ರಾಯಚೂರು, ಏಪ್ರಿಲ್ 27: ಅರೆಬೆಂದ ಊಟ ಸೇವಿಸಿ ವಿದ್ಯಾರ್ಥಿನಿಯರು (Students) ಅಸ್ವಸ್ಥರಾಗಿರುವ ಘಟನೆ ಸಿಂಧನೂರಿನಲ್ಲಿರುವ (Sindhanur) ಅಂಬೇಡ್ಕರ್ ವಸತಿ ನಿಲಯದಲ್ಲಿ ನಡೆದಿದೆ. ವಿದ್ಯಾರ್ಥಿನಿಯರು ನಿನ್ನೆ (ಏ.26) ರಂದು ಮಧ್ಯಾಹ್ನ ಊಟ ಸೇವಿಸಿ ಅಸ್ವಸ್ಥರಾಗಿದ್ದಾರೆ. ಕೂಡಲೆ ವಿದ್ಯಾರ್ಥಿನಿಯರನ್ನು ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ವಿದ್ಯಾರ್ಥಿನಿಯರು 2 ಗಂಟೆ ಕಾಲ ನರಳಾಡಿದ್ದಾರೆ. ಆಸ್ಪತ್ರೆಗೆ ಸಮಾಜ ಕಲ್ಯಾಣ ಉಪನಿರ್ದೇಶಕ ಮಹೇಶ್ ಪೊತೆದಾರ್ ಭೇಟಿ ನೀಡಿದ್ದಾರೆ. ವಸತಿ ನಿಲಯದಲ್ಲಿನ ಊಟದ ಸಮಸ್ಯೆ ಬಗ್ಗೆ ಈ ಹಿಂದೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಪ್ರಯೋಜನವಾಗಿಲ್ಲ.
ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ನಡೆಯಬಾರದ ಘಟನಯೊಂದು ನಡೆದಿತ್ತು. ಅದೊಂದು ಘಟನೆ ಇಡೀ ಗ್ರಾಮದ ಜನರೇ ಬೆಚ್ಚಿಬೀಳುವಂತೆ ಮಾಡಿತ್ತು. ಏಪ್ರಿಲ್ 19 ರಂದು ಕಿನ್ನಾಳ ಗ್ರಾಮದಲ್ಲಿರುವ ಅನುಶ್ರೀ ಮಡಿವಾಳರ್ ಅನ್ನೋ ಏಳು ವರ್ಷದ ಬಾಲಕಿ, ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ಮನೆ ಮುಂದೆ ಆಡುತ್ತಿದ್ದಳಂತೆ. ಹೆತ್ತವರು ಕೊಪ್ಪಳದಲ್ಲಿ ಬಟ್ಟೆ ಐರನ್ ಮಾಡುವ ಕೆಲಸ ಮಾಡುತ್ತಿರುವದರಿಂದ, ಹೆತ್ತವರು ಕೊಪ್ಪಳಕ್ಕೆ ಬಂದಿದ್ದರು. ಅಜ್ಜಿ ಜೊತೆಗೆ ಇದ್ದ ಅನುಶ್ರೀ, ಆಟವಾಡಿಕೊಂಡಿದ್ದಳು. ಆದರೆ ಆಟವಾಡುತ್ತಿದ್ದ ಬಾಲಕಿ ಧಿಡೀರನೆ ನಾಪತ್ತೆಯಾಗಿದ್ದಳು.
ಇದನ್ನೂ ಓದಿ: ರಾಯಚೂರು: ಪತ್ನಿ ಜೊತೆಗೆ ಮತ್ತೋರ್ವ ವ್ಯಕ್ತಿಯ ಅನೈತಿಕ ಸಂಬಂಧ: ಕೊಲೆಗೈದ ಪತಿ
ಏಪ್ರಿಲ್ 19 ರ ಸಂಜೆಯಿಂದ ಅನುಶ್ರೀಯ ಹೆತ್ತವರು, ಗ್ರಾಮದ ಜನರು, ಬಾಲಕಿಗಾಗಿ ಹುಡುಕಾಟ ನಡೆಸಿದ್ದರು. ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ಗ್ರಾಮದ ಹೊರವಲಯದಲ್ಲಿರುವ ಕೆರೆ, ಬಾವಿಗಳನ್ನು ಶೋಧ ಮಾಡಿದ್ದರು. ಯಾರಾದರು ನಿಧಿಗಾಗಿ ಬಾಲಕಿಯನ್ನು ಬಲಿ ಕೊಡಲು ಕರೆದುಕೊಂಡು ಹೋಗಿರಬಹುದು ಅಂತ ತಮ್ಮೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸ್ಮಶಾನಗಳನ್ನು ಕೂಡಾ ಹುಡುಕಿ ಬಂದಿದ್ದರು. ಆದರೆ ಎಲ್ಲಿಯೂ ಕೂಡ ಬಾಲಕಿಯ ಸುಳಿವು ಸಿಕ್ಕಿರಲಿಲ್ಲಾ. ಜೊತೆಗೆ ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ಕೂಡಾ ಕೊಟ್ಟಿದ್ದರು.
ಪೊಲೀಸರು ಕೂಡ ಬಾಲಕಿಯ ಮಿಸ್ಸಿಂಗ್ ಬಗ್ಗೆ ಎಲ್ಲಡೆ ಮಾಹಿತಿ ನೀಡಿದ್ದರು. ಆದರೂ ಬಾಲಕಿಯ ಸುಳಿವು ಸಿಕ್ಕಿರಲಿಲ್ಲ. ಆದರೆ ಶುಕ್ರವಾರ ಸಂಜೆ ನಾಪತ್ತೆಯಾಗಿದ್ದ ಬಾಲಕಿ, ಭಾನುವಾರ ಸಂಜೆ ಅದೇ ಕಿನ್ನಾಳ ಗ್ರಾಮದಲ್ಲಿ ಶವವಾಗಿ ಪತ್ತೆಯಾಗಿದ್ದಳು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:25 am, Sat, 27 April 24