ಚನ್ನಪಟ್ಟಣ ಬೊಂಬೆಗೆ ಅಪ್ಘಾನಿಸ್ತಾನ ಫಿದಾ! ಬೊಂಬೆ ತಯಾರಿಕೆ ನೋಡಲು ಬಂದ ಕೌನ್ಸಿಲರ್

| Updated By: ಗಂಗಾಧರ​ ಬ. ಸಾಬೋಜಿ

Updated on: Feb 28, 2024 | 8:55 PM

ಗೊಂಬೆಗಳೆಂದರೆ ನೆನಪಾಗುವುದು ಕರ್ನಾಟಕದ ರಾಮನಗರ ಜಿಲ್ಲೆಯ ಚನ್ನಪಟ್ಟಣ. ಇಲ್ಲಿ ತಯಾರಿಸುವ ಗೊಂಬೆಯ ನಯ, ನಾಜೂಕಿಗೆ ಮರುಳಾಗದವರೇ ಇಲ್ಲ. ಅಮೆರಿಕ, ಬ್ರಿಟನ್‌, ಶ್ರೀಲಂಕಾ ದೇಶಗಳ ಪ್ರಧಾನಿಗಳೂ ಇವುಗಳಿಗೆ ಮನಸೋತಿದ್ದಾರೆ. ಹಳ್ಳಿಯಿಂದ ದಿಲ್ಲಿಯವರೆಗೆ ಜನಪ್ರೀತಿ ಗಳಿಸಿರುವ ಈ ಬೊಂಬೆಗಳ ಪರಂಪರೆಯೇ ರೋಚಕವಾಗಿದೆ. ಚನ್ನಪಟ್ಟಣ ಬೊಂಬೆ ಕೇವಲ ನೋಡುವುದಕ್ಕೆ ಮಾತ್ರ ಚಂದವಲ್ಲ. ಮಕ್ಕಳ ಮನ ಬದಲಾಯಿಸುವ ಗುಣ ಈ ಚನ್ನಪಟ್ಟಣಗಳ ಗೊಂಬೆಗಳಲ್ಲಿದೆ. ಅಚ್ಚರಿ ಎನ್ನಿಸಿದರೂ ಸತ್ಯ.

ಚನ್ನಪಟ್ಟಣ ಬೊಂಬೆಗೆ ಅಪ್ಘಾನಿಸ್ತಾನ ಫಿದಾ! ಬೊಂಬೆ ತಯಾರಿಕೆ ನೋಡಲು ಬಂದ ಕೌನ್ಸಿಲರ್
ಬೊಂಬೆ ನಿರ್ಮಾಣ‌ ವೀಕ್ಷಣೆ ಮಾಡುತ್ತಿರುವ ಕೌನ್ಸಿಲರ್ ಜಾಕಿಯಾ ವರ್ದಕ್
Follow us on

ರಾಮನಗರ, ಫೆಬ್ರವರಿ 28: ಚನ್ನಪಟ್ಟಣದ ಗೊಂಬೆ (Channapatna Dolls) ಕೇವಲ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಜನಪ್ರೀತಿ ಗಳಿಸಿದೆ. ವಿವಿಧ ದೇಶದ ಗಣ್ಯ ವ್ಯಕ್ತಿಗಳಿಗೆ ಈ ಚನ್ನಪಟ್ಟಣದಲ್ಲಿ ತಯಾರಾದ ಗೊಂಬೆಗಳನ್ನು ಉಡುಗೊರೆಯಾಗಿ ನೀಡದ ಸಾಕಷ್ಟು ಉದಾಹರಣೆಗಳು ಇವೆ. ಇದೀಗ ಚನ್ನಪಟ್ಟಣ ಗೊಂಬೆಗಳ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಚನ್ನಪಟ್ಟಣದ ಗೊಂಬೆಗಳು ಕೇವಲ ಅಂದ-ಚಂದಕ್ಕೆ ಮಾತ್ರ ಸೀಮಿತವಾಗಿಲ್ಲ. ಮಕ್ಕಳ ಮನ ಬದಲಾಯಿಸುವ ಗುಣ ಈ ಚನ್ನಪಟ್ಟಣಗಳ ಗೊಂಬೆಗಳಲ್ಲಿದೆ. ಇತ್ತೀಚೆಗೆ ಅಪಘಾನಿಸ್ತಾನಕ್ಕೆ ಕಳುಹಿಸಲಾಗಿದ್ದ ಚನ್ನಪಟ್ಟಣದ ಗೊಂಬೆಗಳಿಂದ ಅಪರಾಧ ಕೃತ್ಯದ‌ ಮಕ್ಕಳಲ್ಲಿ(ಬಾಲಾಪರಾಧಿಗಳು) ಮನಃಪರಿವರ್ತನೆಯಾಗಿದೆ. ಚನ್ನಪಟ್ಟಣ ಬೊಂಬೆಯೊಂದಿಗೆ ಕಾಲ ಕಳೆದ ಮಕ್ಕಳಲ್ಲಿ ವಿನೋದ ಭಾವನೆ ಕಂಡುಬಂದಿದೆಯಂತೆ. ಈ ಹಿನ್ನೆಲೆಯಲ್ಲಿ ಅಪಘಾನಿಸ್ತಾನದ ಕೌನ್ಸಿಲರ್ ಜನರಲ್ ಜಾಕೀಯಾ ವರ್ದಕ್ ಅವರು ಜಿಲ್ಲೆಯ ಚನ್ನಪಟ್ಟಣ ತಾಲೂಕಿನ‌ ಮುನಿಯಪ್ಪನ ದೊಡ್ಡಿಗೆ ಭೇಟಿ ನೀಡಿ ಗೊಂಬೆ, ಆಟಿಕೆಗಳನ್ನು ಹೇಗೆ ತಯಾರಿಸುತ್ತಾರೆ ಎಂದು ವೀಕ್ಷಣೆ ಮಾಡಿದ್ದಾರೆ.

ಇತ್ತೀಚೆಗೆ ಅಪಘಾನಿಸ್ತಾನದ ಕೌನ್ಸಲರ್ ಜನರಲ್ ಜಾಕೀಯಾ ವರ್ದಕ್​ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದರು.​ ಈ ವೇಳೆ ಚನ್ನಪಟ್ಟಣ ತಾಲೂಕಿನ‌ ಮುನಿಯಪ್ಪನ ದೊಡ್ಡಿಗೆ ಭೇಟಿ ನೀಡಿ, ಮೂರು ಲಕ್ಷ ರೂ. ಮೌಲ್ಯದ 500 ಬೊಂಬೆ ಒದಗಿಸಲು ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಡಿಸೆಂಬರ್​ 2023‌‌ ರಂದು 150‌ ಆಟಿಕೆಗಳನ್ನು ಯುನೈಟೆಡ್ ನೇಷನ್ಸ್ ಮುಖಾಂತರ ಅಪಘಾನಿಸ್ತಾ‌ನಕ್ಕೆ‌ ಕಳುಹಿಸಲಾಗಿತ್ತು.

ಇದನ್ನೂ ಓದಿ: ಚೇತರಿಕೆ ಹಾದಿಯಲ್ಲಿ ಚನ್ನಪಟ್ಟಣದ ಗೊಂಬೆ ವ್ಯಾಪಾರ: ಕಾರ್ಮಿಕರ ಕೊರತೆಯದ್ದೇ ಚಿಂತೆ

ಚನ್ನಪಟ್ಟಣ ಆಟಿಕೆಗಳ‌ ಜತೆ ರಿಮ್ಯಾಂಡ್ ಹೋಂನ ಮಕ್ಕಳು ಕಾಲ ಕಳೆದಿದ್ದರು. ಮಕ್ಕಳು ಈ ಆಟಿಕೆಗಳಲ್ಲಿ ವಿಶೇಷ ವ್ಯಸ್ತರಾಗಿದ್ದರು. ಹೀಗಾಗಿ‌ ಹೇಗೆ ತಯಾರು ಮಾಡುತ್ತಾರೆ ಅಂತ ನೋಡಲು ಜಾಕೀಯ ವರ್ದಕ್ ಬಂದಿದ್ದರು. ಗೊಂಬೆ ಮಾಡುವ ಸ್ಥಳಕ್ಕೆ ತೆರಳಿ‌ ಆಟಿಕೆ ನಿರ್ಮಾಣ‌ವನ್ನು ಬೆರಗುಗಣ್ಣಿನಿಂದ‌ ಚನ್ನಪಟ್ಟಣ ಬೊಂಬೆ ನಿರ್ಮಾಣ‌ವನ್ನು ನೋಡಿದ್ದರು.

ಇದನ್ನೂ ಓದಿ: ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ..ತನ್ನ ನೋವಿನ ಕಥೆ..

ಚನ್ನಪಟ್ಟಣ ಬೊಂಬೆಗಳು, ರಾಜ್ಯ, ದೇಶವಲ್ಲದೇ ವಿಶ್ವಮಟ್ಟದಲ್ಲೂ ಕೂಡ ಪ್ರಸಿದ್ಧಿ ಪಡೆದಿವೆ. ಮುದ್ದಾದ, ಪುಟಾಣಿ ಬೊಂಬೆಗಳು ಎಂಥವರನ್ನು ಕೂಡ ತನ್ನತ್ತ ಸೆಳೆಯುತ್ತದೆ. ಹೀಗಾಗಿ, ಚನ್ನಪಟ್ಟಣದ ಬಳಿಯಿರುವ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೂರಾರು ಬೊಂಬೆ ಅಂಗಡಿಗಳನ್ನು ನೋಡಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:48 pm, Wed, 28 February 24