Missing case: ನಾಪತ್ತೆಯಾದ ನಾಲ್ವರು ವಿದ್ಯಾರ್ಥಿನಿಯರಲ್ಲಿ, ಇಬ್ಬರು ಪತ್ತೆ
ರಾಯಚೂರು ನಗರದ ಬಾಲಕಿಯರ ಸರ್ಕಾರಿ ಕಾಲೇಜಿನ, ನಾಪತ್ತೆಯಾದ ನಾಲ್ವರು ವಿದ್ಯಾರ್ಥಿನಿಯರಲ್ಲಿ ಇಬ್ಬರು ವಿದ್ಯಾರ್ಥಿನಿಯರು ಪತ್ತೆಯಾಗಿದ್ದಾರೆ.
ರಾಯಚೂರು: ರಾಯಚೂರು (Raichuru) ನಗರದ ಬಾಲಕಿಯರ ಸರ್ಕಾರಿ ಕಾಲೇಜಿನ, ನಾಪತ್ತೆಯಾದ ನಾಲ್ವರು ವಿದ್ಯಾರ್ಥಿನಿಯರಲ್ಲಿ (Students) ಇಬ್ಬರು ವಿದ್ಯಾರ್ಥಿನಿಯರು ಪತ್ತೆಯಾಗಿದ್ದಾರೆ. ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯರಲ್ಲಿ ಮೂವರು ದ್ವಿತೀಯ ಪಿಯುಸಿ (2nd Puc) ಓದುತ್ತಿದ್ದು, ಮತ್ತೋರ್ವ ವಿದ್ಯಾರ್ಥಿನಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ. ಈ ನಾಲ್ವರು ಜುಲೈ 23ರಂದು ಒಂದೇ ದಿನ ನಾಪತ್ತೆಯಾಗಿದ್ದರು.
ಎರಡು ದಿನದಿಂದ ಹುಡುಕಾಡಿದರೂ ವಿದ್ಯಾರ್ಥಿನಿಯರು ಪತ್ತೆಯಾಗಿರಲಿಲ್ಲ. ವಿದ್ಯಾರ್ಥಿನಿಯ ನಾಪತ್ತೆ ಬಗ್ಗೆ ಪೋಷಕರು ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕಾಣೆಯಾದ ವಿದ್ಯಾರ್ಥಿನಿಯರಿಗಾಗಿ ಪೊಲೀಸರಿಂದ ಶೋಧ ಕಾರ್ಯ ನಡೆಸಿದ್ದರು.
ಇಂದು (ಜುಲೈ 25) ನಾಪತ್ತೆಯಾದ ನಾಲ್ವರ ವಿದ್ಯಾರ್ಥಿನಿಯರಲ್ಲಿ, ಇಬ್ಬರು ವಿದ್ಯಾರ್ಥಿನಿಯರು ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ರೈಲ್ವೆ ಪೊಲೀಸರಿಂದ ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಬಳಿಕ ರೈಲ್ವೆ ಪೊಲೀಸರು ಶಹರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇನ್ನಿಬ್ಬರ ಪತ್ತೆಗೆ ಪೊಲೀಸರಿಂದ ಕಾರ್ಯಾಚರಣೆ ಮುಂದುವರೆದಿತ್ತು. ಇದೀಗ ಆ ಇಬ್ಬರು ವಿದ್ಯಾರ್ಥಿನಿಯರೂ ಕೂಡ ಪತ್ತೆಯಾಗಿದ್ದಾರೆ. ಇಬ್ಬರನ್ನು ಪೊಲೀಸರು ರಾಯಚೂರಿಗೆ ಕರೆ ತಂದಿದ್ದಾರೆ.
Published On - 5:08 pm, Mon, 25 July 22