Karnataka Rain Updates: ನಾಳೆ(ಡಿ.15) ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ಕರ್ನಾಟಕದಲ್ಲಿ ಇನ್ನೂ 5 ದಿನ ಮಳೆ

ಮಾಂಡಸ್ ಚಂಡಮಾರುತದಿಂದ (Cyclone Mandous) ಕರ್ನಾಟಕದ ಅನೇಕ ಕಡೆ ಮಳೆಯಾಗುತ್ತಿದೆ. ಇನ್ನು ಕೆಲವೆಡೆ ಮೋಡಕವಿದ ಜೊತೆ ಶೀತಗಾಳಿ ಬೀಸುತ್ತಿದ್ದ, ಚಳಿಗೆ ಜನ ತತ್ತರಿಸಿದ್ದಾರೆ. ಇದರ ಮಧ್ಯೆ ಇನ್ನೂ ಐದು ಕರ್ನಾಟಕದಲ್ಲಿ ಮಳೆಯಾಗಲಿದೆ.

Karnataka Rain Updates: ನಾಳೆ(ಡಿ.15) ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ಕರ್ನಾಟಕದಲ್ಲಿ ಇನ್ನೂ 5 ದಿನ ಮಳೆ
ಮಳೆ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Dec 14, 2022 | 5:17 PM

ಬೆಂಗಳೂರು: ಕರ್ನಾಟಕದಲ್ಲಿ (Karnataka) ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಮೋಡಕವಿದ ವಾತಾವರಣ, ತುಂತುರು ಮಳೆ(Rain), ವಿಪರೀತ ಚಳಿಯ ವಾತಾವರಣ ಇದೆ. ಇದರಿಂದ ಜನ ತಲ್ಲಣಗೊಂಡಿದ್ದಾರೆ. ಇದರ ಮಧ್ಯೆ ರಾಜ್ಯದಲ್ಲಿ ಇನ್ನೂ  ಐದು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ಚಳಿ, ಗಾಳಿ, ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞ ಆರ್.ಪ್ರಸಾದ್ ಟಿವಿ9ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಗಾಳಿ-ಮಳೆಯಿರಲಿ, ಕೊರೆಯುವ ಚಳಿಯಿರಲಿ; ಜನರಿಗೆ ಕೆಲಸಕ್ಕೆ ಹೋಗುವುದು ಮಾತ್ರ ತಪ್ಪದು!

ಸಮುದ್ರ ಮಟ್ಟದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಹಿನ್ನೆಲೆಯಲ್ಲಿ ಬಂಗಾಳಕೊಲ್ಲಿಯಲ್ಲಿ ನಾಳೆ (ಡಿಸೆಂಬರ್ 15) ವಾಯುಭಾರ ಕುಸಿತವಾಗಲಿದೆ. ಹೀಗಾಗಿ ರಾಜ್ಯದಲ್ಲಿ ಇನ್ನೂ 5 ದಿನಗಳ ಕಾಲ ಮಳೆ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಜ್ಞ ಪ್ರಸಾದ್ ಮಾಹಿತಿ ತಿಳಿಸಿದರು.

ಬೆಂಗಳೂರಿನ ಸುತ್ತಮುತ್ತಲೂ 1ರಿಂದ 2 ಸೆಂ.ಮೀ. ಮಳೆಯಾಗಿದೆ. ಇಂದು(ಡಿ.14) ಕರಾವಳಿ ಭಾಗದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ನಿನ್ನೆ(ಡಿ.13) ಕಾರಾವಳಿ ಭಾಗದಲ್ಲಿ ಹಲವು ಕಡೆ ಹಗುರ ಮಳೆಯಾಗಿದೆ ಎಂದರು.

ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ 8 ಸೆಂ ಮೀ ಮಳೆಯಾಗಿದ್ದರೆ, ಬೆಂಗಳೂರಿನ ಸುತ್ತಮುತ್ತಲಿನಲ್ಲಿ ಒಂದರಿಂದ ಎರಡು ಸೆಂ ಮೀ ಮಳೆಯಾಗಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಮೊಡ ಕವಿದ ವಾತಾವರಣ ಇರಲಿದ್ದು ಕೆಲವೊಮ್ಮೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ನಗರದಲ್ಲಿಂದು ಗರಿಷ್ಠ ತಾಪಮಾಮ 25 ಡಿಗ್ರಿ, ಕನಿಷ್ಟ ತಾಪಾಮಾನ 19 ಡಿಗ್ರಿ ಇರಲಿದೆ ಎಂದು ಹೇಳಿದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 5:08 pm, Wed, 14 December 22