ಅರಕೇರಾ ಗ್ರಾಮದಲ್ಲಿಂದು ಸಚಿವ ಆರ್ ಅಶೋಕ್ ಗ್ರಾಮ ವಾಸ್ತವ್ಯ: ರಾಜ್ಯಾದ್ಯಂತ 1.5 ಲಕ್ಷ ಜನರಿಗೆ ಹಕ್ಕು ಪತ್ರ ವಿತರಣೆ

ಕಳೆದ ಎರಡು ವರ್ಷದಿಂದ ಗ್ರಾಮ ವಾಸ್ತವ್ಯ ಮಾಡ್ತಿದ್ದೇನೆ. ಜನರ ಜೊತೆ ಕೂತು ಮಾತನಾಡಿದರೇ, ಮನೆ ಬಾಗಿಲಿಗೆ ಪರಿಹಾರ ಸಿಗತ್ತೆ. -ಸಚಿವ ಆರ್ ಅಶೋಕ್

ಅರಕೇರಾ ಗ್ರಾಮದಲ್ಲಿಂದು ಸಚಿವ ಆರ್ ಅಶೋಕ್ ಗ್ರಾಮ ವಾಸ್ತವ್ಯ: ರಾಜ್ಯಾದ್ಯಂತ 1.5 ಲಕ್ಷ ಜನರಿಗೆ ಹಕ್ಕು ಪತ್ರ ವಿತರಣೆ
ಸಚಿವ ಆರ್ ಅಶೋಕ
Follow us
TV9 Web
| Updated By: ಆಯೇಷಾ ಬಾನು

Updated on: Oct 15, 2022 | 12:41 PM

ರಾಯಚೂರು: ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದಲ್ಲಿ ಕಂದಾಯ ಇಲಾಖೆ ಸಚಿವ ಆರ್ ಅಶೋಕ್ ಗ್ರಾಮ ವಾಸ್ತವ್ಯ ಹೂಡಲಿದ್ದು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ಇಲಾಖೆಯ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ರಾತ್ರಿ ಬಿಸಿಎಂ ಹಾಸ್ಟೆಲ್ ನಲ್ಲಿ ಸಚಿವರಿಗೆ ಭೋಜನ ವ್ಯವಸ್ಥೆ ಮಾಡಲಾಗಿದ್ದು ಅದೇ ಬಿಸಿಎಂ ಹಾಸ್ಟೆಲ್ ನಲ್ಲಿ ಸಚಿವರು ವಾಸ್ತವ್ಯ ಹೂಡಲಿದ್ದಾರೆ. ಸಚಿವರಿಗೆ ಅಧಿಕಾರಿಗಳು & ಸ್ಥಳೀಯ ಶಾಸಕರು ಸಾಥ್ ನೀಡಲಿದ್ದಾರೆ.

ಸದ್ಯ ಈ ಬಗ್ಗೆ ಮಾತನಾಡಿರುವ ಆರ್ ಅಶೋಕ್, ಕಳೆದ ಎರಡು ವರ್ಷದಿಂದ ಗ್ರಾಮ ವಾಸ್ತವ್ಯ ಮಾಡ್ತಿದ್ದೇನೆ. ಜನರ ಜೊತೆ ಕೂತು ಮಾತನಾಡಿದರೇ, ಮನೆ ಬಾಗಿಲಿಗೆ ಪರಿಹಾರ ಸಿಗತ್ತೆ. ಲಂಬಾಣಿ ತಾಂಡಾ, ಕುರುಬರ ಹಟ್ಟಿ ಬಗ್ಗೆ ಯಾವ ಸರ್ಕಾರಗಳು ಗಮನ ಹರಿಸಿರ್ಲಿಲ್ಲ. ನಮ್ಮ ಸರ್ಕಾರಿಂದ ಅವುಗಳನ್ನ ಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ. ಕಲ್ಯಾಣ ಕರ್ನಾಟಕದ 60 ಸಾವಿರ ಜನಕ್ಕೆ, ಸ್ಪಾಟ್ ನಲ್ಲೇ ಹಕ್ಕು ಪತ್ರ ನೀಡುತ್ತೇವೆ. ರಾಜ್ಯಾದ್ಯಂತ 1.5 ಲಕ್ಷ ಜನರಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುತ್ತೆ ಎಂದರು. ಇದನ್ನೂ ಓದಿ: ಯುವತಿಯ ಉಗುರುಗಳ ಮೇಲೆ ವ್ಯಾನ್ ಗೋ ಕಲಾಕೃತಿ, ವೈರಲ್ ಆಗುತ್ತಿರುವ ವಿಡಿಯೋ

ಇನ್ನು ಇದೇ ವೇಳೆ ‘ಜೋಡೋ’ ಯಾತ್ರೆ ಕುರಿತು ಸಚಿವ ಅಶೋಕ್​ ಲೇವಡಿ ಮಾಡಿದ್ದಾರೆ. ಫ್ಯಾಮಿಲಿ ಪ್ಯಾಕ್ ಪಾದಯಾತ್ರೆ, ಫ್ಯಾಮಿಲಿ ಪ್ಯಾಕ್ ಯಾತ್ರೆ. ಸಿದ್ದರಾಮಯ್ಯ ಬಳ್ಳಾರಿವರೆಗೂ ಪಾದಯಾತ್ರೆ ಮಾಡಿದರು. ಸಿದ್ದರಾಮಯ್ಯ ಪಾದಯಾತ್ರೆಗೆ ಸೋನಿಯಾ ಬಂದಿದ್ರಾ‌? ಬಂಡೆ ಅಂತೀರಲ್ಲ ಅವರು ಪಾದಯಾತ್ರೆ ಮಾಡಿದರು. ಡಿ.ಕೆ.ಶಿವಕುಮಾರ್​​ ಪಾದಯಾತ್ರೆಗೆ ಯಾರು ಬಂದ್ರು? ಹಸು, ಕರು ಗುರುತು ಮತ್ತೆ ಬಂದಿದೆ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ. ಸೋರುತಿಹುದು ಕಾಂಗ್ರೆಸ್ ಮನೆಯ ಮಾಳಿಗೆ. ಒಂದು ದಿನ ಫ್ಯಾಮಿಲಿ ಬಿಟ್ಟು ಜನರ ಜೊತೆಗೆ ನಿಂತಿಲ್ಲ. ಅವರ ಕಾಲದ 20 ಸಚಿವರು ಕೇಸ್​ನಲ್ಲಿ ಅಲೆದಾಡ್ತಿದ್ದಾರೆ. ಡೀಲ್ ಮಾಸ್ಟರ್​​​ಗಳಿವ್ರು ಎಂದು R.ಅಶೋಕ್​ ವಾಗ್ದಾಳಿ ನಡೆಸಿದರು.

ದಲಿತರ ಮನೆಯಲ್ಲಿ ಬಿಜೆಪಿ ನಾಯಕರು ಊಟ ಸೇವಿಸಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಜಾತಿ ಪದ್ಧತಿ ಹೋಗಲಾಡಿಸಲು & ಅರಿವು ಮೂಡಿಸಲು ಈ ಕಾರ್ಯಕ್ರಮ ಮಾಡಲಾಗಿದೆ. ಸಮಾಜದಲ್ಲಿ ಜಾತಿ ಪದ್ಧತಿ ತುಂಬಾ ಆಳವಾಗಿ ಬೇರೂರಿದೆ. 21ನೇ ಶತಮಾನದಲ್ಲೂ ಇಂಥ ಆಚರಣೆ ನಡೀತಿದೆ, ಇದು ಸರಿಯಲ್ಲ. ಜಾತಿ ಎನ್ನುವ ಅನಿಷ್ಟ ಪದ್ಧತಿ ಬಂದುಬಿಟ್ಟಿದೆ‌. ದಲಿತರ ಮನೆಗೆ ಹೋಗೋದು ಕಾಮನ್. ಈ ಅನಿಷ್ಟ ಪದ್ಧತಿ ಹೋಗಲಾಡಿಸಲು ದಲಿತರ ಮನೆಗೆ ಭೇಟಿ ನೀಡಿದ್ದೇವೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ