ರಾಮನಗರ: ಕನ್ಯಾಕುಮಾರಿ ಟು ಕಾಶ್ಮೀರಕ್ಕೆ ಯುವತಿಯ ಬೈಕ್ ರೈಡ್! ವಯಸ್ಸಾದ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸದಿರಲು ಮನವಿ

ವೃದ್ಧಾಶ್ರಮ ಸಂಖ್ಯೆ ಹೆಚ್ಚಾಗಬಾರದು ಎನ್ನುವ ಆಶಯದೊಂದಿಗೆ ರಾಮನಗರದ ಚೈತ್ರ ರಾವ್ ಎಂಬುವವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬರೊಬ್ಬರಿ 3590 ಕಿ.ಮೀ ಬೈಕ್​ ರೈಡ್​ ಕೈಗೊಂಡಿದ್ದಾರೆ. ಇದಕ್ಕೆ ಅವರ ಪೋಷಕರು ಸಪೋರ್ಟ್​ ಮಾಡಿದ್ದು, ಅವರು ಕೂಡ ರಾಮನಗರದಲ್ಲಿ ವೃದ್ಧಾಶ್ರಮ ನಡೆಸುತ್ತಿದ್ದಾರೆ.

ರಾಮನಗರ: ಕನ್ಯಾಕುಮಾರಿ ಟು ಕಾಶ್ಮೀರಕ್ಕೆ ಯುವತಿಯ ಬೈಕ್ ರೈಡ್! ವಯಸ್ಸಾದ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸದಿರಲು ಮನವಿ
ರಾಮನಗರ ಯವತಿ ಚೈತ್ರಾ ರಾವ್​
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 25, 2023 | 3:08 PM

ರಾಮನಗರ, ಆ.25: ಇವತ್ತೀನ ಬ್ಯುಸಿ ಜೀವನದಲ್ಲಿ ನಮ್ಮನ್ನು ಹೆತ್ತು ಹೊತ್ತು ಸಾಕಿದ ತಂದೆ-ತಾಯಿಗಳಿಗೆ (Parents)ಸಮಯ ಕೊಡಲು ಆಗುತ್ತಿಲ್ಲ. ಕೆಲವರಂತು ನಮಗೂ ಕೂಡ ವಯಸ್ಸಾಗುತ್ತದೆ ಎಂಬುದನ್ನು ಮರೆತು, ನೋಡಿಕೊಳ್ಳಲು ಆಗದೇ ವೃದ್ಧಾಶ್ರಮಕ್ಕೆ (Old Age Home) ಸೇರಿಸುತ್ತಿದ್ದಾರೆ. ಹೀಗಿರುವಾಗ ಇಲ್ಲೊರ್ವ 24 ವರ್ಷದ ಯುವತಿ ರಾಮನಗರದ (Ramanagara)  ಚೈತ್ರ ರಾವ್ ಎಂಬುವವರು ‘ಮುಪ್ಪಾದ ತಂದೆ ತಾಯಿಯನ್ನು ಅನಾಥಾಶ್ರಮಕ್ಕೆ ಸೇರಿಸಬಾರದು ಎನ್ನುವ ಆಶಯದಿಂದ ಕನ್ಯಾಕುಮಾರಿ ಟು ಕಾಶ್ಮೀರಕ್ಕೆ ಬೈಕ್ ರೈಡ್ ಕೈಗೊಂಡಿದ್ದಾರೆ. ಬರೊಬ್ಬರಿ 3590 ಕಿ.ಮೀ ಏಕಾಂಗಿಯಾಗಿ ಬೈಕ್ ಚಲಾಯಿಸಲಿದ್ದಾರೆ.

ರಾಮನಗರದಲ್ಲಿ ವೃದ್ಧಾಶ್ರಮ ನಡೆಸುತ್ತಿರುವ ಚೈತ್ರಾ ರಾವ್ ಪೋಷಕರು

ಹೌದು, ಚೈತ್ರಾ ರಾವ್ ಪೋಷಕರು ರಾಮನಗರದಲ್ಲಿ ವೃದ್ಧಾಶ್ರಮ ನಡೆಸುತ್ತಿದ್ದಾರೆ. ಹೀಗಾಗಿ ತಂದೆ ತಾಯಿಯ ಆಶಯವನ್ನು ಎತ್ತಿ ಹಿಡಿಯಲು ಕನ್ಯಕುಮಾರಿಯಿಂದ ಕಾಶ್ಮೀರದ ವರೆಗೆ ಬೈಕ್ ರೈಡ್ ಮಾಡಲು ಸಜ್ಜಾಗಿದ್ದಾರೆ. ಅವರು ಸಂಚರಿಸುವ ಮಾರ್ಗ ಹೀಗಿದೆ. ಕನ್ಯಾಕುಮಾರಿಯಿಂದ ಸೇಲಂ(460km),‌ ಸೇಲಂ ನಿಂದ ಚಿತ್ರದುರ್ಗ(409km), ಚಿತ್ರದುರ್ಗ ಸೋಲಾಪುರ(420), ಸೋಲಾಪುರದಿಂದ ಧುಲೆ(460km), ಧುಲೆ- ಟು‌ಧೋನ್ಸಾವಸ್ (340km), ಧೋನ್ಸಾವಾಸ್ – ಕಿಶನಗಡ(412km), ಕಿಶನಗಡ ಟು ಖನೌರಿ(473km), ಖನೌರಿ ಟು ಉಧಮಪುರ(441), ಉಧಮ್ ಪುರ – ಶ್ರೀನಗರ(182) ತಲುಪಲಿದ್ದಾರೆ.

ಇದನ್ನೂ ಓದಿ:Old Man’s Story: ಒಬ್ಬ ಮಗ ಐಎಎಸ್, ಇನ್ನೊಬ್ಬ ಬ್ಯುಸಿನೆಸ್; ವೃದ್ಧಾಶ್ರಮಕ್ಕೆ ಬಂದು ಕಣ್ಣೀರಿಟ್ಟ ವೃದ್ಧ; ಕರುಳುಹಿಂಡುತ್ತದೆ ಇವರ ಕಥೆ

ನಾಳೆ ಬೆಳಿಗ್ಗೆಯಿಂದಲೇ ಕನ್ಯಾಕುಮಾರಿಯಿಂದ ಬಿಡಲಿರೋ ಚೈತ್ರಾ ರಾವ್​

ಇನ್ನು ತಂದೆ-ತಾಯಿಗಳ ಆಶಯವನ್ನು ಸಾಕಾರಗೊಳಿಸಲು ಚೈತ್ರಾ ರಾವ್​ ಅವರು ರಾಯಲ್ ಎನ್​ಫೀಲ್ಡ್ ಜೊತೆ ನಾಳೆ ಬೆಳಿಗ್ಗೆಯಿಂದಲೇ ಕನ್ಯಾಕುಮಾರಿಯಿಂದ ಸವಾರಿ ಮಾಡುವುದಕ್ಕೆ ರೆಡಿಯಾಗಿದ್ದಾರೆ. ಇನ್ನು ಕರ್ನಾಟಕದಿಂದ ಕನ್ಯಾಕುಮಾರಿ ವರೆಗೂ ರೈಲಿನಲ್ಲಿ‌ ಪ್ರಯಾಣ ಬೆಳಸಿದ್ದು, ನಾಳೆ(ಆ.26) ಅಲ್ಲಿಂದ ಕಾಶ್ಮೀರ ಕಡೆ ಏಕಾಂಗಿಯಾಗಿ ಬೈಕ್ ಸವಾರಿ ಆರಂಭಿಸಲಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ