ಮಂತ್ರಾಲಯದಲ್ಲಿ ಕೇಸರಿ ಧ್ವಜ ಹಾರಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದ ಮುಸ್ಲಿಮರು
ಆಂಧ್ರಪ್ರದೇಶ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಮಠದಲ್ಲಿ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದ್ದು ಶೋಭಾಯಾತ್ರೆಗೆ ಮುಸ್ಲಿಮರು ಚಾಲನೆ ನೀಡಿದರು. ಕೇಸರಿ ಧ್ವಜ ಹಾರಿಸುವ ಮೂಲಕ ಮುಸ್ಲಿಮರು ಚಾಲನೆ ನೀಡಿದರು. ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರಿಂದ ಭಾವೈಕ್ಯತೆ ಸಂದೇಶ ರವಾನೆಯಾಗಿದೆ.
ರಾಯಚೂರು, ಜ.22: ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ (Ayodhya Ram Mandir Bal Ram) ಹಿನ್ನೆಲೆ ಆಂಧ್ರಪ್ರದೇಶ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಮಠದಲ್ಲಿ (Mantralaya Mutt) ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದ್ದು ಶೋಭಾಯಾತ್ರೆಗೆ ಮುಸ್ಲಿಮರು ಚಾಲನೆ ನೀಡಿದರು. ಕೇಸರಿ ಧ್ವಜ ಹಾರಿಸುವ ಮೂಲಕ ಮುಸ್ಲಿಮರು ಚಾಲನೆ ನೀಡಿದರು.
ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಗಳ ನೇತೃತ್ವದಲ್ಲಿ ಶೋಭಾಯಾತ್ರೆ ನಡೆದಿದೆ. ಮೊದಲು ಶ್ರೀಗಳು ಚಾಲನೆ ನೀಡಿದ್ದು, ಬಳಿಕ ಮುಸಲ್ಮಾನ ಬಾಂಧವರು ಕೇಸರಿ ಧ್ವಜ ಹಾರಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು. ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರಿಂದ ಭಾವೈಕ್ಯತೆ ಸಂದೇಶ ರವಾನೆಯಾಗಿದೆ.
ಶ್ರೀಮಠದ ಯೋಗೀಂದ್ರ ಸಭಾಮಂಟಪದಿಂದ ಆರಂಭವಾದ ಯಾತ್ರೆ ಶ್ರೀಮಂಚಾಲಮ್ಮ ಸನ್ನಿಧಿ, ಪಂಚಮುಖಿ ದರ್ಶನ, ಶ್ರೀವೆಂಕಟೇಶ್ವರ ಸ್ವಾಮಿ, ರಾಮಲಿಂಗೇಶ್ವರ ಸ್ವಾಮಿ ದೇವಾಲಯ, ಸಂಸ್ಕೃತ ವಿದ್ಯಾಪೀಠ, ಸ್ಟೇಟ್ ಬ್ಯಾಂಕ್, ಸುಜಯೀಂದ್ರನಗರ, ನಾಗಲದಿನ್ನೆ ರಸ್ತೆ, ರಾಮಚಂದ್ರನಗರ, ಬಸ್ ನಿಲ್ದಾಣ, ರಾಘವೇಂದ್ರಪುರ, ಸುಶಮೀಂದ್ರ ಪಾರ್ಕ್, ರಾಘವೇಂದ್ರ ಸರ್ಕಲ್ ಮಾರ್ಗವಾಗಿ ಶ್ರೀಮಠದ ಮುಖ್ಯದ್ವಾರದಿಂದ ಶ್ರೀಮಠಕ್ಕೆ ಬಂದು ಸಮಾರೋಪಗೊಂಡಿತು. ಮುಸ್ಲಿಂ ಮುಖಂಡರು ಸಹ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ರಾಮಧ್ವಜ ಹಿಡಿದು ಸಂಭ್ರಮಿಸಿದರು.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿದ ರಾಮಲಲ್ಲಾ ಪ್ರಾಣ ಪ್ರತಿಷ್ಠೆ
ಭಾರತಕ್ಕೆ ಭಾರತವೇ ನಿರೀಕ್ಷಿಸುತ್ತಿದ್ದ, ಅಸಂಖ್ಯ ರಾಮ ಭಕ್ತರು ಎದುರು ನೋಡ್ತಿದ್ದ ರಾಮ ಮಂದಿರ ಲೋಕಾರ್ಪಣೆ ಮತ್ತು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಇಂದು ಸಂಪನ್ನಗೊಂಡಿದೆ. ಅಯೋಧ್ಯೆಯ ರಾಮ ಮಂದಿರದಲ್ಲಿ ಕಳೆದ ಒಂದುವಾರದಿಂದ ಬಾಲ ರಾಮನ ಮೂರ್ತಿಗೆ ಅನೇಕ ಪೂಜಾ ವಿಧಿವಿಧಾನಗಳು ನೇರವೇರಿದ್ವು.ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಗಾಗಿ ರಾಮ ಮಂದಿರವನ್ನ ಸ್ವರ್ಗದಂತೆ ಅಲಂಕಾರ ಮಾಡಲಾಗಿತ್ತು. ಬಾಲಿವುಡ್ ನಟ ನಟಿಯರು, ಉದ್ಯಮಿಗಳು, ಕ್ರಿಕೆಟ್ ತಾರೆಯರು, ರಾಜಕೀಯ ಗಣ್ಯರು ಹೀಗೆ ನಿನ್ನೆಯಿಂದಲೇ ಅಯೋಧ್ಯೆಗೆ ಹತ್ರ ಹತ್ರ 8 ಸಾವಿರ ವಿವಿಐಪಿಗಳು ಆಗಮಿಸಿದ್ರು. ಪ್ರತಿಯೊಬ್ಬರೂ ಬಾಲ ರಾಮನನ್ನ ಕಣ್ತುಂಬಿಕೊಳ್ಳ ಬೇಕೆಂದು ಕಾತರರಾಗಿದ್ರು. ಇಂದು ಬೆಳಗ್ಗೆ ಆಗೋದನ್ನೇ ಎದುರು ನೋಡ್ತಿದ್ರು. ಇಂದು ಬೆಳಗಾಗುತ್ತಿದ್ದಂತೆ. ರಾಮ ಮಂದಿರದ ಪ್ರಾಂಗಣದಲ್ಲಿ ಎಲ್ಲ ಗಣ್ಯರು ಜಮಾಯಿಸಿದ್ರು. ಅಯೋಧ್ಯೆಯಲ್ಲಿ ಶ್ರೀರಾಮೋತ್ಸವವೇ ನಡೀತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:55 pm, Mon, 22 January 24