ರಾಯಚೂರಿನ ಆರ್​ಟಿಪಿಎಸ್ ಕಲ್ಲಿದ್ದಲು ಅಕ್ರಮ ಸಾಗಾಟ: ಟಿವಿ9 ತಂಡ ಬರ್ತಿದ್ದಂತೆ ದಂಧೆಕೋರರು ಎಸ್ಕೇಪ್

ಕಲ್ಲಿದ್ದಲ್ಲು ವಿಲೇವಾರಿ ಬಳಿಕ ಗುತ್ತಿಗೆ ಆಧಾರದಲ್ಲಿ ಗೂಡ್ಸ್ ಕ್ಯಾರಿಯರ್ ಸ್ವಚ್ಛಗೊಳಿಸಿ ನಿರ್ವಹಣೆ ಮಾಡುವ ಕಾರ್ಯ ನಡೆದಿದೆ. ಈ ವೇಳೆ ಗೂಡ್ಸ್ ಕ್ಯಾರಿಯರ್​ಗಳಲ್ಲಿ ಉಳಿದ ಕ್ವಾಲಿಟಿ ಕಲ್ಲಿದ್ದಲ್ಲನ್ನೇ ಅಕ್ರಮ ಸಾಗಾಟ ಮಾಡುತ್ತಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನಲೆ ಘಟನಾ ಸ್ಥಳಕ್ಕೆ ಟಿವಿ9 ತಂಡ ಭೇಟಿ ನೀಡುತ್ತಿದ್ದಂತೆಯೇ ದಂಧೆಕೋರರು ಟ್ರಾಕ್ಟರ್​ಗಳ ಸಮೇತ ಎಸ್ಕೇಪ್ ಆಗಿದ್ದಾರೆ.

ರಾಯಚೂರಿನ ಆರ್​ಟಿಪಿಎಸ್ ಕಲ್ಲಿದ್ದಲು ಅಕ್ರಮ ಸಾಗಾಟ: ಟಿವಿ9 ತಂಡ ಬರ್ತಿದ್ದಂತೆ ದಂಧೆಕೋರರು ಎಸ್ಕೇಪ್
ರಾಯಚೂರು ಅಕ್ರಮ ಕಲ್ಲಿದ್ದಲ್ಲು ಸಾಗಣೆ ಆರೋಪ
Follow us
ಭೀಮೇಶ್​​ ಪೂಜಾರ್
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 21, 2023 | 9:19 PM

ರಾಯಚೂರು, ನ.21: ತಾಲೂಕಿನ ಯರಮರಸ್ ರೈಲ್ವೆ ನಿಲ್ದಾಣದ ಬಳಿ ಆರ್​ಟಿಪಿಎಸ್(RTPS) ಹಾಗೂ ವೈಟಿಪಿಎಸ್(YTPS) ಕಲ್ಲಿದ್ದಲು ಅಕ್ರಮ ಸಾಗಾಟ ಆರೋಪ ಕೇಳಿಬಂದಿತ್ತು. ಈ ಹಿನ್ನಲೆ ಟಿವಿ9 ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಕೂಡಲೇ ಟ್ರಾಕ್ಟರ್​ಗಳ ಸಮೇತ ದಂಧೆಕೋರರು ಎಸ್ಕೇಪ್ ಆಗಿದ್ದಾರೆ. ಗೂಡ್ಸ್ ರೈಲುಗಳ ಮೂಕಲ್ಲಿದ್ದಲು ಅಕ್ರಮ ಸಾಗಾಟ ಆರೋಪಲಕ ನಿತ್ಯ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಕಲ್ಲಿದ್ದಲ್ಲು ಸರಬರಾಜು ಆಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಕಳ್ಳತನಕ್ಕೆ ಇಳಿದಿದ್ದಾರೆ.

ಕ್ವಾಲಿಟಿ ಕಲ್ಲಿದ್ದಲ್ಲನ್ನೇ ಡಂಪಿಂಗ್ ಮಾಡಿ ಅಕ್ರಮ ಸಾಗಾಟ ಆರೋಪ

ಇನ್ನು ಕಲ್ಲಿದ್ದಲ್ಲು ವಿಲೇವಾರಿ ಬಳಿಕ ಗುತ್ತಿಗೆ ಆಧಾರದಲ್ಲಿ ಗೂಡ್ಸ್ ಕ್ಯಾರಿಯರ್ ಸ್ವಚ್ಛಗೊಳಿಸಿ ನಿರ್ವಹಣೆ ಮಾಡುವ ಕಾರ್ಯ ನಡೆದಿದೆ. ಈ ವೇಳೆ ಗೂಡ್ಸ್ ಕ್ಯಾರಿಯರ್​ಗಳಲ್ಲಿ ಉಳಿದ ಕ್ವಾಲಿಟಿ ಕಲ್ಲಿದ್ದಲ್ಲನ್ನೇ ಅಕ್ರಮ ಸಾಗಾಟ ಮಾಡುತ್ತಿರುವ ಆರೋಪ ಕೇಳಿಬಂದಿತ್ತು. ಇದೀಗ ಈ ಕಲ್ಲಿದ್ದಲ್ಲು ಕಳ್ಳತನವನ್ನು ಸ್ಥಳೀಯರೇ ಮಾಡುತ್ತಾರೆ ಎಂದು ಆರ್​ಟಿಪಿಎಸ್ ಮೂಲಗಳು ಒಪ್ಪಿಕೊಂಡಿವೆ. ಇದರ ಜೊತೆಗೆ ಗುತ್ತಿಗೆದಾರರಿಂದ ಸಮಸ್ಯೆ ಆಗುತ್ತಿರುವ ಬಗ್ಗೆ ಮಾಹಿತಿ ಪಡೆಯುವುದಾಗಿ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:ಕಲಬುರಗಿ: ಅಕ್ರಮ ಸಾಗಾಟಕ್ಕೆ ಸಂಗ್ರಹಿಸಿಟ್ಟಿದ್ದ ಅಂಗನವಾಡಿಯ ಆಹಾರ ಧಾನ್ಯ ತೋಟದ ಮನೆಯಲ್ಲಿ ಪತ್ತೆ

ರಾಯಚೂರು ವಿದ್ಯುತ್ ಘಟಕದಲ್ಲಿ ಕಲ್ಲಿದ್ದಲ್ಲು ಕಳ್ಳತನ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ನಗರದ ಎಸ್ಪಿ ಕಚೇರಿ ಬಳಿ ಗೃಹ ಸಚಿವ ಡಾ.ಜಿ ಪರಮೇಶ್ವರ ಮಾತನಾಡಿ ‘ಅದರ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಭದ್ರತಾ ವೈಫಲ್ಯವಾಗಿರಬಹುದು. ಅಲ್ಲಿ ಸಂಬಂಧಿಸಿದ ಅಧಿಕಾರಿಗಳು ಅದನ್ನು ನೋಡಿಕೊಳ್ಳುತ್ತಾರೆ. ಸರ್ಕಾರ ಅದರ ಬಗ್ಗೆ ತನಿಖೆ ನಡೆಸುತ್ತದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಹತ್ತಿರ ಮಾಹಿತಿ ಪಡೆಯುತ್ತೇನೆ. ಹೇಗೆ ಕಲ್ಲಿದ್ದಲ್ಲು ಕಳ್ಳತನಾವಾಗುತ್ತಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತೇವೆಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:55 pm, Tue, 21 November 23