ರಾಯಚೂರು: ಅಧಿಕಾರಿಗಳ ವರ್ತನೆ ವಿರುದ್ಧ ನರ್ಸಿಂಗ್ ವಿದ್ಯಾರ್ಥಿನಿಯರ ಅಹೋರಾತ್ರಿ ಪ್ರತಿಭಟನೆ
ಬೆಳಗ್ಗೆಯಿಂದ ನೀರಿಲ್ಲದೇ ಊಟ ಬಿಟ್ಟು ಕುಳಿತ ನೂರಾರು ವಿದ್ಯಾರ್ಥಿನಿಯರು, ಕೊನೆ ಪ್ರತಿಭಟನೆಗೆ ಮುಂದಾಗಿದ್ದು, ಕುಡಿಯಲು ಹಾಗೂ ದಿನಬಳಕೆಗೆ ನೀರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಚೂರು: ಹಾಸ್ಟೆಲ್‌ನಲ್ಲಿನ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ನರ್ಸಿಂಗ್ ವಿದ್ಯಾರ್ಥಿನಿಯರು (Nursing students) ಅಹೋರಾತ್ರಿ ಪ್ರತಿಭಟನೆ (Protest) ನಡೆಸಿದ್ದಾರೆ. ರಾಯಚೂರು ನಗರದ ಬೋಳಮಾನದೊಡ್ಡಿ ರಸ್ತೆಯಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ನಲ್ಲಿ (Hostel) ವಿದ್ಯಾರ್ಥಿನಿಯರು ಧರಣಿ ನಡೆಸಿದ್ದಾರೆ. ಊಟ ಬೇಡ ಏನೂ ಬೇಡ, ಮೊದಲು ಮೂಲಭೂತ ಸೌಕರ್ಯ ಬೇಕು. ಕುಡಿಯುವ ನೀರು ಕೊಡಿ ಎಂದು ಅಧಿಕಾರಿಗಳ ವರ್ತನೆಗೆ ನರ್ಸಿಂಗ್ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ.
ಹಾಸ್ಟೆಲ್ ಅವ್ಯವಸ್ಥೆ ಬಗ್ಗೆ ದೂರು ನೀಡಿದ್ದರು ಈವೆರೆಗೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಿನ್ನೆ (ಜನವರಿ 11) ಬೆಳಗ್ಗೆಯಿಂದ ನೀರಿಲ್ಲದೇ ವಿದ್ಯಾರ್ಥಿನಿಯರು ಕಂಗಾಲಾಗಿದ್ದರು. ರಾತ್ರಿಯಾದರೂ ಬಳಕೆಗೆ ಇರಲಿ, ಕುಡಿಯುವ ನೀರಿಗೂ ಸಹ ಅಧಿಕಾರಿಗಳು ವ್ಯವಸ್ಥೆ ಮಾಡಲಿಲ್ಲ. ಹೀಗಾಗಿ ವಿದ್ಯಾರ್ಥಿನಿಯರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಬೆಳಗ್ಗೆಯಿಂದ ನೀರಿಲ್ಲದೇ ಊಟ ಬಿಟ್ಟು ಕುಳಿತ ನೂರಾರು ವಿದ್ಯಾರ್ಥಿನಿಯರು, ಕೊನೆ ಪ್ರತಿಭಟನೆಗೆ ಮುಂದಾಗಿದ್ದು, ಕುಡಿಯಲು ಹಾಗೂ ದಿನಬಳಕೆಗೆ ನೀರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೆಗೆ ಮಾದ್ಯಮದವರು ಬಂದಿರುವ ವಿಷಯ ಕೇಳಿ ಓಡೋಡಿ ಬಂದ ಅಧಿಕಾರಿ ಬಿಲಾಲ್ ಎಂ.ಜೆ, ಎಲ್ಲಾ ಸರಿಪಡಿಸುತ್ತೀನಿ ಎಂದು ಭರವಸೆ ನೀಡಿದ್ದಾರೆ.
ಕೋಲಾರ: ಜಿಲ್ಲೆಯ ಪ್ರಸಿದ್ಧ ದೇವಾಲಯಗಳು ನಾಳೆ ಬಂದ್ ಕೋಲಾರದ ಪ್ರಸಿದ್ಧ ದೇವಾಲಯಗಳಾದ ಚಿಕ್ಕತಿರುಪತಿ, ಬಂಗಾರ ತಿರುಪತಿ, ಸೇರಿದಂತೆ ಎಲ್ಲಾ ದೇವಾಲಯಗಳು ನಾಳೆ ಬಂದ್ ಮಾಡಬೇಕು ಎಂದು ಕೋಲಾರ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶ ನೀಡಿದ್ದಾರೆ. ನಾಳೆ ವೈಕುಂಠ ಏಕಾದಶಿ ಇರುವ ಹಿನ್ನೆಲೆ ದೇವಾಲಯಗಳನ್ನು ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ. ಕೊರೊನಾ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಹಳ್ಳಿಗಳಲ್ಲಿ 14 ರಂದು ಸಂಕ್ರಾಂತಿ ಹಬ್ಬ ಆಚರಣೆಗೂ ಅನುಮತಿ ಇಲ್ಲ, ಜಾತ್ರೆ, ದನಗಳ ಓಟದ ಸ್ಪರ್ಧೆ ಸೇರಿದಂತೆ ಜನರು ಗುಂಪಾಗಿ ಸೇರುವ ಯಾವುದೇ ಕಾರ್ಯಕ್ರಮಕ್ಕೂ ಅವಕಾಶವಿಲ್ಲ.
ಇದನ್ನೂ ಓದಿ: ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ವಿರುದ್ಧ ಜೆಡಿ(ಎಸ್) ಕಾರ್ಯಕರ್ತರ ಆಕ್ರೋಶ, ಶ್ರೀನಿವಾಸಪುರ ಬಂದ್ ಮಾಡಿಸಿ ಪ್ರತಿಭಟನೆ
ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಎಚ್ ಎಮ್ ರೇವಣ್ಣಗೆ ಕೊವಿಡ್ ಪಾಸಿಟಿವ್
Published On - 8:19 am, Wed, 12 January 22