ಟಿಶ್ಯೂ ಪೇಪರ್ ವಿಚಾರಕ್ಕೆ ಯುವಕರಿಗೆ ಚಾಕುವಿನಿಂದ ಇರಿದ ಪಾನ್ ಶಾಪ್ ಮಾಲೀಕ
ರಾಯಚೂರಿನ ಅಪ್ಪು ಡಾಬಾದಲ್ಲಿ ಊಟ ಮಾಡಲು ಹೋಗಿದ್ದಾಗ ವೇಟರ್ ಎಂದು ತಿಳಿದು ಟಿಶ್ಯೂ ಪೇಪರ್ ತೆಗೆದುಕೊಂಡು ಬಾ ಎಂದಿದ್ದಕ್ಕೆ ಪಾನ್ ಶಾಪ್ ಮಾಲೀಕ ಹಾಗೂ ಊಟಕ್ಕೆ ಬಂದಿದ್ದ ಯುವಕರ ನಡುವೆ ಗಲಾಟೆಯಾಗಿದೆ. ಈ ವೇಳೆ ಈರುಳ್ಳಿ ಕತ್ತರಿಸಲು ಇಟ್ಟಿದ್ದ ಜಾಕುವಿನಿಂದ ಪಾನ್ ಶಾಪ್ ಮಾಲೀಕ ಯುವಕರ ಮೇಲೆ ಹಲ್ಲೆ ನಡೆಸಿದ್ದಾನೆ. ಗಾಯಾಳು ಯುವಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಯಚೂರು, ಅ.29: ಟಿಶ್ಯೂ ಪೇಪರ್ (Tissue Paper) ವಿಚಾರಕ್ಕೆ ಡಾಬಾದಲ್ಲಿ ಪಾನ್ ಶಾಪ್ ಮಾಲೀಕ ಯುವಕರ ಮೇಲೆ ಚಾಕು ಇರಿದ ಘಟನೆ ರಾಯಚೂರು (Raichur) ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ. ರಮೇಶ್ ಮತ್ತು ಸತ್ತರ್ ಅನ್ನೊ ಯುವಕರ ಮೇಲೆ ಚೂರಿ ಇರಿಯಲಾಗಿದೆ. ಇದೇ ಅಕ್ಟೋಬರ್ 26ರ ಸಂಜೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಮೇಶ್ ಮತ್ತು ಸತ್ತರ್ ಇಬ್ಬರು ಅಪ್ಪು ಡಾಬಾಗೆ ಊಟ ಮಾಡಲು ಹೋಗಿದ್ದರು. ಈ ವೇಳೆ ಪಾನ್ ಶಾಪ್ ಮಾಲೀಕ ವಿರೇಶ್ ಟೇಬಲ್ ಬಳಿ ಬಂದಿದ್ದರು. ಆಗ ಯುವಕರು ವಿರೇಶ್ರನ್ನು ವೇಟರ್ ಎಂದು ತಿಳಿದು ಟಿಶ್ಯೂ ಪೇಪರ್ ತೆಗೆದುಕೊಂಡು ಬಾ ಎಂದಿದ್ದಾರೆ. ಈ ವಿಚಾರಕ್ಕೆ ಜಗಳ ಆಗಿ ಚಾಕು ಇರಿತವಾಗಿದೆ.
ವಿರೇಶ್ ಮತ್ತಿ ಸತ್ತರ್ ಸ್ನೇಹಿತರ ನಡುವೆ ಕಿರಿಕ್ ಆಗಿದ್ದು ಈರುಳ್ಳಿ ಕತ್ತರಿಸಲು ಇಟ್ಟಿದ್ದ ಚಾಕುವಿನಿಂದ ಸತ್ತರ್ ಹಾಗೂ ರಮೇಶ್ ಮೇಲೆ ವಿರೇಶ್ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ರಮೇಶ್ ಮತ್ತು ಸತ್ತರ್ಗೆ ಗಂಭೀರ ಗಾಯಗಳಾಗಿದ್ದು ಗಾಯಾಳುಗಳಿಗೆ ಮಾನ್ವಿ & ರಾಯಚೂರು ರಿಮ್ಸ್ ನಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಚಾಕು ಇರಿದ ಆರೋಪಿ ವಿರೇಶ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಇಂದು ಬೆಳ್ಳಂ ಬೆಳಗ್ಗೆಯೇ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಗೆ ಇಬ್ಬರು ಬಲಿ, ತಿಂಗಳಲ್ಲಿ ಇದು ಆರನೇ ಬಲಿ
ನಡುರಸ್ತೆಯಲ್ಲಿಯೇ ಅಪರಿಚಿತ ವ್ಯಕ್ತಿಗಳಿಗೆ ಚಾಕು ಇರಿದ ಯುವಕ
ಇನ್ನು ಮತ್ತೊಂದೆಡೆ ಉತ್ತರ ಕನ್ನಡ ಜಿಲ್ಲೆ ಕಾರವಾರ ನಗರದ ಹೈಚರ್ಚ್ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಗಳಿಗೆ ಯುವಕ ಚಾಕು ಇರಿದ ಘಟನೆ ನಡೆದಿದೆ. ಯುವಕರ ಎರಡು ಗುಂಪುಗಳ ನಡುವೆ ಗಲಾಟೆ ನಡೆಯುತ್ತಿತ್ತು. ಆಗ ಸಿಟ್ಟಿನಲ್ಲಿ ಮನೆಗೆ ಹೋಗಿ ಚಾಕು ತಂದು ಯುವಕ ಇಬ್ಬರಿಗೆ ಚಾಕು ಇರಿದಿದ್ದಾನೆ. ಸುಮಾರು ಅರ್ಧ ಘಂಟೆಗಳ ಕಾಲ ಗಲಾಟೆ ನಡೆಸಿ ಹಲ್ಲೆ ಮಾಡಿದ್ದಾನೆ. ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆ ಚಾಕು ಹಿಡಿದಿದ್ದ ಯುವಕ ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಚಾಕು ಇರಿತಕ್ಕೊಳಗಾದವರನ್ನ ಆಸ್ಪತ್ರೆಗೆ ಕಳಿಸಿದ್ದಾರೆ. ಕೆಲವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕಾರವಾರ ನಗರದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ