ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಕೊರೊನಾ ವೈರಸ್ ಹಬ್ಬುತ್ತಿರುವ ಈ ಸಂದರ್ಭದಲ್ಲಿ ಭಾರಿ ಮಳೆಯಾಗಿರುವುದರಿಂದ ವೈರಸ್ ಮತ್ತಷ್ಟು ವ್ಯಾಪಕವಾಗಿ ಹರಡಬಹುದು ಎಂದು ಜನ ಆತಂಕಕ್ಕೆ ಒಳಗಾಗಿದ್ದಾರೆ. ಆದ್ರೆ ಸಮಾಧಾನಕರ ಸಂಗತಿ ಏನಂದ್ರೆ ಮಳೆಗೂ ಕೊರೊನಾ ಸೋಂಕು ಹರಡುವುದಕ್ಕೂ ಯಾವುದೇ ಸಂಬಂಧವಿಲ್ಲ.
ಉಷ್ಣಾಂಶದಲ್ಲಿ ಏರುಪೇರಾದರೆ ಮಾತ್ರ ಕೊರೊನಾ ವೈರಸ್ ಹೆಚ್ಚಳವಾಗುವ ಸಾಧ್ಯತೆಯಿದೆ. ಸದ್ಯ ಮಳೆ ಬಂದು ನಿಂತರೂ ವಾತಾವರಣದಲ್ಲಿ ಉಷ್ಣಾಂಶ ಇದೇ ರೀತಿ ಇದೆ. ಇದರಿಂದ ಡೆಂಘೀ ಜ್ವರ ಬರುವ ಸಾಧ್ಯತೆ ಇರುತ್ತದೆ. ವಾತಾವರಣದಲ್ಲಿ ಇದೇ ರೀತಿ ಉಷ್ಣಾಂಶವಿದ್ದರೂ ಸಹ ಆತಂಕಪಡುವಂತಿಲ್ಲ ಎಂದು ಟಿವಿ9ಗೆ ಆರೋಗ್ಯ ಇಲಾಖೆಯ ಹಿರಿಯ ವೈದ್ಯರು ಮಾಹಿತಿ ನೀಡಿದ್ದಾರೆ.
Published On - 4:06 pm, Wed, 29 April 20