AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಯಕರ್ತನ ಮೇಲೆ ಹಲ್ಲೆ: ಡಿಕೆ ಬ್ರದರ್ಸ್​ಗೆ ಮಂಜುನಾಥ್ ಟಾಂಗ್

ಈ ಬಾರಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಹೈ ವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್ ಪಕ್ಷದಿಂದ ಮೂರು ಬಾರಿಯ ಸಂಸದ ಆಗಿರುವ ಡಿಕೆ ಸುರೇಶ್ ಕಣಕ್ಕಿಳಿದಿದ್ದರೆ, ಇತ್ತ ಬಿಜೆಪಿಯಿಂದ ಪ್ರಖ್ಯಾತ ಹೃದಯ ರೋಗ ತಜ್ಞ ಡಾ. ಸಿಎನ್ ಮಂಜುನಾಥ್ ಅವರು ಮೊದಲು ಬಾರಿ ಅಖಾಡಕ್ಕೆ ಇಳಿದಿದ್ದಾರೆ. ಈ ಮಧ್ಯೆ ಮೈತ್ರಿ ಕಾರ್ಯಕರ್ತರ ಮೇಲೆ ಹಲ್ಲೆ ವಿಚಾರವಾಗಿ ಡಿಕೆ ಬ್ರದರ್ಸ್​ಗೆ ಮಂಜುನಾಥ್ ಟಾಂಗ್ ಕೊಟ್ಟಿದ್ದಾರೆ.

ಕಾರ್ಯಕರ್ತನ ಮೇಲೆ ಹಲ್ಲೆ: ಡಿಕೆ ಬ್ರದರ್ಸ್​ಗೆ ಮಂಜುನಾಥ್ ಟಾಂಗ್
ಸಿಎನ್​ ಮಂಜುನಾಥ್​
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Apr 11, 2024 | 5:32 PM

Share

ರಾಮನಗರ, ಏ.11: ಮೈತ್ರಿ ಕಾರ್ಯಕರ್ತರ ಮೇಲೆ ಹಲ್ಲೆ ವಿಚಾರ ‘ಇದು ಸಂಸ್ಕೃತಿ ಅಲ್ಲ, ಹೆದರಿಸುವುದು, ಹಲ್ಲೆ ಮಾಡೋದು ಸರಿಯಲ್ಲ ಎಂದು ಡಾ.‌ಸಿ ಎ ನ್ ಮಂಜುನಾಥ್ (Dr. C N Manjunath) ಹೇಳಿದರು. ಚನ್ನಪಟ್ಟಣ (Channapatana) ತಾಲೂಕಿನ‌ ಹೊಂಗನೂರಿನಲ್ಲಿ ಮಾತನಾಡಿದ ಅವರು, ‘ಹತಾಶೆಯಿಂದ ಇದನ್ನೆಲ್ಲಾ ಮಾಡುತ್ತಿದ್ದಾರೆ. ಚುನಾವಣೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಅವರಿಗೆ ಗೊತ್ತಾಗಿರಬೇಕು ಎಂದು ಟಾಂಗ್​ ಕೊಟ್ಟಿದ್ದಾರೆ.

‘ಚುನಾವಣೆ ಆರೋಗ್ಯಕರವಾಗಿ ಎದುರಿಸಬೇಕೇ ಹೊರತು, ಈ ರೀತಿ ಅಡ್ಡದಾರಿ ಹಿಡಿಯೋದಲ್ಲ. ಈ ಸಂಬಂಧ ಡಿಐಜಿ ಯವರಿಗೂ ಮಾತನಾಡಿದ್ದೇನೆ. ಇದನ್ನು ನಾನು ಖಂಡಿಸುತ್ತೇನೆ. ಈ‌ ರೀತಿ ಚುನಾವಣೆನಾ?, ಹೆದರಿಸುವುದು, ಹಲ್ಲೆ ಮಾಡೋದು ಸರಿಯಲ್ಲ. ಪ್ರಜಾಪ್ರಭುತ್ವಕ್ಕೆ ಇದು ಸರಿಯಲ್ಲ. ಈ ಘಟನೆ ಕುರಿತು ಚುನಾವಣಾ ಆಯೋಗಕ್ಕೂ ನಾವು ಗಮನಕ್ಕೆ ತರುತ್ತೇವೆ ಎಂದರು. ಇದೇ ವೇಳೆ ಡಾಕ್ಟರ್ ವರ್ಸಸ್ ಡಾಕು ಎಂಬ ಪದ ಬಳಕೆ ವಿಚಾರ, ‘ಡಾಕು ಪದ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ ಡಾ. ಸಿ ಎನ್ ಮಂಜುನಾಥ್, ‘ನಾನು ಆ ಭಾಷೆ ಒಪ್ಪುವುದಿಲ್ಲ. ವೈಯಕ್ತಿಕ ಟೀಕೆಗಳನ್ನು ಮಾಡಬಾರದು, ನಮ್ಮ ಸಿದ್ಧಾಂತದ ಬಗ್ಗೆ ಮಾತಾಡಬೇಕು ವಿನಃ, ವೈಯಕ್ತಿಕ‌ ಟೀಕೆ‌ ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಬೆಂಗಳೂರು ಗ್ರಾಮಾಂತರ ಮತದಾರರ ಮೇಲಿನ ಕೋಪಕ್ಕೆ ಡಿಕೆ ಸಹೋದರರ ಗೂಂಡಾಗಿರಿ: ಆರ್ ಅಶೋಕ ಕಿಡಿ

ಘಟನೆ ವಿವರ

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಂಚೆಪಾಳ್ಯದಲ್ಲಿ ಏಪ್ರಿಲ್ 11 ರಂದು ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ಪರ ಪ್ರಚಾರ ನಡೆಸಿದ್ದಕ್ಕೆ ವ್ಯಕ್ತಿ ಓರ್ವರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿತ್ತು. ಕೆಂಪನಹಳ್ಳಿ ಗ್ರಾಮ ಪಂಚಾಯತಿ ಜೆಡಿಎಸ್ ಬೆಂಬಲಿತ ಸದಸ್ಯ ಮಂಜುನಾಥ್ ಎಂಬವರು ಹಲ್ಲೆಗೊಳಗಾದವರು. ಇನ್ನು ಬೋರೇಗೌಡ ಮತ್ತು ಅವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಗಾಯಗೊಂಡ ವ್ಯಕ್ತಿಯನ್ನ ಕುಣಿಗಲ್ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ