ಸಿದ್ಧರಾಮಯ್ಯನವರ ಕಾಲದಲ್ಲಿ‌ 34 ಮರ್ಡರ್​ಗಳಾಗಿವೆ: ಮಂತ್ರಾಲಯದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

ಲಂಚದ ಹುಟ್ಟೇ ಕಾಂಗ್ರೆಸ್​ನಿಂದ ಆಗಿದೆ. ಕಾಂಗ್ರೆಸ್​ನವರು ದೇಶದ ಸಂಪತ್ತು ಹೀರಿ ಬೆಳೆದಿದ್ದಾರೆ. ಇವರು ಲಂಚ ತೆಗೆದುಕೊಂಡು, ಮಾಡಬಾರದ್ದು ಮಾಡಿದ್ರು.

ಸಿದ್ಧರಾಮಯ್ಯನವರ ಕಾಲದಲ್ಲಿ‌ 34 ಮರ್ಡರ್​ಗಳಾಗಿವೆ: ಮಂತ್ರಾಲಯದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ
ಗೃಹಸಚಿವ ಆರಗ ಜ್ಞಾನೇಂದ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Aug 13, 2022 | 12:49 PM

ರಾಯಚೂರು: ಸಿದ್ಧರಾಮಯ್ಯನವರ ಕಾಲದಲ್ಲಿ ಲಾ ಅಂಡ್‌ ಆರ್ಡರ್ ಹೇಗಿತ್ತು‌ ಅಂತ ಕಾಂಗ್ರೆಸ್ ಹಾಗೂ ಬಿಜೆಪಿ‌ ಸರ್ಕಾರ ಎರಡನ್ನೂ ನೀವು ಕಂಪೈರ್‌ ಮಾಡಬೇಕು ಎಂದು ಮಂತ್ರಾಲಯದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದರು. ಮಧ್ಯಾರಾಧನೆ ಹಿನ್ನೆಲೆ ರಾಯರ ಮಠಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ ದರ್ಶನ ಪಡೆದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಿದ್ಧರಾಮಯ್ಯನವರ ಕಾಲದಲ್ಲಿ‌ 34 ಮರ್ಡರ್​ಗಳಾಯ್ತು. ಪಾಲಿಟಿಕಲ್ ಮರ್ಡರ್​ಗಳು, ಧಾರ್ಮಿಕ ಮರ್ಡರ್​ಗಳು, ಕಮ್ಯೂನಲ್‌ ಮರ್ಡರ್​ಗಳಾಯ್ತು. ಟಿಪ್ಪು ಜಯಂತಿಯನ್ನು ಉದ್ದೇಶಪೂರ್ವಕವಾಗಿ ಮಾಡಿಸಿ ರಾಜ್ಯದಲ್ಲಿ ರಕ್ತ ಹರಿಸಿದ್ರು. ಎರಡು ಜನ ಹೋಮ್‌ ಮಿನಿಸ್ಟರ್​ಗಳು‌ ಡಮ್ಮಿಯಾಗಿದ್ರು ಆವತ್ತು. ಕೆಂಪಯ್ಯನವರ ಕೈಗೆ ಜುಟ್ಟು ಜನಿವಾರ ಕೊಟ್ಟಿದ್ರು. ಪೋಲೀಸರು ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ರಸ್ತೆಗೆ‌ ಇಳಿಯುವ ಹಾಗಾಯಿತು. ರೌಡಿಯನ್ನ ಹಿಡಿಯುವಂತ ಒಬ್ಬ ಡಿವೈಎಸ್ಪಿ ಮರ್ಡರ್ ಆಯ್ತು. ಇವೆಲ್ಲ ಅವರ ಆಡಳಿತಾವಧಿಯಲ್ಲಿ ಆಗಿದ್ದು ಎಂದು ಕಿಡಿಕಾರಿದರು.

ಸುಳ್ಳು ಟ್ವೀಟ್ ಮಾಡೋರು ನಾಯಕರಾ?

ಸಿದ್ದರಾಮಯ್ಯ ಗಿಮಿಕ್ ಮಾಡಿ ಬೆಳೆಯಬೇಕು ಅನ್ಕೊಂಡಿದ್ದಾರೆ. ಆದರೆ ರಾಜ್ಯದ ಜನ ಅದನ್ನ ಒಪ್ಪಲ್ಲ. ಸುಳ್ಳು ಟ್ವೀಟ್ ಮಾಡೋರು ಇವರೆಲ್ಲಾ ನಾಯಕರಾ? ಬೇರೆ ಬೇರೆ ಕಡೆ ಲಘುವಾಗಿ ಮಾತನಾಡುತ್ತಾ ಹೋಗೋದು ಇದು ಲೀಡರ್ ಗುಣ ಏನ್ರೀ ಎಂದು ಆರಗ ಜ್ಞಾನೇಂದ್ರ ಗರಂ ಆದರು. ಸಿಎಂ ಬದಲಾವಣೆ ಎಂದು ಟ್ವೀಟ್ ಮಾಡೋಕೆ ಯಾರಿವರು. ಸಿಎಂ ಚೇಂಜ್ ಖಾತ್ರಿ ಅಂತ ಹೇಳಿ ಟ್ವೀಟ್ ಮಾಡಿದ್ದಾರೆ. ಏನ್​ ಸಿಎಂ ಬದಲಾವಣೆ ಮಾಡೋದು ಕಾಂಗ್ರೆಸ್​​ನವರಾ? ಏನೋ ಗಿಮಿಕ್​ಗಳನ್ನ ಮಾಡಿ ಬೆಳೆಯಬೇಕು ಅನ್ಕೊಂಡಿದ್ದಾರೆ ಎಂದು ಕಾಂಗ್ರೆಸ್​ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ಮಾಡಿದರು.

ಲಂಚದ ಹುಟ್ಟೇ ಕಾಂಗ್ರೆಸ್​!

ಲಂಚದ ಹುಟ್ಟೇ ಕಾಂಗ್ರೆಸ್​ನಿಂದ ಆಗಿದೆ. ಕಾಂಗ್ರೆಸ್​ನವರು ದೇಶದ ಸಂಪತ್ತು ಹೀರಿ ಬೆಳೆದಿದ್ದಾರೆ. ಇವರು ಲಂಚ ತೆಗೆದುಕೊಂಡು, ಮಾಡಬಾರದ್ದು ಮಾಡಿದ್ರು. 120 ಸ್ಥಾನ ಇದ್ದ ಕಾಂಗ್ರೆಸ್ 80 ಸ್ಥಾನ ಯಾಕೆ ಬಂದಿದೆ? ಚೆನ್ನಾಗಿ ಆಡಳಿತ ಕೊಟ್ಟಿದ್ದರೆ ಜನ ಯಾಕೆ ಸೋಲಿಸಿದರು. ಕೆ.ಆರ್​.ರಮೇಶ್ ಕುಮಾರ್ ಅವರು ಹೇಳಿದ್ದು ಸರಿಯಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದರು.  ಧರ್ಮದ ಆಧಾರದಲ್ಲಿ ದೇಶ ಒಡೆದುಕೊಟ್ಟೋರು ಇವರು. ಆ ಶಾಪಾನ ಅನುಭವಿಸುತ್ತಿದ್ದಾರೆ ಎಂದು ಕಾಂಗ್ರೆಸ್​ಗೆ ಕೌಂಟರ್ ಕೊಟ್ಟರು. ಸಿದ್ಧರಾಮಯ್ಯನವರು ತಿರಂಗಾ ಧ್ವಜವನ್ನ ಹೀಗಳಿಯುತ್ತಿದ್ದಾರೆ. ಬಿಜೆಪಿ, ಆರ್​​ಎಸ್​​ಎಸ್​ಗೆ ಇವರಲ್ಲ ಪಾಠ ಹೇಳೋದು. ಯಾಕಂದ್ರೆ ಸ್ವಾತಂತ್ರ್ಯ ಬಂದ ಬಳಿಕ ಧರ್ಮದ ಆಧಾರದಲ್ಲಿ ದೇಶ ಒಡೆದುಕೊಟ್ಟೋರು ಇವರು. ಆ ಶಾಪಾನ ಅನುಭವಿಸುತ್ತಿದ್ದಾರೆ ಈಗ. ಹೀಗಾಗಿ ಇವರಿಂದ ಯಾವ ಪಾಠದ ಅವಶ್ಯಕತೆಯಿಲ್ಲ ಎಂದು ಹೇಳಿದರು.

ಚಾಮರಾಜ ಪೇಟೆಯ ಈದ್ಗಾ ಮೈದಾನ ವಿವಾದ ಕುರಿತು ಮಾತನಾಡಿದ್ದು, ರೆವಿನ್ಯೂ ಇಲಾಖೆ ಜಾಗ ಅಂತ ಈಗಾಗಲೇ ಡಿಸೈಡ್ ಆಗಿದೆ. ರೆವಿನ್ಯೂ ಇಲಾಖೆ ಅದನ್ನ ಡಿಸೈಡ್ ಮಾಡುತ್ತೆ. ಅಲ್ಲಿ ಯಾವ ಧ್ವಜ ಹಾರಿಸ್ಬೇಕು. ಏನ್ ಪೂಜೆ ಮಾಡಬೇಕು ಅನ್ನೋದನ್ನ. ನಾವು ಗೃಹ ಇಲಾಖೆ ರಕ್ಷಣೆ ಕೊಡೋ ಕೆಲಸವನ್ನ ಮಾಡ್ತೇವೆ. ಗಣೇಶ್ ಉತ್ಸವಕ್ಕೆ ಅವಕಾಶ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ರೆವಿನ್ಯೂ ಇಲಾಖೆ ಡಿಸಿಷನ್ ತಗೊಳ್ಳುತ್ತೆ ಎಂದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.