ಬೆಂಗಳೂರು: ನಗರದ ಹಲವೆಡೆ ಇಂದೂ ಮಳೆ (Rain) ಯ ಆರ್ಭಟ ಜೋರಾಗಿದೆ. ಸತತ ಮೂರು ದಿನಗಳಿಂದ ರಾಜಾಧಾನಿಯಲ್ಲಿ ಅಬ್ಬರಿಸುತ್ತಿರುವ ವರುಣಾ, ಕಬ್ಬನ್‌ಪಾರ್ಕ್, ರೇಸ್ ಕೋರ್ಸ್, ಮೆಜೆಸ್ಟಿಕ್, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ಲಾಲ್ಬಾಗ್, ಜಯನಗರ, ಕಾರ್ಪೋರೇಷನ್ , ವಿಲ್ಸನ್ ಗಾರ್ಡಾನ್ , ಶಾಂತಿನಗರ, ಕೋರಮಂಗಲ, ಶಿವಾನಂದ್ ಸರ್ಕಲ್ , ಒಕಲಿ ಪುರಂ ಸೇರಿದಂತೆ ಹಲವೆಡೆ ಭಾರಿ ಮಳೆ ಆರ್ಭಟ ಜೋರಾಗಿದೆ. ಮಳೆಯಿಂದಾಗಿ ಜನರ ವೀಕೆಂಡ್ ಸುತ್ತಾಟಕ್ಕೆ ಬ್ರೇಕ್ ಬಿದಿದ್ದು, ಟ್ರಾಫಿಕ್ನಲ್ಲಿ ಸಿಲುಕಿ ವಾಹನ ಸವಾರರು ಪೇಚಾಡುತ್ತಿದ್ದಾರೆ. ಟ್ರಿನಿಟಿ ಸರ್ಕಲ್, ಎಮ್ ಜಿ ರಸ್ತೆ, ಮೆಜೆಸ್ಟಿಕ್, ಗಾಂಧಿನಗರ, ಜಯನಗರ, ಬಸವೇಶ್ವರ ವೃತ್ತ, ಶಿವಾನಂದ ಸರ್ಕಲ್, ವಸಂತ ನಗರ ಸುತ್ತಮುತ್ತ ಧಾರಾಕಾರ ಗಾಳಿ ಮಳೆ ಸುರಿಯುತ್ತಿದ್ದು, ರಾಜ್ಯದಲ್ಲಿ ಮುಂದಿನ ಎರಡು ದಿನವೂ ಭಾರೀ ಮಳೆ ಜತೆಗೆ ಗುಡುಗು ಹಾಗೂ ಸಿಡಿಲಿನ ಮುನ್ನೆಚ್ಚರಿಕೆಯನ್ನೂ ಹವಾಮಾನ ಇಲಾಖೆ ನೀಡಿದೆ.
ಧರ್ಮರಾಯ ಸ್ವಾಮಿ ಕರಗ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ದ್ರೌಪದಿ ಅಮ್ಮನ ಶಕ್ತ್ಯೋತ್ಸವಕ್ಕೆ ಕೊನೆ ಹಂತದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕರಗ ಮಹೋತ್ಸವದ ಸಿದ್ಧತೆಗೆ ಮಳೆರಾಯ ಅಡ್ಡಿಯಾಗಿದೆ. ಈ ಬಾರಿ ಅದ್ದೂರಿ ಕರಗಕ್ಕೆ ಸಿದ್ಧತೆ ನಡೆದಿತ್ತಿರುವಾಗ್ಲೇ ವರುಣಾರ್ಭಟ ಶುರುವಾಗಿದೆ. ಶಿವಮೊಗ್ಗ ನಗರದಲ್ಲಿ ಧಾರಾಕಾರ ಗಾಳೆ ಮಳೆ ಹಿನ್ನಲೆ ಹೆಂಚಿನ ಮನೆಯ ಮೇಲೆ ತೆಂಗಿನ ಮರ ಮುರಿದು ಬಿದ್ದಿದೆ. ಮನೆಯಲ್ಲಿರುವ ಗೃಹಬಳಕೆ ವಸ್ತುಗಳಿಗೆ ಹಾನಿಯಾಗಿದೆ. ಗರದ ವಿವಿಧಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹಾವೇರಿಯಲ್ಲಿ ಮಳೆರಾಯನ ಆರ್ಭಟ ಶುರುವಾಗಿದ್ದು, ಗಾಳಿ, ಗುಡುಗಿನೊಂದಿಗೆ ಮಳೆರಾಯನ ಆಗಮನವಾಗಿದೆ. ಬಿಸಿಲಿನಿಂದ ತತ್ತರಿಸಿದ್ದ ಜನರಿಗೆ ತಂಪೆರೆದ ಮಳೆರಾಯ. ಅರ್ಧ ಗಂಟೆಯಿಂದ ಗಾಳಿ, ಗುಡುಗಿನೊಂದಿಗೆ ಮಳೆರಾಯ ಆರ್ಭಟಿಸುತ್ತಿದ್ದಾನೆ.
ಗದಗ ಜಿಲ್ಲೆಯಲ್ಲೂ ಗುಡುಗು ಸಹಿತ ಹಲವಡೆ ಮಳೆಯಾಗಿದ್ದು, ಸಿಡಿಲು ಬಡಿದು ಮೂವರ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಎರಡು, ಮುಂಡರಗಿ ತಾಲೂಕಿನ ಓರ್ವರು ಮೃತಪಟ್ಟಿದ್ದಾರೆ. ಮುರುಗೇಶ್ ಹೊಸಮನಿ 44, ಬಾಬು ದೊಡ್ಡಮನಿ 55 ಹಾಗೂ ಹನಮಪ್ಪ ಮನ್ನಾಪುರ ಎನ್ನುವವರ ಸಾವಿಗೀಡಾದವರು.
ಇದನ್ನೂ ಓದಿ:
IPL 2022 DC vs RCB playing XI: RCB ತಂಡದಲ್ಲಿ ಒಂದು ಬದಲಾವಣೆ: ಉಭಯ ತಂಡಗಳ ಪ್ಲೇಯಿಂಗ್ 11
ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ 2 ಕೋಟಿ ರೂ. ಬಿಡುಗಡೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ