AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು: ಜೈಲಿನಿಂದ ಎಸ್ಕೇಪ್ ಆಗಿದ್ದ ಕೊಲೆ ಆರೋಪಿಯನ್ನು ಪೋಷಕರು ವಾಪಸ್​​ ಕರೆತಂದು ಪೊಲೀಸರಿಗೆ ಒಪ್ಪಿಸಿದರು!

ಅನ್ವರ್ ಪಾಷಾ ರಾಯಚೂರಿನ ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ನಡೆದಿದ್ದ ಕೊನೆ ಅದಾಗಿತ್ತು. ಪ್ರಿಯತಮೆಯ ಪತಿಯನ್ನು ಕೊಲೆ‌ ಮಾಡಿ ಜೈಲು ಸೇರಿದ್ದ ವಿಜಯನಗರದ ಹಗರಿ ಬೊಮ್ಮನಹಳ್ಳಿ ಮೂಲದ ಆರೋಪಿ ಅನ್ವರ್ ಪಾಷಾ.

ರಾಯಚೂರು: ಜೈಲಿನಿಂದ ಎಸ್ಕೇಪ್ ಆಗಿದ್ದ ಕೊಲೆ ಆರೋಪಿಯನ್ನು ಪೋಷಕರು ವಾಪಸ್​​ ಕರೆತಂದು ಪೊಲೀಸರಿಗೆ ಒಪ್ಪಿಸಿದರು!
ಎಸ್ಕೇಪ್ ಆಗಿದ್ದ ಕೊಲೆ ಆರೋಪಿಯನ್ನು ಪೋಷಕರು ವಾಪಸ್​​ ಕರೆತಂದು ಪೊಲೀಸರಿಗೆ ಒಪ್ಪಿಸಿದರು!
ಭೀಮೇಶ್​​ ಪೂಜಾರ್
| Updated By: ಸಾಧು ಶ್ರೀನಾಥ್​|

Updated on: Sep 13, 2023 | 10:46 AM

Share

ರಾಯಚೂರು, ಸೆಪ್ಟೆಂಬರ್​ 13: ಜೈಲಿನಿಂದ ಎಸ್ಕೇಪ್ ಆಗಿದ್ದ ವಿಚಾರಣಾಧೀನ ಖೈದಿ (under-trial prisoner) ಅನ್ವರ್ ಪಾಷಾ ಎಂಬ ಆರೋಪಿಯನ್ನು ಆತನ ಪೋಷಕರು (parents) ಮತ್ತೆ ಕರೆತಂದು ಪೊಲೀಸರಿಗೆ ಒಪ್ಪಿಸಿದ ಪ್ರಕರಣ ವರದಿಯಾಗಿದೆ. ದೇವದುರ್ಗ ಪೊಲೀಸ್​​ ಠಾನೆಯಲ್ಲಿ ಈ ಘಟನೆ ನಡೆದಿದೆ. ಇದೇ ಸೆಪ್ಟೆಂಬರ್ 3 ರಂದು ದೇವದುರ್ಗ ಪಟ್ಟಣದಲ್ಲಿರುವ ಸಬ್ ಜೈಲಿನಿಂದ‌ ಆರೋಪಿ ಅನ್ವರ್ ಪಾಷಾ ಎಸ್ಕೇಪ್ ಆಗಿದ್ದ.

ತನ್ನಿಬ್ಬರು ಮಕ್ಕಳ ನೆನಪು ಕಾಡುತ್ತಿತ್ತು, ಜೊತೆಗೆ ಆಗಾಗ ಮಕ್ಕಳು ಕನಸಿನಲ್ಲಿ ಬರ್ತಿದ್ದ ಹಿನ್ನೆಲೆ ಅವರನ್ನು ನೋಡಲು ಎಸ್ಕೇಪ್ ಆಗಿದ್ದೆ ಅಂತ ಆರೋಪಿ ಅನ್ವರ್ ಪಾಷಾ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ (Raichur police).

ಇದನ್ನೂ ಓದಿ: ಮೋಸ್ಟ್ ವಾಂಟೆಡ್ ಕ್ರಿಮಿನಲ್ಸ್​ ಬಂಧನ ಪ್ರಕರಣ: ಹಣ ವರ್ಗಾವಣೆಗೆ ಬೆಂಗಳೂರಿನಲ್ಲಿ ಫ್ಯಾಕ್ಟರಿ ಹಾಕಿಕೊಂಡಿದ್ದ ಪಾತಕಿ! ಓಮನ್ ಪೊಲೀಸರ ಮೊರೆ ಹೋದ ಸಿಸಿಬಿ

ಅನ್ವರ್ ಪಾಷಾ ರಾಯಚೂರಿನ ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ನಡೆದಿದ್ದ ಕೊನೆ ಅದಾಗಿತ್ತು. ಪ್ರಿಯತಮೆಯ ಪತಿಯನ್ನು ಕೊಲೆ‌ ಮಾಡಿ ಜೈಲು ಸೇರಿದ್ದ ಆರೋಪಿ ಅನ್ವರ್ ಪಾಷಾ. ವಿಜಯನಗರದ ಹಗರಿ ಬೊಮ್ಮನಹಳ್ಳಿ ಮೂಲದ ಆರೋಪಿ ಅನ್ವರ್ ಪಾಷಾ ಪ್ರಸ್ತುತ ದೇವದುರ್ಗ ಉಪ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ