AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ ಅನ್ಬೇಡ..ಬಾಯ್ ಫ್ರೆಂಡ್ ಎನ್ನುವಂತೆ ಪೀಡಿಸುತ್ತಿದ್ದ ಶಿಕ್ಷಕನ ಕಾಮಚೇಷ್ಟೆ ಆಡಿಯೋ, ಮೆಸೇಜ್ ವೈರಲ್

ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ರಾಯಚೂರು ಶಾಲೆಯೊಂದರ ಪ್ರಾಂಶುಪಾಲನನ್ನು ಪೊಲೀಸರು ಬಂಧಿಸಿದ್ದಾರೆ.

ಸರ್ ಅನ್ಬೇಡ..ಬಾಯ್ ಫ್ರೆಂಡ್ ಎನ್ನುವಂತೆ ಪೀಡಿಸುತ್ತಿದ್ದ ಶಿಕ್ಷಕನ ಕಾಮಚೇಷ್ಟೆ ಆಡಿಯೋ, ಮೆಸೇಜ್ ವೈರಲ್
ರಮೇಶ್ ಬಿ. ಜವಳಗೇರಾ
|

Updated on:Mar 31, 2023 | 7:24 AM

Share

ರಾಯಚೂರು: ಪಾಠ ಮಾಡು ಅಂದ್ರೆ ವಿದ್ಯಾರ್ಥಿನಿ (Student) ಜೊತೆಗೆ ಅನುಚಿತವಾಗಿ ವರ್ತಿಸಿದ ಶಿಕ್ಷಕನ(Teacher) ಕಾಮ ಪುರಾಣ ಬಟಾಬಯಲಾಗಿದೆ. ರಾಯಚೂರು(Raichur) ತಾಲ್ಲೂಕಿನ ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆ ಮುಖ್ಯ ಶಿಕ್ಷಕ ವಿಜಯ ಕುಮಾರ್ ಅಂಗಡಿ ಎನ್ನುವಾತ 10ನೇ ಕ್ಲಾಸ್ ವಿದ್ಯಾರ್ಥಿನಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಪಾಗಲ್ ಪ್ರೇಮಿ ರೀತಿ ಕಮಿಟ್ ಆಗುವಂತೆ 10ನೇ ಕ್ಲಾಸ್ ವಿದ್ಯಾರ್ಥಿನಿಗೆ ನಿತ್ಯ ಕಾಲ್, ಮೆಸೇಜ್​ ಮಾಡಿದ್ದು, ಇದೀಗ ಆ ಮೆಸೇಜ್ ಹಾಗೂ ಆಡಿಯೋಗಳು ಟಿವಿ9ಗೆ ಲಭ್ಯವಾಗಿವೆ. ಇದೀಗ ಕಾಮುಕ ಶಿಕ್ಷಕನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ನಿವೃತ್ತಿಯ ಅಂಚಿನಲ್ಲಿರುವ ಆರೋಪಿ ಪ್ರಾಂಶುಪಾಲರು ಸಂತ್ರಸ್ತೆಯ ಫೋನ್ ನಂಬರ್ ಪಡೆದು ಆಕೆಯೊಂದಿಗೆ ಚಾಟಿಂಗ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೊಬೈಲ್‌ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ, ಅಲ್ಲದೇ ಸಂತ್ರಸ್ತೆಗೆ ಕರೆ ಮಾಡಿ ತನ್ನನ್ನು ಸರ್ ಎಂದು ಕರೆಯಬೇಡ ಬಾಯ್‌ಫ್ರೆಂಡ್‌ನಂತೆ ಭಾವಿಸಬೇಕು ಎಂದು ಹೇಳಿದ್ದ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.

ಇದನ್ನೂ ಓದಿ: ತುಮಕೂರು: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ, ಇಬ್ಬರು ಶಿಕ್ಷಕರು ಅಮಾನತು

ಶಾಲೆಯಲ್ಲಿ ಚೇಂಬರ್​ಗೆ ಕರೆದು ಮೈ ಕೈ ಮುಟ್ಟಿ ಅಸಭ್ಯ ವರ್ತನೆ ಮಾಡುತ್ತಾನಂತೆ. ಸಾಲದಕ್ಕೆ ವಿದ್ಯಾರ್ಥಿನಿ ಮನೆ ಹೋದ ಮೇಲೆ ನಿತ್ಯ ಮೆಸೇಜ್ ಹಾಗೂ ಕಾಲ್ ಮಾಡಿ ಲವ್ವಿ-ಡವ್ವಿಗೆ ಪ್ರಚೋದನೆ ನೀಡಿದ್ದಾನೆ. ಕಾಮದ ಮೊದಲ ಕ್ಲಾಸ್ ಯಾವುದು? ಎರಡನೇ ಕ್ಲಾಸ್ ಯಾವುದು ಎನ್ನುವುದನ್ನು ಫೋನ್​ ಮಾಡಿ ವಿದ್ಯಾರ್ಥಿನಿ ಕಾಮ ಪಾಠ ಮಾಡಿದ್ದಾನೆ. ಸರ್ ಅನ್ನಬೇಡ ಬಾಯ್ ಫ್ರೆಂಡ್ ಎಂದು ಹೇಳುವಂತೆ ಪೀಡಿಸಿದ್ದಾನೆ. ಇದೀಗ ಆ ಆಡಿಯೋಗಳು ವೈರಲ್ ಆಗಿವೆ.

“ಐ ಲವ್ ಯು ಸೋ ಮಚ್.. ಸ್ಪೆಂಡ್ ಒನ್ ಹವರ್ ಇನ್ ಮೈ ಹೋಮ್.. ಹೀಗಂತ ಮನೆ ವಿಳಾಸ ಕಳುಹಿಸಿ ಮನೆಗೆ ಬರುವಂತೆ ಮೆಸೇಜ್ ಮೂಲಕ ಒತ್ತಾಯಿಸಿದ್ದಾನೆ. ಮೆಸೇಜ್ ಹಾಗೂ ಫೋನ್ ಮಾಡಿದ ಬಳಿಕ ಕೊನೆಗೆ ವಿಡಿಯೋ ಕಾಲ್ ಮಾಡುವಂತೆ ಟಾರ್ಚರ್ ಕೊಟ್ಟಿದ್ದಾನೆ. ನೀನು 10ನೇ ಕ್ಲಾಸ್ ಇದ್ದೀಯಾ. ನನ್ನ ಜೊತೆ ಸಹಕರಿಸಿದರೇ ಪರೀಕ್ಷೆಯಲ್ಲಿ ಒಳ್ಳೆ ರೀತಿ ನೋಡಿಕೊಳ್ಳುತ್ತೇನೆ ಎಂದು ಪುಸಲಾಯಿಸಿಲು ಪ್ರಯತ್ನಿಸಿದ್ದಾನೆ. ಹೇಳಿದ ಹಾಗೆ ಕೇಳದಿದ್ದರೆ ಪರೀಕ್ಷೆಯಲ್ಲಿ ನಿನ್ನ ವಿರುದ್ಧವಾಗಿ ಕೆಲಸ ಮಾಡುವ ಧಮ್ಕಿ ಹಾಕಿದ್ದಾನೆ.

ಶಿಕ್ಷಕನ ಕಾಮಚೇಷ್ಟೆ ತಿಳಿಯುತ್ತಿದ್ದಂತೆಯೇ ಸಾರ್ವಜನಿಕರು ಶಾಲೆಗೆ ನುಗ್ಗಿ ಧರ್ಮದೇಟು ನೀಡಲು ಮುಂದಾಗಿದ್ದಾರೆ. ಕೊನೆಗೆ ವಿಷಯ ತಿಳಿದು ಸ್ಥಳಕ್ಕೆ ಶಕ್ತಿನಗರ ಪೊಲೀಸರು ಆಗಮಿಸಿ ಆರೋಪಿ ಮುಖ್ಯ ಶಿಕ್ಷಕ ವಿಜಯಕುಮಾರ್ ಅಂಗಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಆರೋಪಿ ವಿಜಯ ಕುಮಾರ್ ಅಂಗಡಿ ವಿರುದ್ಧ ಮಹಿಳಾ ಠಾಣೆಯಲ್ಲಿ ಪೋಕ್ಸೋ, ಲೈಂಗಿಕ ಕಿರುಕುಳ, ಜಾತಿ ನಿಂದನೆ ಸೇರಿ ಹಲವು ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 7:24 am, Fri, 31 March 23