ಜಮ್ಮು ಮತ್ತು ಕಾಶ್ಮೀರ(Jammu And Kashmir)ದ ರಜೌರಿ(Rajouri)ಯಲ್ಲಿ ಉಗ್ರರು ಹಾಗೂ ಯೋಧರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಉತ್ತರ ಪ್ರದೇಶ ಮೂಲದ ಕ್ಯಾಪ್ಟನ್ ಶುಭಂ ಗುಪ್ತಾ ಅವರ ಕುಟುಂಬಕ್ಕೆ ಯುಪಿ ಸರ್ಕಾರವು 50 ಲಕ್ಷ ರೂ. ನೆರವು ಘೋಷಿಸಿದೆ.
ಎನ್ಕೌಂಟರ್ನಲ್ಲಿ ಉತ್ತರ ಪ್ರದೇಶದ ಕ್ಯಾಪ್ಟನ್ ಶುಭಂ ಗುಪ್ತಾ ಹಾಗೂ ಕರ್ನಾಟಕದ ಮೈಸೂರು ಮೂಲದ ಕ್ಯಾಪ್ಟನ್ ಪ್ರಾಂಜಲ್(Pranjal) ಸೇರಿದಂತೆ ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿದ್ದರು.
ಉತ್ತರ ಪ್ರದೇಶ ಸರ್ಕಾರವು ಎನ್ಕೌಂಟರ್ನಲ್ಲಿ ಮಡಿದ ಕ್ಯಾಪ್ಟನ್ ಶುಭಂ ಗುಪ್ತಾ ಅವರ ಕುಟುಂಬಕ್ಕೆ 50 ಲಕ್ಷ ರೂ. ನೆರವು ಘೋಷಿಸಿದೆ.
ಅಷ್ಟೇ ಅಲ್ಲದೆ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ಮತ್ತು ಆಗ್ರಾದ ರಸ್ತೆಯೊಂದಕ್ಕೆ ಕ್ಯಾಪ್ಟನ್ ಗುಪ್ತಾ ಅವರ ಹೆಸರನ್ನು ಕೂಡ ನಾಮಕರಣ ಮಾಡುವ ಭರವಸೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.
ಅಷ್ಟೇ ಅಲ್ಲದೆ ಉತ್ತರ ಪ್ರದೇಶ ಸರ್ಕಾರವು ಹುತಾತ್ಮ ಯೋಧನ ಕುಟುಂಬ ಸದಸ್ಯರೊಂದಿಗೆ ಸದಾ ಇರುತ್ತದೆ ಎನ್ನುವ ಭರವಸೆಯನ್ನೂ ನೀಡಿದ್ದಾರೆ. ಆದರೆ ಯೋಧ ಪ್ರಾಂಜಲ್ ಕುಟುಂಬಕ್ಕೆ ಕರ್ನಾಟಕ ಸರ್ಕಾರವು ಯಾವುದೇ ನೆರವು ಘೋಷಿಸಿಲ್ಲ ಎಂಬುದು ವಿಪರ್ಯಾಸ.
ಮತ್ತಷ್ಟು ಓದಿ: ರಾಜೌರಿಯಲ್ಲಿ ಹುತಾತ್ಮರಾದ ಕನ್ನಡಿಗ ಕ್ಯಾಪ್ಟನ್ ಪ್ರಾಂಜಲ್, ನಂದನವನದಲ್ಲಿ ನೀರವ ಮೌನ
ಕ್ಯಾಪ್ಟನ್ ಪ್ರಾಂಜಲ್ ಕುಟುಂಬದ ನೆರವಿಗೆ ಬಾರದ ಕರ್ನಾಟಕ ಸರ್ಕಾರ
ರಜೌರಿ ಎನ್ಕೌಂಟರ್ನಲ್ಲಿ ಪ್ರಾಣಬಿಟ್ಟ ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬದ ನೆರವಿಗೆ ಕರ್ನಾಟಕ ಸರ್ಕಾರ ಇದುವರೆಗೂ ಬಂದಿಲ್ಲ. ಯೋಗಿ ಸರ್ಕಾರದಂತೆ ಹುತಾತ್ಮ ಯೋಧ ಕುಟುಂಬದ ರಕ್ಷೆಯಾಗಿ ಕರ್ನಾಟಕ ಸರ್ಕಾರ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಲ್ಲುವುದು ಯಾವಾಗ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.
ಪ್ರಾಂಜಲ್ ವಿದ್ಯಾಭ್ಯಾಸ
ಪ್ರಾಂಜಲ್ ನರ್ಸರಿಯಿಂದ ಹತ್ತನೇ ತರಗತಿವರೆಗೆ ಮಂಗಳೂರಿನಲ್ಲಿ ಓದಿದ್ದರು, ಸಿಇಟಿ ಸೀಟು ಬೆಂಗಳೂರಿನ ಆರ್ವಿ ಕಾಲೇಜಿನಲ್ಲಿ ಸಿಕ್ಕಿತ್ತು, ಆದರೆ ಸೇನೆಗೆ ಸೇರಬೇಕೆಂಬುದು ಮೂರನೇ ತರಗತಿಯಿಂದಲೂ ಇದ್ದ ಕನಸಾಗಿತ್ತು. ಹಠ ಹೊತ್ತು ಸೇನೆ ಸೇರಿದ್ದರು. ಬೇಕಾದ ಶಿಕ್ಷಣ ಪಡೆದು, ಮೆಡಿಕಲ್ ಟೆಸ್ಟ್ ಮಾಸ್ ಮಾಡಿ 2014ರ ಜೂನ್ನಲ್ಲಿ ಸೇನೆಗೆ ಸೇರಿದ್ದರು.
ಪ್ರಾಂಜಲ್ ಮದುವೆಯಾಗಿ 2 ವರ್ಷವಾಗಿತ್ತು
ಕ್ಯಾಪ್ಟನ್ ಪ್ರಾಂಜಲ್ ಮದುವೆಯಾಗಿ 2 ವರ್ಷವಾಗಿತ್ತು, ಪತ್ನಿ ಚೆನ್ನೈನಲ್ಲಿ ಪಿಎಚ್.ಡಿ ಮಾಡುತ್ತಿದ್ದಾರೆ.
ನಾನೇ ಫೋನ್ ಮಾಡುತ್ತೇನೆ ಎಂದವನು ಮಾಡಲೇ ಇಲ್ಲ
ನಾಲ್ಕು ದಿನಗಳ ಹಿಂದೆ ಕರೆ ಮಾಡಿದ್ದ, ಇಂಟೆಲಿಜೆನ್ಸ್ ಇನ್ಪುಟ್ ಇದೆ, ನಾನೇ ಫೋನ್ ಮಾಡುತ್ತೇನೆ ಎಂದವನು ಮತ್ತೆ ಕರೆ ಮಾಡಲೇ ಇಲ್ಲ, ಕೆಲವೊಮ್ಮೆ ಮೆಸೇಜ್ ಮಾಡುತ್ತಿದ್ದ, ಎಂದು ತಂದೆ ಬೇಸರ ವ್ಯಕ್ತಪಡಿಸಿದ್ದಾರೆ.
ನನ್ನ ಮಗನಂತೆ ಅನೇಕ ಸೈನಿಕರಿದ್ದಾರೆ
ನನ್ನ ಮಗ ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾನೆ, ಆತಂಕವಾದಿಗಳನ್ನು ಮಟ್ಟ ಹಾಕಲು ಹೋಗಿದ್ದ, ಅವನ ಥರ ಹಲವು ಸೈನಿಕರಿದ್ದಾರೆ ಆದರೆ ನಮಗೆ ನಮ್ಮ ಮಗ ಒಬ್ಬನೇ ಕಾಣಿಸುತ್ತಾನೆ ಎಂದರು.
ಇಂದು ಬೆಂಗಳೂರಿಗೆ ತಲುಪಲಿರುವ ಪಾರ್ಥಿವ ಶರೀರ
ಎನ್ಕೌಂಟರ್ನಲ್ಲಿ ಹುತಾತ್ಮರಾದ ಪ್ರಾಂಜಲ್ ಅವರ ಪಾರ್ಥಿವ ಶರೀರ ಇಂದು ಸಂಜೆ ಬೆಂಗಳೂರು ತಲುಪಲಿದೆ. ಜಮ್ಮು ಮತ್ತು ಕಾಶ್ಮೀರದಿಂದ ವಿಶೇಷ ವಿಮಾನದ ಮೂಲಕ ಭಾರತೀಯ ಸೇನೆಯು ಕಳುಹಿಸಿಕೊಡಲಿದೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:15 pm, Fri, 24 November 23