ಮಂತ್ರಾಲಯ ರಾಯರ ದರ್ಶನ ಪಡೆದ ರಿಷಿ ಸುನಕ್ ಪೋಷಕರು, ಬೀಗರಿಗೆ ಸುಧಾಮೂರ್ತಿ ಸಾಥ್

ಜಿ-20 ಶೃಂಗಸಭೆ ಹಿನ್ನೆಲೆ ಬೆಂಗಳೂರಿಗೆ ಆಗಮಿಸಿದ್ದ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಅವರ ಪೋಷಕರು ಭಾರತದಲ್ಲೇ ಉಳಿದುಕೊಂಡಿದ್ದು ರಾಯರ ದರ್ಶನ ಪಡೆದಿದ್ದಾರೆ. ಯಶ್ವೀರ್ ಸುನಕ್ ಹಾಗೂ ಉಷಾ ಸುನಕ್ ಅವರು ಮಂತ್ರಾಲಯ ರಾಯರ ದರ್ಶನ ಪಡೆದಿದ್ದಾರೆ. ಇವರೊಂದಿಗೆ ಇನ್ಫೋಸಿಸ್ ಮುಖ್ಯಸ್ಥೆ ಹಾಗೂ ಬೀಗತಿಯಾಗಿರುವ ಸುಧಾಮೂರ್ತಿ ಅವರು ಕೂಡ ಜೊತೆ ಆಗಮಿಸಿದ್ದರು.

ಮಂತ್ರಾಲಯ ರಾಯರ ದರ್ಶನ ಪಡೆದ ರಿಷಿ ಸುನಕ್ ಪೋಷಕರು, ಬೀಗರಿಗೆ ಸುಧಾಮೂರ್ತಿ ಸಾಥ್
ಮಂತ್ರಾಲಯ ರಾಯರ ದರ್ಶನ ಪಡೆದ ರಿಷಿ ಸುನಕ್ ಪೋಷಕರು
Follow us
ಭೀಮೇಶ್​​ ಪೂಜಾರ್
| Updated By: ಆಯೇಷಾ ಬಾನು

Updated on:Sep 13, 2023 | 11:36 AM

ರಾಯಚೂರು, ಸೆ.13: ನವದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ(G20) ಭಾಗಿಯಾಗಲು ಭಾರತಕ್ಕೆ ಬಂದಿದ್ದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ದಂಪತಿ ಜೊತೆ ರಿಷಿ ಸುನಾಕ್(Rishi Sunak) ಅವರ ತಂದೆ-ತಾಯಿ ಕೂಡ ಭಾರತಕ್ಕೆ ಬಂದಿದ್ದಾರೆ. ಸದ್ಯ ರಿಷಿ ಸುನಾಕ್ ಅವರ ಕುಟುಂಬ ಅನೇಕ ಆಧ್ಯಾತ್ಮಿಕತೆಯಲ್ಲಿ ತೊಡಗಿಕೊಳ್ಳುತ್ತಿದ್ದು ಅನೇಕ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ(Rishi Sunak Parents). ಶೃಂಗಸಭೆ ವೇಳೆ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದ ರಿಷಿ ಸುನಕ್‌ ದಂಪತಿ ಫೋಟೋಗಳು ವೈರಲ್ ಆಗಿದ್ದವು. ಬಳಿಕ ರಿಷಿ ಸುನಾಕ್ ಅವರ ತಾಯಿ ಉಷಾ ಸುನಕ್‌ ಅವರು ತಮ್ಮ ಬೀಗತಿ ಸುಧಾಮೂರ್ತಿ(Sudha Murthy) ಅವರೊಂದಿಗೆ ಬೆಂಗಳೂರಿನ ಶಾಸಕ ಉದಯ ಗರುಡಾಚಾರ್‌ ಅವರ ಮನೆಯಲ್ಲಿ ಕೃಷ್ಣ ಜನ್ಮಾಷ್ಟಮಿಯಲ್ಲಿ ಭಾಗಿಯಾಗಿದ್ದು ಜನರ ಮೆಚ್ಚುಗೆಗೆ ಕಾರಣವಾಗಿತ್ತು. ಇದೀಗ ರಿಷಿ ಸುನಾಕ್ ಅವರ ಪೋಷಕರು ಮಂತ್ರಾಲಯದ ರಾಯರ ದರ್ಶನ ಮಾಡಿದ್ದಾರೆ.

ರಾಯರ ದರ್ಶನ ಮಾಡಿದ ಬ್ರಿಟನ್ ಪ್ರಧಾನಿ ಪೋಷಕರು

ಜಿ-20 ಶೃಂಗಸಭೆ ಹಿನ್ನೆಲೆ ಬೆಂಗಳೂರಿಗೆ ಆಗಮಿಸಿದ್ದ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಅವರ ಪೋಷಕರು ಭಾರತದಲ್ಲೇ ಉಳಿದುಕೊಂಡಿದ್ದು ರಾಯರ ದರ್ಶನ ಪಡೆದಿದ್ದಾರೆ. ಯಶ್ವೀರ್ ಸುನಕ್ ಹಾಗೂ ಉಷಾ ಸುನಕ್ ಅವರು ಮಂತ್ರಾಲಯ ರಾಯರ ದರ್ಶನ ಪಡೆದಿದ್ದಾರೆ. ಇವರೊಂದಿಗೆ ಇನ್ಫೋಸಿಸ್ ಮುಖ್ಯಸ್ಥೆ ಹಾಗೂ ಬೀಗತಿಯಾಗಿರುವ ಸುಧಾಮೂರ್ತಿ ಅವರು ಕೂಡ ಜೊತೆ ಆಗಮಿಸಿದ್ದರು. ಮೊದಲು ರಾಯರ ದರ್ಶನ ಪಡೆದು, ಬಳಿಕ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಆಶಿರ್ವಾದ ಪಡೆದರು. ಸುಧಾಮೂರ್ತಿ ಹಾಘೂ ರಿಷಿ ಸುನಕ್ ಪೋಷಕರಿಗೆ ಶ್ರೀಗಳು ಆಶಿರ್ವಚನ ಮಾಡಿದರು. ನಂತರ ಪರಿಮಳ ಪ್ರಸಾದ ಹಾಗೂ ಮಂತ್ರಾಕ್ಷತೆ ನೀಡಿ ಆಶಿರ್ವದಿಸಿದರು. ಮತ್ತೊಂದೆಡೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಗೆ ಮಂತ್ರಾಕ್ಷತೆ, ಪರಿಮಳ ಪ್ರಸಾದ ತಲುಪಿಸಲು ತಿಳಿಸಿದರು.

UK PM Rishi sunak parents visits raichur raghavendra swamy mutt mantralayam with infosys sudha murthy

ಮಂತ್ರಾಲಯ ರಾಯರ ದರ್ಶನ ಪಡೆದ ರಿಷಿ ಸುನಕ್ ಪೋಷಕರು

ಇದನ್ನೂ ಓದಿ: ಅಕ್ಷರಧಾಮ ದೇವಾಲಯದಲ್ಲಿ ಆರತಿ ಬೆಳಗಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಂಪತಿ

ಜಿ-20 ಶೃಂಗಸಭೆಯಲ್ಲಿ ಭಾಗಿಯಾಗಲು ಭಾರತಕ್ಕೆ ಬಂದಿದ್ದ ರಿಷಿ ಸುನಕ್ ದಂಪತಿ ಜೊತೆ ಪೋಷಕರು ಕೂಡ ಭಾರತಕ್ಕೆ ಬಂದಿದ್ದರು. ಅಂದಿನಿಂದ ಒಂದಲ್ಲಾ ಒಂದು ರೀತಿಯಲ್ಲಿ ಸುನಕ್ ಕುಟುಂಬ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಬ್ರಿಟನ್​ನಲ್ಲಿದ್ದರು ಬ್ರಿಟಿಷರ ಸಂಪ್ರದಾಯಕ್ಕೆ ಮಾರು ಹೋಗದೆ ಭಾರತೀಯ ಪಾರಂಪರೆಯ ಮೇಲಿನ ಗೌರವವನ್ನು ಎತ್ತಿ ಹಿಡಿದಿದ್ದಾರೆ. ನಾನೊಬ್ಬ ಹಿಂದೂ ಎಂಬ ಸಂಪ್ರದಾಯವನ್ನು ಆಚರಿಸಿಕೊಂಡು ಬಂದಿರೋದು ಭಾರತೀಯರಿಗೆ ಸುನಕ್ ಕುಟುಂಬದ ಮೇಲಿನ ಗೌರವ ಹೆಚ್ಚಿಸಿದೆ. ರಿಷಿ ಸುನಕ್ ದಂಪತಿ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಉಷಾ ಸುನಕ್ ಅವರು ಶಾಸಕ ಉದಯ ಗರುಡಾಚಾರ್‌ ಅವರ ಮನೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃಷ್ಣ ಜನ್ಮಾಷ್ಟಮಿಯಲ್ಲಿ ಭಾಗಿಯಾಗಿ ಭಾರತೀಯ ಸಂಪ್ರದಾಯದಂತೆ ಅರಿಶಿಣ-ಕುಂಕುಮ ತೆಗೆದುಕೊಂಡಿದ್ದು, ಇದೀಗ ರಾಯರ ದರ್ಶನ ಮಾಡಿದ್ದು ಭಾರತೀಯ ಸಂಪ್ರದಾಯದ ಬಗೆಗೆ ಸುನಕ್ ಕುಟುಂಬಕ್ಕಿರುವ ಗೌರವವನ್ನು ತೋರಿಸುತ್ತದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:22 am, Wed, 13 September 23

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ