ಅಥಣಿಯಲ್ಲಿ ಮರಳು ದಂಧೆ: ತಹಶೀಲ್ದಾರ್‌ ಮೇಲೆ ಟ್ರ್ಯಾಕ್ಟರ್ ಬಿಟ್ಟ ದುರುಳ

ಅಥಣಿಯಲ್ಲಿ ಮರಳು ದಂಧೆ: ತಹಶೀಲ್ದಾರ್‌ ಮೇಲೆ  ಟ್ರ್ಯಾಕ್ಟರ್ ಬಿಟ್ಟ ದುರುಳ

ಬೆಳಗಾವಿ: ಮರಳು ದಂಧೆ ತಡೆಯಲು ಹೋದ ತಹಶೀಲ್ದಾರ್ ಕಾರಿನ ಮೇಲೆ ಖದೀಮರು ಟ್ರ್ಯಾಕ್ಟರ್ ಹತ್ತಿಸಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶಿರೂರು ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ ತಹಶೀಲ್ದಾರ್ ದುಂಡಪ್ಪ ಕೋಮಾರ್ ಅಪಾಯದಿಂದ ಪಾರಾಗಿದ್ದಾರೆ.

ಲಾಕ್​ಡೌನ್ ಇದ್ದರೂ ಶಿರೂರು ಗ್ರಾಮದ ಬಳಿ ಅಕ್ರಮವಾಗಿ ಹಳ್ಳದಿಂದ ಮರಳು ತೆಗೆಯುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ್ ದಾಳಿ ನಡೆಸಿದ್ದಾರೆ. ಈ ವೇಳೆ ತಹಶೀಲ್ದಾರ್ ಕಾರಿಗೆ ಟ್ರ್ಯಾಕ್ಟರ್ ಗುದ್ದಿಸಿ ಮರಳು ದಂಧೆಕೋರ ಬಾಳು ಹಾಜಾರೆ ಪರಾರಿಯಾಗಿದ್ದಾನೆ.

ಘಟನೆಯಲ್ಲಿ ತಹಶೀಲ್ದಾರ್ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Published On - 4:27 pm, Wed, 29 April 20

Click on your DTH Provider to Add TV9 Kannada