈ 4ವರೆಗೆ ಎಸ್​​ಎಸ್​ಎಲ್​ಸಿ ಪೂರಕ ಪರೀಕ್ಷೆ ಆರಂಭ
Viral Video: ವಿಮಾನದಲ್ಲಿ ಎಸಿ ಸ್ಥಗಿತಗೊಂಡು ಪ್ರಯಾಕರು ಸುಸ್ತೋ ಸುಸ್ತು! ವಿಮಾನ ಬಹಿಷ್ಕಾರದ ಎಚ್ಚರಿಕೆ ನೀಡಿದ ಪ್ರಯಾಣಿಕರು
ನಿಮ್ಮ ದೇಹ ಕ್ರಿಸ್ತನಿಗೆ ಸೇರಿದ್ದು: ಅಮೆರಿಕದಲ್ಲಿ ಗರ್ಭಪಾತ ನಿಷೇಧ ತೀರ್ಪಿನ ಹಿಂದೆ ಸಂಪ್ರದಾಯವಾದಿಗಳ ಪ್ರಭಾವ, ಮಹಿಳೆಯರಿಂದ ತೀವ್ರ ಪ್ರತಿಭಟನೆ
ಮುದ್ದಿನ ಶ್ವಾನದೊಂದಿಗೆ 777 ಚಾರ್ಲಿ ಸಿನಿಮಾ ವೀಕ್ಷಿಸಿದ ಜನಾರ್ದನ ರೆಡ್ಡಿ; ವೈರಲ್ ವಿಡಿಯೋ ಇಲ್ಲಿದೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಕ್ತರು, ಕೊರೊನಾ ಬಳಿಕ ನಕಲಿ ವೆಬ್​ಸೈಟ್​ನಲ್ಲಿ ದೇವರ ಹೆಸರಲ್ಲಿ ವಂಚನೆಗಳು ನಡೆಯುತ್ತಿವೆ. ದೇವಾಸ್ಥಾನದಲ್ಲಿ 25 ರೂಪಾಯಿಗೆ ಸಿಗುತ್ತದೆ. ಆದರೆ ವಂಚಕರು 400- 500 ರೂ. ಗೆ ಮಾರಾಟ ಮಾಡುತ್ತಿದ್ದಾರೆ. ದೇವರ ಹೆಸರಲ್ಲಿ ವಂಚನೆಗಳು ನಡೆಯಬಾರದು. ರಾಯರ ಹೆಸರಲ್ಲಿ ಮಾಡುವ ವಂಚನೆಗಳಿಗೆ ಒಳಗಾಗಬೇಡಿ ಎಂದರು.

ಮಠದ ವ್ಯವಸ್ಥಾಪಕರು ಮಾತನಾಡಿ, ಪರಿಮಳ ಪ್ರಸಾದ ಪವಿತ್ರವಾದ ಪ್ರಸಾದ. ಈ ಪ್ರಸಾದವನ್ನು ಇಲ್ಲಿ 20 ರೂ.ಗೆ ಮಾರಾಟ ಮಾಡುತ್ತೇವೆ. ಆದರೆ ಕಿಡಿಗೇಡಿಗಳು 400ರಿಂದ 500 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ನಾವು ನಮ್ಮ ವೆಬ್​ಸೈಟ್​ನಲ್ಲಿ ಪ್ರಸಾದ ವಿತರಣೆ ಮಾಡುತ್ತಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: Mann Ki Baat: ಮನ್​ ಕಿ ಬಾತ್​ನಲ್ಲಿ 1975ರ ತುರ್ತು ಪರಿಸ್ಥಿತಿ ನೆನಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ

Published On - 10:58 am, Sun, 26 June 22