ಮೈಸೂರು: ಪತಿ ಮನೆ ಮುಂದೆ ಮಾಟ ಮಂತ್ರ ಮಾಡಿಸಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಮಹಿಳೆ
ಕೆಲವು ದಿನಗಳ ಹಿಂದೆ ಪತಿಯಿಂದ ದೂರವಾಗಿದ್ದ ಹೆಂಡತಿ ತನ್ನ ಪತಿ ಮನೆ ಮುಂದೆ ಪ್ರತಿ ಅಮಾವಾಸ್ಯೆಯ ರಾತ್ರಿ ಮಾಟ ಮಂತ್ರ ಮಾಡಿಸುತ್ತಿದ್ದಳಂತೆ. ನಿನ್ನೆ ಕೂಡ ಮಾಟ ಮಂತ್ರದ ಮಸ್ತುಗಳನ್ನು ಇಡಲು ಬಂದಾಗ ಸಾರ್ವಜನಿಕರು ಹಿಡಿದಿದ್ದಾರೆ.
ಮೈಸೂರು: ಅಮಾವಾಸ್ಯೆ ದಿನ ಪತಿ ಮನೆ ಮುಂದೆ ಹೆಂಡತಿ ಮಾಟ ಮಂತ್ರ(Mata Mantra) ಮಾಡಿಸಿದ್ದಾಳೆ ಎಂಬ ಆರೋಪ ಕೇಳಿ ಬಂದಿದ್ದು ಮಹಿಳೆಯನ್ನು ಸಾರ್ವಜನಿಕರು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಮೈಸೂರಿನ ನಾಚನಹಳ್ಳಿ ಪಾಳ್ಯದ 8ನೇ ಕ್ರಾಸ್‌ನಲ್ಲಿ ಸಮ್ರೀನ್ ಎಂಬ ಮಹಿಳೆ ತನ್ನ ಪರಿ ರಫಿ ಮನೆ ಮುಂದೆ ಮಾಟ ಮಾಡಿಸಿದ್ದಾಳೆ. ಪತಿಯ ಮನೆ ಮುಂದೆ ಮಡಿಕೆ, ನಿಂಬೆಹಣ್ಣು, ಮೆಣಸಿನಕಾಯಿ, ಉಪ್ಪು ಸೇರಿ ಹಲವು ವಸ್ತುಗಳನ್ನು ಹಾಕಲು ಬಂದಿದ್ದಾಗ ಸಾರ್ವಜನಿಕರು ಮಹಿಳೆಯನ್ನು ಹಿಡಿದಿದ್ದಾರೆ.
ಕೆಲವು ದಿನಗಳಿಂದ ಪತಿಯಿಂದ ದೂರವಾಗಿದ್ದ ಸಮ್ರೀನ್, ಪ್ರತಿ ಅಮಾವಾಸ್ಯೆ ದಿನ ರಫೀ ಮನೆ ಮುಂದೆ ಮಾಟ ಮಂತ್ರ ಮಾಡಿಸುತ್ತಿದ್ದಳಂತೆ. ಪ್ರತಿ ಅಮಾವಾಸ್ಯೆಯಂದು ರಫಿ ಮನೆ ಮುಂದೆ ಮಾಟ ಮಂತ್ರದ ವಸ್ತುಗಳು ಬಿದ್ದಿರುತ್ತಿದ್ದವು. ನಿನ್ನೆ(ಮಾರ್ಚ್ 21) ರಾತ್ರಿ ಮಾಟ ಮಂತ್ರದ ವಸ್ತುಗಳನ್ನು ಹಾಕುವಾಗ ರೆಡ್ ಹ್ಯಾಂಡ್ ಆಗಿ ಸಮ್ರೀನ್‌ಳನ್ನು ಹಿಡಿದಿದ್ದಾರೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಅಮಾವಾಸ್ಯೆಯ ರಾತ್ರಿಗಳನ್ನು ತಂತ್ರ-ಮಂತ್ರಗಳ ಸಿದ್ಧಿಗಾಗಿ ವಿಶೇಷ ದಿನವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ಅಮವಾಸ್ಯೆಯ ರಾತ್ರಿಯಂದು ಅನೇಕರು ಮಾಟ ಮಂತ್ರಗಳನ್ನು ಮಾಡಿಸುತ್ತಾರೆ. ಈ ದಿನಗಳಲ್ಲಿ ತಾಂತ್ರಿಕರು ಮತ್ತು ಅಘೋರಿಗಳು ಅಮವಾಸ್ಯೆಯ ರಾತ್ರಿ ತಮ್ಮ ಶಕ್ತಿಯನ್ನು ಸಾಧಿಸುತ್ತಾರೆ ಎನ್ನಲಾಗುತ್ತದೆ. ಕೆಲ ವಿಶೇಷ ದಿನಗಳಂದು ಅವರು ಮಾಡುವ ತಾಂತ್ರಿಕ ಸಾಧನೆ ವಿಶೇಷ ಫಲಿತಾಂಶಗಳನ್ನು ನೀಡುತ್ತದೆ ಎಂದು ತಂತ್ರ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಆದ್ರೆ ಅನೇಕರು ಈ ಮಾಟ-ಮಂತ್ರಗಳನ್ನು ನಂಬುವುದಿಲ್ಲ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ; ನಗರಸಭೆ ಸದಸ್ಯ, ಹೆಡ್ ಕಾನ್ಸ್ಟೇಬಲ್ ಬಂಧನ
ಕಾರು ಪಾರ್ಕಿಂಗ್ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಕಿರಿಕ್; ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಯುವಕನ ಬರ್ಬರ ಕೊಲೆ
ಬೆಂಗಳೂರು ಗ್ರಾಮಾಂತರ: ಅಕ್ಕ ಪಕ್ಕ ಹಿಂದೆ ಮುಂದೆ ಸಾಕಷ್ಟು ಜಮೀನು ಖಾಲಿ ಇದೆ. ಒಂದಲ್ಲ ಎರಡಲ್ಲ ಹತ್ತಾರು ಕಾರು ನಿಲ್ಲಿಸಿದರು ಸಾಕಾಗುವಂತಹ ಜಾಗ ಸಹ ಮನೆ ಮುಂದಿದೆ. ಆದರೆ ಇದೇ ಸಣ್ಣ ಜಮೀನಿನಲ್ಲಿ ನಿಲ್ಲಿಸಿದ್ದ ಕಾರಿನ ಪಾರ್ಕಿಂಗ್ ವಿಚಾರಕ್ಕೆ ಒಂದು ಜೀವ ಬಲಿಯಾಗಿದೆ. ಹೌದು ನಿನ್ನೆ(ಮಾ.19) ಸಂಜೆ ಮನೆ ಮುಂದೆ ನಿಲ್ಲಿಸಿದ್ದ ಕಾರು ಪಾರ್ಕಿಂಗ್ ವಿಚಾರಕ್ಕೆ ದಾಯಾದಿಗಳ ನಡುವೆ ದೊಡ್ಡ ಜಗಳ ನಡೆದಿದ್ದು ಯುವಕ ಅಸುನೀಗಿದ್ದಾನೆ. ಜಿಲ್ಲೆಯ ಹೊಸಕೋಟೆ ತಾಲೂಕಿನ ಮೇಡಿ ಮಲ್ಲಸಂದ್ರ ಗ್ರಾಮದ ಇಸ್ಮಾಯಿಲ್ ಖಾನ್ ನಿನ್ನೆ ರಾತ್ರಿ ಮನೆ ಬಳಿಗೆ ಕೆಲಸ ಮುಗಿಸಿಕೊಂಡು ಕಾರಿನಲ್ಲಿ ಬಂದಿದ್ದು ಮನೆ ಮುಂದಿರುವ ಖಾಲಿ ಜಾಗದಲ್ಲಿ ಕಾರನ್ನ ನಿಲ್ಲಿಸಿದ್ದಾನೆ. ಈ ವೇಳೆ ಕಾರು ನಿಲ್ಲಿಸಿದಕ್ಕೆ ಎದುರು ಮನೆಯ ಸೈಯದ್ ಅಕಿಲ್ ಶಾ ಕುಟುಂಬಸ್ಥರು ಕ್ಯಾತೆ ತೆಗೆದಿದ್ದು, ಇಬ್ಬರ ಕುಟುಂಬದವರ ನಡುವೆ ಮಾರಾಮಾರಿ ನಡೆದು ಇಸ್ಮಾಯಿಲ್ ಖಾನ್ ಎಂಬಾತ ಕೊಲೆಯಾಗಿದ್ದಾನೆ.
ಇಸ್ಮಾಯಿಲ್ ಖಾನ್ಗೆ ಡ್ರಾಗರ್ನಿಂದ ಇರಿದ ಪರಿಣಾಮ ಯುವಕ ತೀವ್ರ ರಕ್ತ ಸ್ರಾವದಿಂದ ಒದ್ದಾಡಿದ್ದು ನಂತರ ಕಾರಿನಲ್ಲಿ ಆಸ್ವತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದ್ದಾರೆ. ಆದರೆ ಅಷ್ಟರಲ್ಲೆ ತೀವ್ರ ರಕ್ತ ಸ್ರಾವವಾದ ಕಾರಣ ಇಸ್ಮಾಯಿಲ್ ಖಾನ್ ಪ್ರಾಣ ಪಕ್ಷಿ ಹಾರಿ ಹೋಗಿದ್ದು ಆಸ್ವತ್ರೆಗೆ ಸಾಗಿಸುವ ಮುನ್ನವೆ ಸಾವನ್ನಪಿದ್ದಾನೆ. ಇನ್ನು ಮೃತ ಇಸ್ಮಾಯಿಲ್ ಖಾನ್ ಮತ್ತು ಹಲ್ಲೆ ಮಾಡಿದವರೆಲ್ಲ ಒಂದೇ ಕುಟುಂಬದವರಾಗಿದ್ದು ಪಿತ್ರಾರ್ಜಿತ ಆಸ್ತಿಯಲ್ಲಿ ಮನೆ ಕಟ್ಟಿಕೊಂಡು ಒಂದೇ ಕಡೆ ವಾಸ ಮಾಡುತ್ತಿದ್ದಾರೆ. ಆದರೆ ಈ ನಡುವೆ ಮನೆ ಕಟ್ಟಿಕೊಂಡ ಜಾಗ ಹೊರತು ಪಡಿಸಿ ಉಳಿದಿದ್ದ ಖಾಲಿ ಜಾಗಕ್ಕಾಗಿ ಇಬ್ಬರ ನಡುವೆ ಕಳೆದ ಎರಡು ವರ್ಷದಿಂದ ಗಲಾಟೆ ನಡೆಯುತ್ತಾ ಬಂದಿತ್ತಂತೆ. ಇದೇ ವಿಚಾರವನ್ನೆ ಮನಸ್ಸಿನಲ್ಲಿಟ್ಟುಕೊಂಡಿದ್ದ ಸೈಯದ್ ಅಖಿಲ್ ಶಾ ಕುಟುಂಬಸ್ಥರು ಕಾರಿನ ವಿಚಾರಕ್ಕೆ ಕಿರಿಕ್ ಮಾಡಿ ಫ್ರೀ ಪ್ಲಾನ್ ಮಾಡಿಕೊಂಡು ಕೊಲೆ ಮಾಡಿದ್ದಾರೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:31 am, Wed, 22 March 23