ರಾಮನಗರ ವಂಡರ್​ಲಾ ಅಮ್ಯೂಸ್ ಮೆಂಟ್​ ಪಾರ್ಕ್​ನಲ್ಲಿ ದುರ್ಘಟನೆ; ಮೇಲಿಂದ ಬಿದ್ದು ವ್ಯಕ್ತಿ ಸಾವು

ರಾಮನಗರ ತಾಲೂಕಿನ ಬಿಡದಿ ಬಳಿಯಿರುವ ವಂಡರ್​ಲಾ ಅಮ್ಯೂಸ್ ಮೆಂಟ್​ ಪಾರ್ಕ್​​ (Ramanagara Wonderla Amusement Park) ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯು, ಮೇಲಿಂದ ಬಿದ್ದು ಸಾವನ್ನಪ್ಪಿದ್ದ ಧಾರುಣ ಘಟನೆ ನಿನ್ನೆ(ಆ.21) ನಡೆದಿದೆ. ಜಡೇನಹಳ್ಳಿ ನಿವಾಸಿ ರಾಜು(35) ಮೃತ ದುರ್ದೈವಿ. ​

ರಾಮನಗರ ವಂಡರ್​ಲಾ ಅಮ್ಯೂಸ್ ಮೆಂಟ್​ ಪಾರ್ಕ್​ನಲ್ಲಿ ದುರ್ಘಟನೆ; ಮೇಲಿಂದ ಬಿದ್ದು ವ್ಯಕ್ತಿ ಸಾವು
ಮೃತ ವ್ಯಕ್ತಿ
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 23, 2023 | 5:13 PM

ರಾಮನಗರ, ಆ.22: ಸಾವು ಹೇಗೆ, ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಹೌದು, ರಾಮನಗರ ತಾಲೂಕಿನ ಬಿಡದಿ ಬಳಿಯಿರುವ ವಂಡರ್​ಲಾ ಅಮ್ಯೂಸ್ ಮೆಂಟ್​ ಪಾರ್ಕ್​​ (Ramanagara Wonderla Amusement Park) ನಲ್ಲಿ  ಕೆಲಸ ಮಾಡುವ ವ್ಯಕ್ತಿಯೊಬ್ಬರು ಪಾರ್ಕ್‌ನ ಪಕ್ಕದಲ್ಲಿರುವ ವಂಡರ್‌ಲಾ ಕ್ವಾಟ್ರಸ್‌ನಲ್ಲಿ ಕೆಲಸ ಮಾಡುವ ವೇಳೆ ಮೇಲೆಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆ ನಿನ್ನೆ(ಆ.21) ನಡೆದಿದೆ. ಜಡೇನಹಳ್ಳಿ ನಿವಾಸಿ ರಾಜು(35) ಮೃತ ದುರ್ದೈವಿ. ಈ ಕುರಿತು ಬಿಡದಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆ.

ಕಾರು, ಬೈಕ್ ನಡುವೆ ಡಿಕ್ಕಿ; ತಪ್ಪಿದ ಅನಾಹುತ

ಗದಗ: ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾದ ಘಟನೆ ಗದಗ ನಗರದ ದೋಬಿ ಘಾಟ್ ಬಳಿ ನಡೆದಿದೆ. ಪೆಟ್ರೋಲ್ ಬಂಕ್​ನಿಂದ ಕಾರು ಹೊರ ಬರುತ್ತಿದ್ದಾಗ ಬೈಕ್​ ಡಿಕ್ಕಿಯಾಗಿದೆ. ಈ ವೇಳೆ ಕಾರಿನ ನಿಯಂತ್ರಣ ತಪ್ಪಿ, ಡಿವೈಡರ್ ಮೇಲೆ ಕಾರ್ ಹತ್ತಿಸಿ ಪುನಃ ಪೆಟ್ರೋಲ್ ಬಂಕ್ ಒಳಗಡೆ ನುಗ್ಗಿದೆ. ಅಪಘಾತದ ಸಂದರ್ಭದಲ್ಲಿ ಎರಡು ವಾಹನಗಳು ನಿಧಾನವಾಗಿದ್ದರಿಂದ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಈ ದೃಶ್ಯ ಪೆಟ್ರೋಲ್ ಬಂಕ್​ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:ಯುಎಸ್ ನಲ್ಲಿ ದಾವಣಗೆರೆಯ ಟೆಕ್ಕಿ ಕುಟುಂಬ ಸಾವು, ಸಿದ್ದರಾಮಯ್ಯರನ್ನು ಭೇಟಿಯಾಗಿ ಪಾರ್ಥಿವ ಶರೀರಗಳನ್ನು ತರಿಸಲು ನೆರವಾಗುವಂತೆ ಕೋರಿದ ಟೆಕ್ಕಿ ತಾಯಿ

ಅನುಮಾನಾಸ್ಪದ‌ ರೀತಿಯಲ್ಲಿ ವಿದ್ಯಾರ್ಥಿನಿ‌ ಶವ ಪತ್ತೆ

ಬೆಂಗಳೂರು ಗ್ರಾಮಾಂತರ: ಅನುಮಾನಾಸ್ಪದ‌ ರೀತಿಯಲ್ಲಿ ವಿದ್ಯಾರ್ಥಿನಿ‌ ಶವ ಪತ್ತೆಯಾದ ಘಟನೆ ಹೊಸಕೋಟೆ ತಾಲೂಕಿನ ಕಣ್ಣೂರಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೌದು, ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಸಿಕ್ಕಿದ್ದು, ಹಿಮಾ (18 ) ಮೃತ ವಿದ್ಯಾರ್ಥಿನಿ. ಈಕೆ ಮುಳಬಾಗಿಲು ತಾಲೂಕಿನ ನಂಗಲಿ ಮೂಲದ ದ್ವೀತಿಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಅಜ್ಜಿ ಮನೆಯಲ್ಲಿದ್ದುಕೊಂಡು ಹೊಸಕೋಟೆಯಲ್ಲಿ ವ್ಯಾಸಾಂಗ ಮಾಡುತ್ತದ್ದಳು.

ಅಜ್ಜಿ ಬೆಳಗ್ಗೆ ಹೂವಿನ ವ್ಯಾಪಾರಕ್ಕೆ ಹೋದ ವೇಳೆ ಘಟನೆ

ಹೌದು, ಅಜ್ಜಿ ಬೆಳಗ್ಗೆ ಹೂವಿನ ವ್ಯಾಪಾರಕ್ಕೆ ಹೋದ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಅಜ್ಜಿ ವ್ಯಾಪಾರಕ್ಕೆ ಹೋದ ಕೆಲ ಸಮಯ ಬಳಿಕ ಮೊಮ್ಮಗಳಿಗೆ ಪೋನ್ ಮಾಡಿದ್ದಾರೆ. ಈ ವೇಳೆ ಹಿಮಾ ಕರೆ ಸ್ವೀಕರಿಸಿಲ್ಲ. ಹೀಗಾಗಿ ಪಕ್ಕದ ಮನೆಯವರನ್ನು ಕಳಿಸಿ ನೋಡಿದಾಗ ಮನೆಯಲ್ಲಿ ಶವವಾಗಿ ಪತ್ತೆಯಾಗಿದೆ. ಮಗಳ ಅಕಾಲಿಕ ಸಾವು ಕಂಡು ತಂದೆಯ ಆಕ್ರಂಧನ ಮುಗಿಲುಮುಟ್ಟಿದೆ. ಈ ಕುರಿತು ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:45 pm, Tue, 22 August 23