ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಾಟ ಮಂತ್ರಗಳ ಕಾಟ! ಭಯಭೀತರಾದ ವಾಹನ ಸವಾರರು
ರಾಮನಗರ(Ramanagara) ಸಮೀಪ ಹೆದ್ದಾರಿ ಬಳಿ ಮಾಟ ಮಂತ್ರ(Mata Mantra) ಗಳ ಕಾಟ ಹೆಚ್ಚಾಗಿದ್ದು, ಮಣ್ಣಿನಿಂದ ಮಾಡಿರುವ ಮೂರ್ತಿಗಳು ಗ್ರಾಮಸ್ಥರನ್ನು ಭಯವಾಗುವಂತೆ ಮಾಡಿದೆ. ಇಂತಹ ಅಕ್ರಮ ಚಟುವಟಿಕೆಗಳಿಗೆ ಕೂಡಲೇ ಬ್ರೇಕ್ ಹಾಕಬೇಕಾಗಿದೆ.
ರಾಮನಗರ, ಡಿ.01: ಬೆಂಗಳೂರು -ಮೈಸೂರು ಹೆದ್ದಾರಿ (Bengaluru Mysuru highway) ಯಲ್ಲಿ ಪ್ರೇತಾತ್ಮಗಳ ಭಯಕ್ಕೆ ವಾಹನ ಸವಾರರು ಕಂಗಾಲಾಗಿದ್ದಾರೆ. ರಾಮನಗರ(Ramanagara) ಸಮೀಪ ಹೆದ್ದಾರಿ ಬಳಿ ಮಾಟ ಮಂತ್ರ(Mata Mantra) ಗಳ ಕಾಟ ಹೆಚ್ಚಾಗಿದ್ದು, ಮಣ್ಣಿನಿಂದ ಮಾಡಿರುವ ಮೂರ್ತಿಗಳು ಗ್ರಾಮಸ್ಥರನ್ನು ಭಯವಾಗುವಂತೆ ಮಾಡಿದೆ. ಇಂತಹ ಅಕ್ರಮ ಚಟುವಟಿಕೆಗಳಿಗೆ ಕೂಡಲೇ ಬ್ರೇಕ್ ಹಾಕಬೇಕಾಗಿದೆ.
ಈ ಆತಂಕ ಮೂಡಿಸಿರುವ ಮೂರ್ತಿಗಳಲ್ಲಿ ಒಂದು ಗಂಡು ಹಾಗೂ ಇನ್ನೊಂದು ಹೆಣ್ಣು ಮೂರ್ತಿ ಇದೆ. ಅದಕ್ಕೆ ಕುಂಕುಮ, ಅರಿಶಿಣ, ಬಳೆ ಹಾಗೂ ಕೊರಳಲಿ ವಿಚಿತ್ರವಾದ ದಾರವನ್ನು ಅಳವಡಿಕೆ ಮಾಡಲಾಗಿದೆ. ಈ ಹಿನ್ನಲೆ ಮೂರ್ತಿಗಳು ವಿಚಿತ್ರ ಹಾಗೂ ಭಯ ಮೂಡುವಂತಿದೆ. ಅದರ ಕಣ್ಣುಗಳು ನೋಡಿ ಸವಾರರು ಭಯಭೀತರಾಗಿದ್ದು, ಕೂಡಲೇ ಮೂರ್ತಿಗಳನ್ನು ತೆರವು ಮಾಡಿ, ಶುದ್ಧಿಕರಣಗೊಳಿಸಿ ಲೈಟ್ ಹಾಕುವಂತೆ ಸ್ಥಳೀಯರ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಹೊಳೆನರಸೀಪುರ: ಖಬರಸ್ತಾನದಲ್ಲಿ ಸಮಾಧಿ ಮುಂದೆ ಜೀವಂತ ವ್ಯಕ್ತಿಗಳ ಫೋಟೋ ಇಟ್ಟು ಮಾಟ ಮಂತ್ರ
ಮಾಟ-ಮಂತ್ರ ಎಂದರೇನು?
ಈ ಮಾಟ – ಮಂತ್ರ (ಮಂತ್ರವಿದ್ಯೆ) ಎನ್ನುವುದು ಒಂದು ವಿಶಿಷ್ಟ ಬಗೆಯ ಮಾಂತ್ರಿಕ ಶಕ್ತಿಯನ್ನು ಉಪಯೋಗಿಸಿಕೊಂಡು ಜನರನ್ನು ಹಿಂಸಿಸುವ ಅಥವಾ ಅವರ ಆಸ್ತಿಪಾಸ್ತಿಯನ್ನು ಹಾನಿಗೊಳಿಸುವ, ಪ್ರಪಂಚದಾದ್ಯಂತ ಕಂಡುಬರುವ, ಎಲ್ಲ ಆದಿವಾಸಿಗಳಲ್ಲಿಯೂ ಇರುವ ಒಂದು ಸಂಪ್ರದಾಯ ಮತ್ತು ನಂಬಿಕೆ(ವಾಮಾಚಾರ). ಇದು ಧರ್ಮದಷ್ಟೇ ಪ್ರಾಚೀನವಾದುದು. ಒಂದು ಕಾಲಕ್ಕೆ ಧರ್ಮಕ್ಕೂ, ಮಾಟ-ಮಂತ್ರಗಳಿಗೂ ಸಂಬಂಧವೇ ಇಲ್ಲ ಎಂದು ಭಾವಿಸಲಾಗಿತ್ತು. ಅನಂತರ ಅವೆರಡೂ ಅವಿಭಾಜ್ಯ ಅಂಗಗಳು ಎನ್ನುವಷ್ಟರ ಮಟ್ಟಿಗೆ ಅವುಗಳ ಸಂಬಂಧವನ್ನು ಕಂಡುಕೊಳ್ಳಲಾಯಿತು. ಫ್ರೇಜರನ ಪ್ರಕಾರ ದೇವತಾರಾಧೆನೆಯ ಮುಂದಿನ ಘಟ್ಟವೇ ಮಾಟ-ಮಂತ್ರ ಮುಂತಾದವು. ಮಂತ್ರ ವಿದ್ಯೆಯನ್ನು ಆತ ಪ್ರಾಚೀನ ವಿಜ್ಞಾನ ಎಂದೇ ಕರೆದಿದ್ದಾನೆ. ಧರ್ಮಕ್ಕೂ ಮಂತ್ರವಿದ್ಯೆಗೂ ಸಂಬಂಧವಿರುವಂತೆಯೇ ಮಂತ್ರವಿದ್ಯೆಗೂ ವಿಜ್ಞಾನಕ್ಕೂ ಹಲವಂಶಗಳಲ್ಲಿ ಸಂಬಂಧವಿದೆ ಎಂಬುದನ್ನು ಗುರುತಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ