AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RTPS: ರಾಯಚೂರು ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆ; 4 ಘಟಕಗಳು ಬಂದ್

ರಾಜ್ಯಕ್ಕೆ ಸುಮಾರು‌ 40% ವಿದ್ಯುತ್ ಪೂರೈಕೆ ಮಾಡುವ ಆರ್​ಟಿಪಿಎಸ್​ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು ನಾಲ್ಕು ಘಟನೆಗಳು ಬಂದ್ ಆಗಿವೆ. ಸದ್ಯ ಅವುಗಳ ದುರಸ್ಥಿ ಕಾರ್ಯ ನಡೆಯುತ್ತಿದ್ದು ವಿದ್ಯುತ್ ಉತ್ಪಾದನೆಗೆ ಹೊಡೆತ ಬಿದ್ದಿದೆ. 1720 ಮೆ.ವ್ಯಾ. ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿರುವ RTPSನಲ್ಲಿ ಕೇವಲ 903 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಲಾಗಿದೆ.

RTPS: ರಾಯಚೂರು ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆ; 4 ಘಟಕಗಳು ಬಂದ್
ರಾಯಚೂರು ವಿದ್ಯುತ್ ಉತ್ಪಾದನಾ ಕೇಂದ್ರ
ಭೀಮೇಶ್​​ ಪೂಜಾರ್
| Edited By: |

Updated on:Mar 31, 2024 | 1:27 PM

Share

ರಾಯಚೂರು, ಮಾರ್ಚ್​.31: ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ (Raichur Thermal Power Station) ತಾಂತ್ರಿಕ ಸಮಸ್ಯೆಯಿಂದಾಗಿ ಎಂಟು ಘಟಕಗಳಲ್ಲಿ ನಾಲ್ಕು ಘಟಕಗಳು ಬಂದ್ ಆಗಿವೆ. ಎರಡು ಘಟಕಗಳಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ. ಒಟ್ಟು 1720 ಮೆ.ವ್ಯಾ.ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿರೊ ಆರ್​ಟಿಪಿಎಸ್​ನಲ್ಲಿ ನಾಲ್ಕು ಘಟಕ ಬಂದ್ ಆಗಿದ್ದರಿಂದ 903 ಮೆ.ವ್ಯಾ.ವಿದ್ಯುತ್ ಉತ್ಪಾದನೆ ಮಾಡಲಾಗಿದೆ.

ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗ್ತಿದೆ. ಇಂಥ ಸ್ಥಿತಿಯಲ್ಲೇ ಈಗ ರಾಜ್ಯಕ್ಕೆ ಬಹುಪಾಲು ಶೇಕಡಾ 40 ರಷ್ಟು ವಿದ್ಯುತ್ ಸರಬರಾಜು ಮಾಡುವ ರಾಯಚೂರಿನ ಶಾಖೋತ್ಪನ್ನ ಕೇಂದ್ರ ಆರ್‌ಟಿಪಿಎಸ್‌ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಎಂಟು ಘಟಕಗಳ ಪೈಕಿ ಕಳೆದ ಎರಡು ದಿನಗಳಿಂದ ನಾಲ್ಕು ಘಟಕಗಳು ಬಂದ್ ಆಗಿದ್ವು. ಬಾಯ್ಲರ್ ಟ್ಯೂಬ್ ಲೀಕೇಜ್ ಹಾಗೂ ಬಂಕ್ಲರ್ ಸಮಸ್ಯೆಯಿಂದ ಬಂದ್ ಆಗಿದ್ದವು. ಈ ಪೈಕಿ 1,2,3&6 ಘಟಕಗಳು ಬಂದ್ ಆಗಿದ್ವು. ಆ ಪೈಕಿ ಈಗ 2&6 ನೇ ಘಟಕಗಳ ದುರಸ್ಥಿ ಕಾರ್ಯ ನಡೆಸಲಾಗಿದ್ದು, ಸದ್ಯ‌1&3 ಘಟಕಗಳ ಬಂದ್ ಆಗಿವೆ. 1 ಮತ್ತು 3 ನೇ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತವಾಗಿದೆ.

ಇದನ್ನೂ ಓದಿ: ಮಹಿಳೆ ಅಡುಗೆ ಮಾಡಲು ಲಾಯಕ್ಕು: ಶಾಮನೂರು ಹೇಳಿಕೆ ಖಂಡಿಸಿದ ಡಿಕೆ ಶಿವಕುಮಾರ್

ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆಯಿಂದ ಘಟಕಗಳು ಬಂದ್ ಆಗಿರೊ ಹಿನ್ನೆಲೆ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದೆ. ಎಂಟು ಘಟಕಗಳು ಒಟ್ಟು 1720 ಮೆ.ವ್ಯಾ.ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಆದ್ರೆ ತಾಂತ್ರಿಕ ಸಮಸ್ಯ, ಕಳೆದ ಎರಡು ದಿನಗಳಿಂದ ನಾಲ್ಕು ಘಟಕ ಬಂದ್ ಆಗಿದ್ದ ಕಾರಣ ಹಾಗೂ ಸದ್ಯ ಎರಡು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದ್ರಿಂದ 1720 ಮೆ.ವ್ಯಾ. ವಿದ್ಯುತ್ ಪೈಕಿ ಬರೀ 903 ಮೆ.ವ್ಯಾ.ವಿದ್ಯುತ್ ಉತ್ಪಾದನೆಯಾಗ್ತಿದೆ. ಇದರಿಂದ ಜಿಲ್ಲೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಡ್ತಿದೆ,.ವಿದ್ಯುತ್ ಸಮಸ್ಯೆಯಿಂದ ರೈತರು,ಸಾರ್ವಜನಿಕರು ಕಂಗಾಲಾಗುವಂತೆ ಮಾಡಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:55 am, Sun, 31 March 24