ರಾಯಚೂರು, ಜ.15: ಜಿಲ್ಲೆಯ ಮಸ್ಕಿ ತಾಲೂಕಿನ ಸಂತೆಕೆಲ್ಲೂರಿನಲ್ಲಿ ಘನಮಠದ (Ghanamateshwara Matha) ಶರಣರ ರಥೋತ್ಸವ ಅದ್ಧೂರಿಯಾಗಿ ನಡೆದಿದೆ. ಕೃಷಿ ಖುಷಿ ಅಂತ ಖ್ಯಾತಿ ಪಡೆದಿರುವ ಘನಮಠದ ಶಿವಯೋಗಿಗಳ ಪುಣ್ಯ ಸ್ಮರಣೆ ಆಂಗವಾಗಿ ಮಹಾ ರಥೋತ್ಸವ ನಡೇಯಿತು. ಅಧ್ಯಾತ್ಮದ ಜೊತೆಗೆ ಕೃಷಿ ಕುರಿತು ಜನಸಾಮಾನ್ಯರಿಗೆ, ರೈತಾಪಿ ವರ್ಗದವರಿಗೆ ಅರಿವು ಮೂಡಿಸಿದ ಘನಮಠ ಶಿವಯೋಗಿಗಳು, ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ಆರಾಧ್ಯ ದೈವವಾಗಿದ್ದಾರೆ. ಜಾತ್ರೆಯ ನಿಮಿತ್ತ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಘನಮಠದ ವಿಶೇಷತೆಯೇ ರೈತಾಪಿ ಜನರಿಗಾಗಿ ಕೈಗೊಳ್ಳಲಾದ ಕೆಲಸ ಕಾರ್ಯಗಳು. ಘನಮಠದ ಶಿವಯೋಗಿಗಳು ಕೃಷಿಕರ ಋಷಿ ನಾಡಿನ ಮೊದಲ ಕಷಿ ಸಂಶೋಧಕರಾಗಿ ಭೌತಿಕ, ಅಧ್ಯಾತ್ಮ ತತ್ತ್ವದ ತಿರುಳನ್ನು ನಾಡಿಗೆ ಕೊಡುಗೆಯಾಗಿ ಕೊಟ್ಟಿದ್ದಾರೆ. 150 ವರ್ಷಗಳ ಹಿಂದೆ ಇವರು ರಚಿಸಿದ ಕೃಷಿ ಜ್ಞಾನ ಪ್ರದೀಪಿಕೆ ಗ್ರಂಥ ಕನ್ನಡ ನೆಲದ ಮೇಲೆ ನಡೆಸಿದ ಕೃಷಿ ಪ್ರಯೋಗದ ದೇಶಿ ಫಲಿತಾಂಶ ಅಂತ ಖ್ಯಾತಿ ಪಡೆದಿದೆ.
ಇದನ್ನೂ ಓದಿ: Sankranti 2024: ಈ ರಾಶಿಯ ಉದ್ಯೋಗಿಗಳಿಗೆ ವರ್ಗಾವಣೆಯಾಗುವ ಅವಕಾಶವಿಲ್ಲ, ಉದ್ಯೋಗ ಬದಲಾಯಿಸಲು ಮಾತ್ರ ಅವಕಾಶವಿದೆ!
ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಸಾರಾಂಗ ವಿಭಾಗ ಕೃಷಿ ಜ್ಞಾನ ಪ್ರದೀಪಿಕೆ ಗ್ರಂಥವನ್ನು 1988ರಲ್ಲಿ ಹೊರತಂದಿರೋದು ಕೂಡ ವಿಶೇಷ. ಘನಮಠದ ರಥೋತ್ಸವ ವೇಳೆ ಹೊರ ಜಿಲ್ಲೆ, ಹೊರ ರಾಜ್ಯದ ಭಕ್ತರು ಭಾಗಿಯಾಗಿದ್ರು. ಘನಮಠದ ಮುಖ್ಯದ್ವಾರದಿಂದ ರಥೋತ್ಸವ ಸಂತೆಕೆಲ್ಲೂರು ಮುಖ್ಯ ಬೀದಿಯಲ್ಲಿ ಸಾಗಿ ಸಹಸ್ರಾರು ಭಕ್ತರನ್ನ ಪುಳಕಿತರನ್ನಾಗಿ ಮಾಡ್ತು.
ಇತ್ತ ಜಾತ್ರಾ ಮಹೋತ್ಸವದಲ್ಲಿ ವಿವಿಧ ಬಗೆಯ ಖಾದ್ಯ, ತಿನಿಸುಗಳು ಭಕ್ತರನ್ನ ಸೆಳೆದವು. ಆಟಿಕೆಗಳು, ವಿವಿಧ ವಸ್ತುಗಳು ಖರೀದಿಸಲು ಜನ ಮುಗಿ ಬಿದ್ದಿದ್ರು. ಇದೆಲ್ಲದರ ಜೊತೆಗೆ ಈ ರಥೋತ್ಸವದಲ್ಲಿ ಮುಸ್ಲಿಂ ಬಾಂಧವರು ಕೂಡ ಶರಣರ ದರ್ಶನ ಪಡೆದು ಭಾವೈಕ್ಯತೆಗೆ ಸಾಕ್ಷಿಯಾದ್ರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ