ಅನುಮಾನಾಸ್ಪದವಾಗಿ ಪತ್ನಿ ಸಾವು: ಗಂಡನ ಮೇಲೆ ಕೊಲೆ ಆರೋಪ, ಅನಾಥವಾದ ಮಕ್ಕಳು

ಗಂಡನ ಕಿರುಕುಳಕ್ಕೆ ಪತ್ನಿ ಸಾವಿನ ಮನೆ ಸೇರಿದ್ದಾಳೆ. ಹಣಕ್ಕಾಗಿ ನಿತ್ಯ ಟಾರ್ಚರ್ ಕೊಡ್ತಿದ್ದ ಗಂಡನೇ ಪತ್ನಿಯನ್ನ ಕೊಂದು ಹಾಕಿದ್ದಾನೆ ಅಂತ ಮೃತಳ ಮನೆಯವರು ಆರೋಪ ಮಾಡಿದ್ದಾರೆ. ರಾಯಚೂರಿನ ವಾಸವಿ ನಗರದಲ್ಲಿ ಘಟನೆ ನಡೆದಿದೆ. ಘಟನೆ ಬಳಿಕ ಪತಿ ಪರಾರಿ ಆಗಿದ್ದಾರೆ. ರಾಯಚೂರಿನ ನೇತಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ಅನುಮಾನಾಸ್ಪದವಾಗಿ ಪತ್ನಿ ಸಾವು: ಗಂಡನ ಮೇಲೆ ಕೊಲೆ ಆರೋಪ, ಅನಾಥವಾದ ಮಕ್ಕಳು
ಅನುಮಾನಾಸ್ಪದವಾಗಿ ಪತ್ನಿ ಸಾವು: ಗಂಡನ ಮೇಲೆ ಕೊಲೆ ಆರೋಪ, ಅನಾಥವಾದ ಮಕ್ಕಳು
Edited By:

Updated on: Mar 09, 2025 | 7:48 PM

ರಾಯಚೂರು, ಮಾರ್ಚ್​ 09: ಗಂಡ, ಮಕ್ಕಳ ಜೊತೆ ಸುಖವಾಗಿ ಬಾಳಿ ಬದುಕಬೇಕಿದ್ದ ಗೃಹಿಣಿಯೊಬ್ಬಳು (housewife) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವಂತಹ (death) ಘಟನೆ ವಾಸವಿ ನಗರದಲ್ಲಿ ನಡೆದಿದೆ. ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪ್ರಸನ್ನಲಕ್ಷ್ಮೀ(35) ಶವ ಪತ್ತೆ ಆಗಿದೆ. ಪತಿ ಜಂಬನಗೌಡ ಹಾಗೂ ಆತನ ಪೋಷಕರ ವಿರುದ್ಧ ಕೊಲೆ ಆರೋಪ ಕೇಳಿಬಂದಿದ್ದು, ಘಟನೆ ಬೆನ್ನಲ್ಲೇ ಜಂಬನಗೌಡ ಪರಾರಿ ಆಗಿದ್ದಾರೆ. ರಾಯಚೂರಿನ ನೇತಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

15 ದಿನಗಳ ಹಿಂದಷ್ಟೇ ಬಾಡಿಗೆ ಮನೆ ಮಾಡಿದ್ದ ಪತಿ

ಕಳೆದ 16 ವರ್ಷದ ಹಿಂದೆ ರಾಯಚೂರು ನಗರದ ನಿವಾಸಿ ಜಂಬನಗೌಡ ಎಂಬುವವರೊಂದಿಗೆ ಪ್ರಸನ್ನಲಕ್ಷ್ಮೀ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮೊದ ಮೊದಲು ಚೆನ್ನಾಗಿದ್ದ ಸಂಸಾರದಲ್ಲಿ ಆ ಬಳಿಕ ಯಾವುದು ನೆಟ್ಟಗಿರ್ಲ್ಲವಂತೆ. ತುಂಬು ಕುಟುಂಬದಲ್ಲಿರುತ್ತಿದ್ದವರು ಕಳೆದ 15 ದಿನಗಳ ಹಿಂದಷ್ಟೇ ಪ್ರಸನ್ನ ಲಕ್ಷ್ಮೀ ಹಾಗೂ ಜಂಬನಗೌಡ ಮಕ್ಕಳ ಸಮೇತ ಬೇರೆ ಬಾಡಿಗೆ ಮನೆ ಮಾಡಿದ್ದರು. ಈ ಮಧ್ಯೆ ಇಂದು ಬೆಳಗಿನ ಜಾವ ಪ್ರಸನ್ನಲಕ್ಷ್ಮೀ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಹೆಣವಾಗಿದ್ದಾರೆ.

ಇದನ್ನೂ ಓದಿ: ಮಂಗಳೂರು: ನಾಪತ್ತೆಯಾಗಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಹಾಗೂ ಆಟೋ ಚಾಲಕ ಶವವಾಗಿ ಪತ್ತೆ

ಇದನ್ನೂ ಓದಿ
ನಾಪತ್ತೆಯಾಗಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಹಾಗೂ ಆಟೋ ಚಾಲಕ ಶವವಾಗಿ ಪತ್ತೆ
ಬರ್ತ್​​ಡೇ ದಿನವೇ ಸೇಹಿತರ ದುರಂತ ಅಂತ್ಯ: ಈಜಲು ತೆರಳಿದ್ದ ಮೂವರು ನೀರುಪಾಲು
ಚಿನ್ನ ಕಳ್ಳಸಾಗಣೆ: ನಟಿ ರನ್ಯಾ ರಾವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಸಿಬಿಐ
33 ಸೆಕೆಂಡ್​ಲ್ಲಿ 33 ಲಕ್ಷ ರೂ ಎಗರಿಸಿದ ಖತರ್ನಾಕ್ ಕಳ್ಳರು ಬೆಚ್ಚಿಬಿದ್ದ ಜನ

ಪ್ರಸನ್ನಲಕ್ಷ್ಮೀ ಮದುವೆಯಾಗುವ ವೇಳೆ ಒಳ್ಳೆ ಆಸ್ತಿ ಇದೆ. ಒಳ್ಳೆ ಕೆಲಸದಲ್ಲಿದ್ದೇನೆ ಅಂತ ಹೇಳಿ ಜಂಬನಗೌಡ ಮದುವೆ ಮಾಡಿಕೊಂಡಿದ್ದನಂತೆ. ಆದರೆ ಮದುವೆ ಬಳಿಕ ಕೆಲಸ ವರ್ಷಗಳಿಂದ ಪತ್ನಿ ಪ್ರಸನ್ನಲಕ್ಷ್ಮೀಗೆ ನಿತ್ಯ ಟಾರ್ಚರ್ ಕೊಡ್ತಿದ್ದನಂತೆ. ಹಣ, ಹಣ, ಹಣ ಅಂತ ನಿತ್ಯ ಹಣಕ್ಕಾಗಿ ಜಂಬನಗೌಡ ಕಿರುಕುಳ ಕೊಡ್ತಿದ್ದನಂತೆ. ಜೊತೆಗೆ ಕುಡಿದು ಬಂದು ಮಕ್ಕಳು, ಪತ್ನಿ ಮೇಲೆ ಉತ್ತರನ ಪೌರುಷ ತೋರ್ತಿದ್ದನಂತೆ.

ಅಳಿಯನಿಗೆ ಕೆಲಸ ಕಾರ್ಯ ಇಲ್ಲ ಅನ್ನೋದು ಕೆಲವೇ ದಿನಗಳಲ್ಲಿ ಲಕ್ಷ್ಮೀ ಕುಟುಂಬಸ್ಥರಿಗೆ ಗೊತ್ತಾಗಿತ್ತು. ಆದರೆ ಅಳಿಯ ಕೆಲಸ ಮಾಡದಿದರೂ ಪರ್ವಾಗಿಲ್ಲ, ಮಗಳು, ಮೊಮ್ಮಕ್ಕಳು ಚೆನ್ನಾಗಿದ್ದರೆ ಸಾಕು ಅಂತ ಮೃತ ಲಕ್ಷ್ಮೀ ತಂದೆ ರಂಗಸ್ವಾಮಿ ತನ್ನ ಪೆನ್ಷನ್ ಹಣದಲ್ಲಿ ಪ್ರತಿ ತಿಂಗಳು 25 ಸಾವಿರ ಹಣ ಕೊಡ್ತಿದ್ದನಂತೆ. ಮಗಳಿಗೆ ಹಣ ಹಾಕಿರುವ ದಾಖಲೆಗಳನ್ನ ಆಕೆ ಕುಟುಂಬಸ್ಥರು ಬೆಳಕಿಗೆ ತಂದಿದ್ದಾರೆ. ಮನೆ ಜವಾಬ್ದಾರಿಯನ್ನ ಪ್ರಸನ್ನ ಲಕ್ಷ್ಮೀಯೇ ಹೊತ್ತಿದ್ಲು. ಆದರೆ ಪತಿ ಜಂಬನಗೌಡ ಕುಟುಂಬಸ್ಥರು ಒಳ್ಳೆ ಆಸ್ತಿ ಹೊಂದಿದ್ದಾರಂತೆ.

ಈ ಮಧ್ಯೆ ಗಂಡ ಹೆಂಡತಿ ಜಗಳವಿದ್ದು ಅವರ ಮಕ್ಕಳು ದೊಡ್ಡವರಾಗ್ತಿದ್ದಾರೆ. ಆಸ್ತಿಯಲ್ಲಿ ಅವರಿಗೂ ಪಾಲು ಹೋಗತ್ತೆ ಅಂತ ಪ್ರಸನ್ನ ಲಕ್ಷ್ಮೀ ಬಿಟ್ಟುಬಿಡು ಅಂತ ಆತನ ಪೋಷಕರು ಒತ್ತಾಯಿಸುತ್ತಿದ್ರಂತೆ. ಇವರಿಬ್ಬರ ಜಗಳ ಮತ್ತೊಂದು ಹಂತ ತಲುಪಿ ಕಳೆದ 15 ದಿನಗಳ ಹಿಂದಷ್ಟೇ ಪ್ರಸನ್ನ ಲಕ್ಷ್ಮೀ ಗಂಡ ಜಂಬನಗೌಡ ಮಕ್ಕಳು ಎಲ್ಲಾ ಬೇರೆ ಮನೆಗೆ ಶಿಫ್ಟ್​ ಆಗಿದ್ದರು. ಈ ಮಧ್ಯೆ ನಿನ್ನೆ ಏನಾಗಿದೆಯೋ ಏನೋ ಗೊತ್ತಿಲ್ಲ, ಸಾಯುವ ಕೆಲಹೊತ್ತಿನವರೆಗೂ ಪ್ರಸನ್ನ ಲಕ್ಷ್ಮೀ ತಾಯಿ ಸುಬ್ಬರತ್ನಮ್ಮಳ ಜೊತೆ ಮಾತನಾಡಿದ್ದಾಳಂತೆ. ಆದರೆ ಇಂದು ಪ್ರಸನ್ನ ಲಕ್ಷ್ಮೀ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಆಕೆಯನ್ನ ಪತಿ ಜಂಬನಗೌಡ ಕೊಲೆ ಮಾಡಿ ನೇಣು ಹಾಕಿದ್ದಾನೆ ಅಂತ ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: ಬರ್ತ್​​ಡೇ ದಿನವೇ ಸೇಹಿತರ ದುರಂತ ಅಂತ್ಯ: ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ನೀರುಪಾಲು

ಸದ್ಯ ಘಟನೆ ಬೆನ್ನಲ್ಲೇ ಪ್ರಸನ್ನ ಲಕ್ಷ್ಮೀ ಪತಿ ಜಂಬನಗೌಡ ಎಸ್ಕೇಪ್ ಆಗಿದ್ದಾರೆ. ಮೃತಳ ಕುಟುಂಬಸ್ಥರು ರಾಯಚೂರು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದೂ ಜಂಬನಗೌಡ ಹಾಗೂ ಕುಟುಂಬಸ್ಥರನ್ನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.